ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುಪಿಐ ವೈಫಲ್ಯ: ರಸ್ತೆ ಮಧ್ಯೆಯೇ ಪ್ರಯಾಣಿಕನನ್ನು ಬಸ್ಸಿನಿಂದ ಇಳಿಸಿದ ಬಿಎಂಟಿಸಿ ಕಂಡಕ್ಟರ್ ವಿರುದ್ಧ ಆಕ್ರೋಶ!

Viral News: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ವೊಬ್ಬ ಯುಪಿಐ ಪಾವತಿ ವೈಫಲ್ಯದ ವಿಚಾರವಾಗಿ ಪ್ರಯಾಣಿಕನ್ನು ಅರ್ಧದಾರಿಯಲ್ಲೆ ಇಳಿಸಿದ ಘಟನೆಯೊಂದು ಕಂಡು ಬಂದಿದೆ. ಸಂತ್ರಸ್ತ ಪ್ರಯಾಣಿಕನು ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಬೇಸರ ಹೊರ ಹಾಕಿದ್ದಾರೆ.

ಯುಪಿಐ ವಿಳಂಬ: ಪ್ರಯಾಣಿಕನನ್ನು ರಸ್ತೆ ಮಧ್ಯೆಯೆ ಇಳಿಸಿದ ಕಂಡಕ್ಟರ್!

ಪ್ರಯಾಣಿಕನನ್ನು ರಸ್ತೆ ಮಧ್ಯೆಯೆ ಇಳಿಸಿದ ಕಂಡಕ್ಟರ್ -

Profile
Pushpa Kumari Jul 31, 2026 9:03 PM

ಬೆಂಗಳೂರು,ಜು.31: ಇತ್ತೀಚೆಗೆ ಡಿಜಿಟಲ್ ಪಾವತಿಯ ಬಳಕೆ ಹೆಚ್ಚಾಗಿದ್ದು ಸಣ್ಣ ಪುಟ್ಟ ಅಂಗಡಿಯಿಂದ ಹಿಡಿದು ಬಸ್, ಆಟೋ ಪ್ರಯಾಣದವರೆಗೂ ಇದನ್ನೇ ಅವಲಂಬಿತರಾಗಿದ್ದೇವೆ. ಆದರೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ವೊಬ್ಬ ಯುಪಿಐ ಪಾವತಿ ವೈಫಲ್ಯದ ವಿಚಾರವಾಗಿ ಪ್ರಯಾಣಿಕನ್ನು ಅರ್ಧದಾರಿಯಲ್ಲೇ ಇಳಿಸಿದ ಘಟನೆಯೊಂದು ಕಂಡು ಬಂದಿದೆ. ಸಂತ್ರಸ್ತ ಪ್ರಯಾಣಿಕನು ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ (Viral News) ಕೊಂಡಿದ್ದು ಬೇಸರ ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ದಿನನಿತ್ಯದ ಬೆಳಗಿನ ಪ್ರಯಾಣವು ತನಗೆ ದುಃಖಕರ ಅನುಭವವಾಗಿ ಪರಿಣಮಿಸಿತು. ಬೆಂಗಳೂರು ಮಹಾ ನಗರ ಸಾರಿಗೆ ನಿಗಮದ ಕಂಡಕ್ಟರ್ ರಸ್ತೆ ಮಧ್ಯೆಯೇ ಬಸ್‌ನಿಂದ ಇಳಿಯುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಾನು ಯುಪಿಐ ಮೂಲಕ ಟಿಕೆಟ್ ನೀಡಲು ಮುಂದಾಗಿದ್ದು ಇಟಿಎಂ ಟಿಕೆಟ್ ಯಂತ್ರವು ತಾಂತ್ರಿಕ ದೋಷದಿಂದಾಗಿ ಕೆಲಸ ಮಾಡುತ್ತಿರಲ್ಲ. ಹೀಗಾಗಿ ಹಣ ಕ್ಯಾಶ್ ನೀಡಿದರೂ ಚಿಲ್ಲರೆ ಇಲ್ಲ ಎಂದು ಜಗಳ ಮಾಡಿದ್ದು ರಸ್ತೆ ಮಧ್ಯೆ ಇಳಿಸಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ಘಟನೆಯನ್ನು ಯುವಕ ರೆಡ್ಡಿಟ್‌ನಲ್ಲಿ ಶೇರ್ ಮಾಡಿಕೊಂಡಿದ್ದು ಪ್ರಯಾಣಿಕನು ಹೆಗೊಂಡನ ಹಳ್ಳಿಯಿಂದ ವರ್ತೂರು ಕೋಡಿಗೆ ಹೋಗುವ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ್ದ. ಇಲ್ಲಿನ ಪ್ರಯಾಣದ ವೆಚ್ಚ 18 ರೂ. ಆಗಿತ್ತು. ಆರಂಭದಲ್ಲಿ, ಪ್ರಯಾಣಿಕ ಯುಪಿಐ ಮೂಲಕ ಟಿಕೆಟ್ ನೀಡಲು ಮುಂದಾಗಿದ್ದು ಆದಾಗ್ಯೂ, ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರವು ತಾಂತ್ರಿಕ ದೋಷದಿಂದ ಕೆಲಸ ಮಾಡಿಲ್ಲ. ​ಆಗ ಪ್ರಯಾಣಿಕ 100 ರೂಪಾಯಿ ನೋಟು ನೀಡಿದ್ದಾರೆ.

