Viral News: 54 ಗಂಟೆಗಳ ಕಾಲ ಬಾವಿಯಲ್ಲಿ ಹೋರಾಟ; ಹಾವು ಕಚ್ಚಿದರೂ ಮಹಿಳೆ ಬದುಕಿದ್ದು ಹೇಗೆ?
ಮಹಿಳೆಯೊಬ್ಬರು ಪಾಳುಬಿದ್ದ ಬಾವಿಗೆ ಬಿದ್ದ 48 ವರ್ಷದ ಚೀನಾದ ಮಹಿಳೆಯೊಬ್ಬರು ಪವಾಡಸದೃಶವಾಗಿ ಪಾರಾಗಿದ್ದಾರೆ. 54 ಗಂಟೆಗಳ ಕಾಲ ಹಾವಿನೊಂದಿಗೆ ಸೆಣಸಾಡಿ ಮಹಿಳೆ ಬದುಕಿರುವುದು ಆಶ್ಚರ್ಯ ತರಿಸಿದೆ. ಸೆಪ್ಟೆಂಬರ್ 13 ರಂದು ಚೀನಾ ಫುಜಿಯಾನ್ ಪ್ರಾಂತ್ಯದ ಕ್ವಾನ್‌ಝೌದಲ್ಲಿ ಈ ಘಟನೆ ನಡೆದಿದೆ.

-

ಮಹಿಳೆಯೊಬ್ಬರು ಪಾಳುಬಿದ್ದ ಬಾವಿಗೆ ಬಿದ್ದ 48 ವರ್ಷದ ಚೀನಾದ ಮಹಿಳೆಯೊಬ್ಬರು ಪವಾಡಸದೃಶವಾಗಿ ಪಾರಾಗಿದ್ದಾರೆ. 54 ಗಂಟೆಗಳ ಕಾಲ ಹಾವಿನೊಂದಿಗೆ ಸೆಣಸಾಡಿ ಮಹಿಳೆ ಬದುಕಿರುವುದು ಆಶ್ಚರ್ಯ ತರಿಸಿದೆ. ಸೆಪ್ಟೆಂಬರ್ 13 ರಂದು ಚೀನಾ ಫುಜಿಯಾನ್ ಪ್ರಾಂತ್ಯದ ಕ್ವಾನ್‌ಝೌದಲ್ಲಿ ಈ ಘಟನೆ ನಡೆದಿದ್ದು, ಕಿನ್ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಆಳವಾದ ಬಾವಿಗೆ ಬಿದ್ದಿದ್ದಾಳೆ. ಇಡೀ ದಿನವಾದರೂ ಮಹಿಳೆ ಮನೆಗೆ ಬರದಿದ್ದನ್ನು ನೋಡಿ ಮರುದಿನ ಅವರು ಕಾಣೆಯಾಗಿದ್ದಾರೆ ಎಂದು ಅವರ ಕುಟುಂಬ ಹುಡುಕಾಡಲು ಪ್ರಾರಂಭಿಸಿತ್ತು.
ಅವರ ಮಗ ಸಹಾಯಕ್ಕಾಗಿ ಜಿಂಜಿಯಾಂಗ್ ರುಯಿಟಾಂಗ್ ಬ್ಲೂ ಸ್ಕೈ ತುರ್ತು ರಕ್ಷಣಾ ಕೇಂದ್ರವನ್ನು ಸಂಪರ್ಕಿಸಿದರು. ನಂತರ ಥರ್ಮಲ್ ಇಮೇಜಿಂಗ್ ಡ್ರೋನ್ ಹೊಂದಿದ 10 ರಕ್ಷಣಾ ಸಿಬ್ಬಂದಿಯ ಸಮರ್ಪಿತ ತಂಡವು ಸೆಪ್ಟೆಂಬರ್ 15 ರಂದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕಿನ್ ಬಾವಿಯ ಗೋಡೆಗೆ 54 ಗಂಟೆಗಳಿಗೂ ಹೆಚ್ಚು ಕಾಲ ಇದ್ದರಿಂದ ದಣಿದಿದ್ದಳು. ಅಷ್ಟೇ ಅಲ್ಲದೇ, ಆಕೆಗೆ ಹಾವುಗಳು ಕಚ್ಚಲು ಪ್ರಾರಂಭಿಸಿದ್ದವು. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ತಂಡವು ಆಕೆ ಕೂಗಿಕೊಳ್ಳುತ್ತಿರುವುದು ಕೇಳಿಸಿಕೊಂಡಿವೆ.
