ಬೆಂಗಳೂರು, ಮೇ 27: ಇತ್ತೀಚೆಗೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೆಲ್ಮೆಟ್ ಧರಿಸದೆ ಇರುವುದು, ಸೀಟ್ ಬೆಲ್ಟ್ ಹಾಕದೇ ಇರುವುದು, ಓವರ್ ಸ್ಪೀಡ್ ವಾಹನ ಚಲಾಯಿಸುವುದು ಇತ್ಯಾದಿ... ಹೀಗಾಗಿ ಪ್ರಯಾಣಿಕರು ಹಾಗೂ ಟ್ರಾಫಿಕ್ ಪೊಲೀಸರ ನಡುವೆ ವಾದ- ವಿವಾದಗಳು ನಡೆಯುತ್ತಲೇ ಇರುತ್ತವೆ. ಇದೀಗ ಬೆಂಗಳೂರಿನಲ್ಲಿ ಸಂಭವಿಸಿದ ಸಣ್ಣ ಅಪಘಾತವೊಂದರ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಆಟೋ ಚಾಲಕನಿಗೆ ಕಪಾಳಮೋಕ್ಷ ಮಾಡಿದ ಘಟನೆಯೊಂದು ನಡೆದಿದೆ. ಸದ್ಯ ಈ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ಟ್ರಾಫಿಕ್ ಪೊಲೀಸರ ನಡವಳಿಕೆ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಅಧಿಕಾರಿಯು ಆಟೋ ಚಾಲಕನೊಂದಿಗೆ ವಾದ ಮಾಡಿ ನಂತರ ಇದ್ದಕ್ಕಿದ್ದಂತೆ ಸಾರ್ವಜನಿಕವಾಗಿ ಆಟೋ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಈ ಘಟನೆಯನ್ನು ಹತ್ತಿರದ ಜನರು ರೆಕಾರ್ಡ್ ಮಾಡಿದ್ದು ವೈರಲ್ ಆಗುತ್ತಿದ್ದಂತೆ ಚರ್ಚೆಗೆ ಕಾರಣವಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರ ನಡವಳಿಕೆ ಮತ್ತು ಜವಾಬ್ದಾರಿಯ ಅನೇಕರು ಪ್ರಶ್ನೆ ಮಾಡಿದ್ದಾರೆ.
ವಿಡಿಯೋ ನೋಡಿ:
ಬೆಂಗಳೂರು ಭಾರೀ ಪ್ರಮಾಣದ ಸಂಚಾರ, ರಸ್ತೆ ಗುಂಡಿಗಳನ್ನು ಹೊಂದಿದ್ದು ಪ್ರಯಾಣ ಮಾಡಲು ದೊಡ್ಡ ಟಾಸ್ಕ್ ಎನ್ನಬಹುದು. ಅದರಲ್ಲೂ ದೈನಂದಿನ ಆಟೋ ಚಾಲಕರು ಸಾಮಾನ್ಯವಾಗಿ ದಟ್ಟಣೆಯ ರಸ್ತೆಗಳಲ್ಲಿ ತಾಳ್ಮೆಯಿಂದ ಪ್ರಯಾಣ ಮಾಡಬೇಕಾಗುತ್ತದೆ. ಇದೀಗ ಬೆಂಗಳೂರಿನ ರಸ್ತೆಯೊಂದರಲ್ಲಿ ಸಣ್ಣ ಅಪಘಾತ ನಡೆದ ಬೆನ್ನಲ್ಲೇ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸ್ ಅಧಿಕಾರಿ ಮತ್ತು ಆಟೋ ಚಾಲಕನ ನಡುವೆ ಮಾತಿನ ಚಕಮಕಿಯೊಂದು ನಡೆದಿದೆ.
Viral Video: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ರಂಪಾಟ; ಮಾಡಿದ ಸಬ್ ಇನ್ಸ್‌ಪೆಕ್ಟರ್ ಬಂಧನ, ವಿಡಿಯೋ ನೋಡಿ
ಈ ವೇಳೆ ಟ್ರಾಫಿಕ್ ಪೊಲೀಸ್ ಕೋಪಗೊಂಡಿದ್ದು ಸಾರ್ವಜನಿಕರ ಎದುರೇ ಆಟೋ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ್ದಾನೆ... ಅಪಘಾತಗಳನ್ನು ದೈಹಿಕ ಹಲ್ಲೆಯ ಮೂಲಕವಲ್ಲ, ಸರಿಯಾದ ಕಾನೂನು ಕ್ರಮಗಳ ಮೂಲಕ ನಿರ್ವಹಿಸಬೇಕು ಎಂದು ಹಲವಾರು ಈ ಬಗ್ಗೆ ಕಿಡಿಕಾರಿದ್ದಾರೆ. ಪೊಲೀಸರಿಂದ ಇಂತಹ ವರ್ತನೆ ನಿಜಕ್ಕೂ ನಾಚಿಕೆಗೇಡು. ಕಾನೂನು ರಕ್ಷಣೆ ಹೀಗೆ ಮಾಡಿದರೆ ಹೇಗೆ? ಎಂದು ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಇತರರು ಒತ್ತಾಯಿಸಿದರು. "ಆಟೋ ಚಾಲಕರು ಈಗಾಗಲೇ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಬಳಲುತ್ತಿದ್ದಾರೆ, ಈಗ ಇಂತಹ ಸಮಸ್ಯೆ ಕೂಡ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.