Viral Video: ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್‌ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್‌ ಕಾರ್‌ ತಳ್ಳಿದ ಸೈನಿಕ

ಆದರೆ ಬಸ್ ನಿರ್ವಾಹಕನು ತನ್ನ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಜಗಳ ಮಾಡಿದ್ದು ಚಲಿಸುತ್ತಿದ್ದ ಬಸ್ಸನ್ನು ಮಧ್ಯದಲ್ಲೇ ನಿಲ್ಲಿಸಿ, ಪ್ರಯಾಣಿಕನನ್ನು ಕೆಳಗಿಳಿಸಿದ್ದಾನೆ. ದೋಷಪೂರಿತ ಟಿಕೆಟ್ ಯಂತ್ರವಾಗಲಿ ಅಥವಾ ಚಿಲ್ಲರೆಯ ಕೊರತೆಯಾಗಲಿ ನನ್ನ ಜವಾಬ್ದಾರಿಯಲ್ಲ ಎಂದು ನಾನು ವಿವರಿಸಿದೆ. ಆದರೆ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಬದಲು ಆತ ತನ್ನ ಮೇಲೆ ರೇಗಿದ್ದು, ಹೆದ್ದಾರಿಯ ಮಧ್ಯದಲ್ಲಿ ನನ್ನನ್ನು ಕೆಳಗಿಳಿಸಿದ್ದಾನೆ.

ಇದು ಅತ್ಯಂತ ಅಸುರಕ್ಷಿತ ಮತ್ತು ಅವಮಾನಕರವೆಂದು ಅನುಭ, ಯಾವುದೇ ಪ್ರಯಾಣಿಕರನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಚರ್ಚೆಯನ್ನು ಹುಟ್ಟುಹಾಕಿದೆ. ಹಲವಾರು ಬಳಕೆದಾರರು ಕಂಡಕ್ಟರ್ ವರ್ತನೆಯನ್ನು ಟೀಕಿಸಿದ್ದಾರೆ. ಬಳಕೆದಾರರೊಬ್ಬರು ಈತನ ವಿರುದ್ಧ ಪ್ರಕರಣ ದಾಖಲಿಸಿ.."ಅವರ ಕೆಟ್ಟ ಯಂತ್ರ ಕೆಲಸ ಮಾಡದಿದ್ದರೆ ಅದು ನಿಮ್ಮ ತಪ್ಪಲ್ಲ" ಎಂದರು. ಮತ್ತೊಬ್ಬರು ಇತ್ತೀಚೆಗೆ ಸರಕಾರಿ ಬಸ್ ನ ಕಂಡಕ್ಟರ್ ವರ್ತನೆಗಳು ಮಿತಿ ಮೀರುತ್ತಿವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.