ಸೆಪ್ಟೆಂಬರ್ 15 ರಂದು, ನೀರಿನಲ್ಲಿ ಮುಳುಗಿದ್ದ ಅವರನ್ನು ರಕ್ಷಿಸಲಾಯಿತು. ನಂತರ ಆಕೆ ಈ ಕುರಿತು ಮಾತನಾಡಿದ್ದು, ಆಕಸ್ಮಿಕವಾಗಿ ಬಾವಿಗೆ ಬಿದ್ದೆ, ನನಗೆ ಈಜಲು ತಿಳಿದಿತ್ತು, ಗೋಡೆಯಲ್ಲಿ ಹುದುಗಿಸಲಾದ ಕಲ್ಲನ್ನು ಹಿಡಿದುಕೊಂಡು ತೇಲುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಮೇಲ್ಭಾಗದಲ್ಲಿ ಕಿರಿದಾಗಿ ಮತ್ತು ಕೆಳಭಾಗದಲ್ಲಿ ಅಗಲವಾಗಿದ್ದ ಗೋಡೆಯನ್ನು ನನಗೆ ಹತ್ತಲಾಗಲಿಲ್ಲ ಎಂದು ಅವರು ಹೇಳಿದ್ದಾರೆ. ನಾನು ಹತಾಶೆಯಿಂದ ಸಂಪೂರ್ಣವಾಗಿ ಕುಸಿದುಬಿದ್ದ ಹಲವು ಕ್ಷಣಗಳು ಇದ್ದವು. ಬಾವಿಯ ತಳವು ಕಪ್ಪು ಬಣ್ಣದ್ದಾಗಿತ್ತು, ಸೊಳ್ಳೆಗಳಿಂದ ತುಂಬಿತ್ತು, ಮತ್ತು ಹತ್ತಿರದಲ್ಲಿ ಕೆಲವು ನೀರಿನ ಹಾವುಗಳು ಈಜುತ್ತಿದ್ದವು. ಒಮ್ಮೆ ನೀರಿನ ಹಾವು ನನ್ನ ತೋಳನ್ನು ಕಚ್ಚಿತು. ಅದೃಷ್ಟವಶಾತ್, ಅದು ವಿಷಕಾರಿಯಾಗಿರಲಿಲ್ಲ ಮತ್ತು ಯಾವುದೇ ಗಂಭೀರ ಹಾನಿಯನ್ನುಂಟುಮಾಡಲಿಲ್ಲ" ಎಂದು ಕ್ವಿನ್ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Vijay's Rally Stampede: ಕಾಲ್ತುಳಿತದ ಶಾಕಿಂಗ್ ವಿಡಿಯೋ ವೈರಲ್; ಮೃತರ ಸಂಖ್ಯೆ 39 ಕ್ಕೇರಿಕೆ
ಅವಳನ್ನು ರಕ್ಷಿಸಿದ ತಕ್ಷಣ, ಕಿನ್ ಅವರನ್ನು ಜಿಂಜಿಯಾಂಗ್ ಸಿಟಿ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕ್ವಾನ್‌ಝೌ ಫಸ್ಟ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆಕೆಯ ಪಕ್ಕೆಲುಬು ಮುರಿದಿದ್ದು, ಶ್ವಾಸಕೋಶದಲ್ಲಿ ಸಣ್ಣ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿದಿದೆ.