Viral News: ಹೆಂಡ್ತಿನ ನಂಬಿ ಅಪರೇಷನ್ ಮಾಡಿಸ್ಕೊಂಡವನಿಗೆ ಕಿಡ್ನಿಯೂ ಇಲ್ಲ – ಪತ್ನಿಯೂ ಇಲ್ಲ!
ಯಾಮಾರುವವರಿದ್ದರೆ ಯಾವೆಲ್ಲಾ ರೀತಿಯಲ್ಲಿ ಯಾಮಾರಿಸುತ್ತಾರೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಲಭಿಸಿದೆ. ಪತಿಯ ಕಿಡ್ನಿಯನ್ನು ಮಾರಿ ಆ ಹಣದೊಂದಿಗೆ ಪತ್ನಿ ಪರಾರಿಯಾಗಿರುವ ಘಟನೆಯ ಸುದ್ದಿ ಇಲ್ಲಿದೆ.
ಹೌರಾ: ಸ್ವಲ್ಪ ಯಾಮಾರಿದ್ರೆ ನಮ್ಮ ಕಿಡ್ನಿನೇ ತೆಗ್ದು ಮಾರೋ ಆಸಾಮಿ ಎಂದು ಕೆಲವರಿಗೆ ಹೇಳುತ್ತಾರೆ, ಅಂದ್ರೆ ಅವರು ಭಾರೀ ಚಾಲೂ ಎಂಬ ಅರ್ಥದಲ್ಲಿ ಈ ಮಾತನ್ನು ಹೇಳೋದನ್ನು ಕೇಳಿದ್ದೀವಿ. ಅದೇ ರೀತಿಯಲ್ಲಿ ಇಲ್ಲೊಬ್ಬಳು ತನ್ನ ಗಂಡನನ್ನೇ ಯಾಮಾರಿಸಿ ಆತನ ಕಿಡ್ನಿಯನ್ನ (Kidney) ಮಾರಾಟ ಮಾಡಿ ಆ ಹಣದೊಂದಿಗೆ ಪರಾರಿಯಾಗಿರುವ ಘಟನೆಯ ಸುದ್ದಿಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ (Viral News) ಆಗುತ್ತಿದೆ.
ತನ್ನ ಪತಿಯನ್ನೇ ಯಾಮಾರಿಸಿ ಆತನ ಕಿಡ್ನಿಯನ್ನು ಮಾರಿ ಪತ್ನಿ ಪರಾರಿಯಾಗಿರುವ ಈ ಘಟನೆ ಪಶ್ಚಿಮ ಬಂಗಾಲದ ( West Bengal) ಹೌರಾದಲ್ಲಿ (Howra) ನಡೆದಿದೆ. ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದ್ದ ಮಹಿಳೆಯೊಬ್ಬಳು ತನ್ನ ಮಗಳ ಭವಿಷ್ಯವನ್ನು ರೂಪಿಸುವುದಕ್ಕಾಗಿ ಈಕೆ ಹೆಣೆದ ಯೋಜನೆ ಮಾತ್ರ ಖತರ್ನಾಕ್ ಆಗಿತ್ತು.
ತನ್ನ ಗಂಡನನ್ನು ಒಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದು ಮನವೊಲಿಸಿದ ಈಕೆ, ಬಳಿಕ ಆತನ ಒಂದು ಕಿಡ್ನಿಯನ್ನು ಆತನಿಗೆ ಗೊತ್ತಿಲ್ಲದಂತೆ 10 ಲಕ್ಷ ರೂಪಾಯಿಗಳಿಗೆ ಮಾರಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಇದಕ್ಕಿಂತಲೂ ಶಾಕಿಂಗ್ ವಿಚಾರವೆಂದರೆ ಈ ರೀತಿ ಹಣ ಪಡೆದುಕೊಂಡ ಬಳಿಕ ಆಕೆ ರಾತೋರಾತ್ರಿ ಆಕೆ ಪರಾರಿಯಾಗಿದ್ದಾಳೆ. ಶಸ್ತ್ರಚಿಕಿತ್ಸೆಯ ನೋವಿನಲ್ಲಿದ್ದ ಆ ಬಡಪಾಯಿ ಗಂಡನಿಗೆ ಇದೀಗ ಪತ್ನಿ ಹಣದೊಂದಿಗೆ ಪರಾರಿಯಾಗಿರುವ ಮಾನಸಿಕ ವೇದನೆಯಲ್ಲೂ ನರಳುವಂತಾಗಿದೆ.
ಕೊಲ್ಕೊತ್ತಾದ ಹೌರಾ ಜಿಲ್ಲೆಯಲ್ಲಿರುವ ಸಂಕ್ರಾಲಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತೀವ್ರ ಹಣಕಾಸು ಸಂಕಷ್ಟದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ತನ್ನ ಗಂಡನನ್ನು ವೈದ್ಯಕೀಯ ಶಸ್ತ್ರಚಿಕಿತ್ಸೆಗೊಳಗಾಗುವಂತೆ ಮನವೊಲಿಸುತ್ತಾಳೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ತನ್ನ ಪತಿಯನ್ನು ಕನ್ವಿನ್ಸ್ ಮಾಡುತ್ತಾಳೆ. ಆದರೆ ಆಕೆಯ ಪ್ಲ್ಯಾನ್ ಮಾತ್ರ ಖತರ್ನಾಕ್ ಆಗಿತ್ತು, ತನ್ನ ಪತಿಯ ಒಂದು ಕಿಡ್ನಿಯನ್ನೇ ಆಕೆ ಸೇಲ್ ಮಾಡುವ ಡೀಲ್ ಮಾಡಿಕೊಂಡಿದ್ದಳು.
ಇದನ್ನೂ ಓದಿ: Viral Video: ಬೆಂಕಿ ಉಪಯೋಗಿಸಿ ಮಸಾಜ್ ! ಈ ಕಣ್ಣಲ್ಲಿ ಏನೆಲ್ಲ ನೋಡ್ಬೇಕೊ ಎಂದ ನೆಟ್ಟಿಗರು
ಬಳಿಕ ಶಸ್ತ್ರಚಿಕಿತ್ಸೆಯ ನೆಪದಲ್ಲಿ ತನ್ನ ಪತಿಯ ಕಿಡ್ನಿಯನ್ನು 10 ಲಕ್ಷ ರೂಪಾಯಿಗಳಿಗೆ ಯಶಸ್ವಿಯಾಗಿ ಮಾರಾಟ ಮಾಡಿದ ಬಳಿಕ, ಆ ಹಣವನ್ನು ಮನೆಗೆ ತಂದು ಬಳಿಕ ರಾತ್ರೋರಾತ್ರಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾಳೆ. ಶಾಕ್ ಗೊಳಗಾದ ಪತಿ ತನ್ನ ಪತ್ನಿಯನ್ನು ಹುಡುಕಿಸಿದಾಗ ಆಕೆ ಬರ್ರಾಕ್ ಪೋರ್ ಪ್ರದೇಶದಲ್ಲಿ ಆಕೆ ಪೈಂಟರ್ ಒಬ್ಬನೊಂದಿಗೆ ಬದುಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ. ಪೊಲೀಸರ ತನಿಖೆ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ತನ್ನ ಪತ್ನಿಯ ಮಾತನ್ನು ನಂಬಿ ಅಪರೇಷನ್ ಗೆ ಒಳಗಾದ ಪತಿಗೆ ಇದೀಗ ತನ್ನ ಒಂದು ಕಿಡ್ನಿಯೂ ಇಲ್ಲ, ಪತ್ನಿಯು ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ!