Viral News: ಅರೇ! ಇದೇನಿದು ರೇಷನ್ ಕಾರ್ಡಾ...? ಇಲ್ಲ ಮದ್ವೆ ಇನ್ವಿಟೇಶನಾ?
ಕೇರಳದ ಮೂಲದ ವ್ಯಕ್ತಿ ಜ್ಯೋತಿಶ್ ಆರ್. ಪಿಳ್ಳೈ ತನ್ನ ಮದುವೆ ಆಮಂತ್ರಣ ಪತ್ರಿಕೆಯನ್ನು ರೇಷನ್ ಕಾರ್ಡ್ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾನೆ. ರೇಷನ್ ಅಂಗಡಿಯೊಂದಿಗಿನ ತನ್ನ ಕುಟುಂಬದ ದೀರ್ಘಕಾಲದ ಸಂಬಂಧಕ್ಕೆ ಗೌರವ ಸಲ್ಲಿಸುವ ಸಲುವಾಗಿ ಈ ವಿಧಾನವನ್ನು ಅನುಸರಿಸಿದ್ದಾನೆ ಎನ್ನಲಾಗಿದೆ. ಈ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿ ನೆಟ್ಟಿಗರ ಗಮನ ಸೆಳೆದಿದೆ.
ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ವಿಭಿನ್ನವಾಗಿ, ವಿಶೇಷವಾಗಿ ಪ್ರಿಂಟ್ ಮಾಡುವುದು ಒಂದು ಟ್ರೆಂಡ್ ಆಗಿದೆ. ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕ ಬಾರಿ ನೋಡುಗರನ್ನು ಗಮನ ಸೆಳೆಯುವ ವಿಶೇಷ ಪತ್ರಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಶೇಷ ರೀತಿಯ ವಿವಾಹ ಆಮಂತ್ರಣ ಪತ್ರಿಕೆಯೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral News) ಆಗುತ್ತಿದೆ. ಈ ಬಾರಿ,ಜೋಡಿಯೊಂದು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ರೇಷನ್ ಕಾರ್ಡ್ ರೀತಿಯಲ್ಲಿ ವಿನ್ಯಾಸಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅರೆ.. ಇದೇನಿದು ರೇಷನ್ ಕಾರ್ಡ್‌ಗೂ ಈ ಮದುವೆ ಆಮಂತ್ರಣ ಪತ್ರಿಕೆಗೂ ಎತ್ತಣದತ್ತ ಸಂಬಂಧ ಎಂದು ಯೋಚಿಸುತ್ತಿದ್ದೀರಾ...? ಇಲ್ಲಿದೆ ನೋಡಿ ಈ ನಂಟಿನ ಗುಟ್ಟು!
"ರೇಷನ್ ಶಾಪ್ ಬಾಯ್" ಎಂದು ಎಲ್ಲರ ಬಾಯಿಂದ ಕರೆಯಲ್ಪಡುವ ಕೇರಳದ ಈ ವರನು ತನ್ನ ಮದುವೆಗೆ ವಿಶಿಷ್ಟ ರೀತಿಯ ಆಹ್ವಾನ ಪತ್ರಿಕೆಯನ್ನು ವಿನ್ಯಾಸಗೊಳಿಸಿದ್ದಾನೆ. ಜ್ಯೋತಿಶ್ ಆರ್ ಪಿಳ್ಳೈ ಎಂದು ಗುರುತಿಸಲ್ಪಟ್ಟ ವರನು ರೇಷನ್ ಕಾರ್ಡ್ ಅನ್ನು ಹೋಲುವ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸಗೊಳಿಸಿದ್ದಾನೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ರೇಷನ್ ಅಂಗಡಿಯೊಂದಿಗಿನ ಅವನ ಕುಟುಂಬದ ದೀರ್ಘಕಾಲದ ಸಂಬಂಧಕ್ಕೆ ಗೌರವ ಸಲ್ಲಿಸುವ ಸಲುವಾಗಿ ಈ ರೀತಿ ಮಾಡಿದ್ದಾ ಎನ್ನಲಾಗಿದೆ.
ಕೇರಳದ ಪಟ್ಟಣಂತಿಟ್ಟ ಎನತು ಗ್ರಾಮದವನಾದ ಜ್ಯೋತಿಶ್ ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾ ನೆಟ್ಟಿಗರ ಗಮನ ಸೆಳೆದಿದೆ. ರೇಷನ್ ಅಂಗಡಿಯಲ್ಲಿ ತಾಯಿಗೆ ಸಹಾಯ ಮಾಡುತ್ತಾ ತನ್ನ ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆದಿದ್ದಾನಂತೆ. ಇನ್ನು ಅವನನ್ನು ಎಲ್ಲರೂ ಪ್ರೀತಿಯಿಂದ "ರೇಷನ್ ಶಾಪ್ ಬಾಯ್" ಎಂದು ಕರೆಯುತ್ತಾರಂತೆ. ಈ ನಿಟ್ಟಿನಲ್ಲಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಶೇಷವಾಗಿಸಲು ಅವನು ರೇಷನ್‌ಕಾರ್ಡ್‌ನಂತೆ ವಿನ್ಯಾಸಗೊಳಿಸಿದ್ದಾನಂತೆ. ಈ ಮೂಲಕ ರೇಷನ್ ಶಾಪ್‌ನಲ್ಲಿ ದುಡಿದ ತಾಯಿಗೂ ಗೌರವ ಸಲ್ಲಿಸಿದ್ದಾನಂತೆ.
ಈ ಸುದ್ದಿಯನ್ನೂ ಓದಿ: ನಕಲಿ ರೇಷನ್ ಕಾರ್ಡ್ ಮಾಡುತ್ತಿದ್ದ ಆರೋಪಿಯ ಬಂಧನ
ವರದಿಯ ಪ್ರಕಾರ, ಪಿಳ್ಳೈ ದೊಡ್ಡಪ್ಪ ಈ ರೇಷನ್ ಅಂಗಡಿಯ ಮೂಲ ಮಾಲೀಕರಾಗಿದ್ದರಂತೆ, ನಂತರ ಅವನ ತಂದೆ ಕೆ.ಕೆ.ರವೀಂದ್ರನ್ ಪಿಳ್ಳೈ ಇದನ್ನು ಮುನ್ನೆಡಿಸಿದ್ದಾರೆ. 2003ರಲ್ಲಿ ಅವನ ತಂದೆಯ ನಿಧನದ ನಂತರ, ಅವನ ತಾಯಿ ಅಂಗಡಿಯ ಜವಾಬ್ದಾರಿ ತೆಗೆದುಕೊಂಡಳಂತೆ. ಪಿಳ್ಳೈ ತನ್ನ ಬಾಲ್ಯವನ್ನು ಈ ಅಂಗಡಿಯಲ್ಲಿಯೇ ಕಳೆದಿದ್ದಾನಂತೆ.