#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಫ್ಲ್ಯಾಟ್ ಖಾಲಿ ಮಾಡಿದ ಮಹಿಳೆ; ಒಂಟಿಯಾದ ಬೆಕ್ಕು- ಕೊನೆಗೆ ಆಗಿದ್ದೇನು?

'ಮಿರಾಕಲ್' ಎಂಬ ಬೆಕ್ಕನ್ನು ಮಹಿಳೆಯೊಬ್ಬಳು ಮನೆಯಲ್ಲಿ ಬಿಟ್ಟು ಮನೆ ಖಾಲಿ ಮಾಡಿದ ಕಾರಣ ಅದು ಶೌಚಾಲಯದಿಂದ ನೀರು ಕುಡಿದು, ಮನೆಯಲ್ಲಿ ಉಳಿದ ಆಹಾರವನ್ನು ತಿಂದು ಜೀವವನ್ನು ಉಳಿಸಿಕೊಂಡಿದೆ. ಅನಿಮಲ್ ರೆಸ್ಕ್ಯೂ ಸಂಸ್ಥೆ ಈ ಬೆಕ್ಕನ್ನು ರಕ್ಷಿಸಿದ್ದಾರೆ. ಹಾಗೇ ಬೆಕ್ಕಿನ ಈ ಪರಿಸ್ಥಿತಿಗೆ ಕಾರಣಳಾದ ಮಾಲೀಕಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್‌(Viral Video) ಆಗಿದೆ.

1 ತಿಂಗಳು ಕೇವಲ ಟಾಯ್ಲೆಟ್‌ ನೀರು ಕುಡಿದು ಬದುಳಿದ ಬೆಕ್ಕು

1 ತಿಂಗಳು ಕೇವಲ ಟಾಯ್ಲೆಟ್‌ ನೀರು ಕುಡಿದು ಬದುಕುಳಿದ ಬೆಕ್ಕು

Profile pavithra Feb 12, 2025 4:33 PM

ಟೊಕಿಯೊ: ಜಪಾನ್‍ನಲ್ಲಿ ಮಹಿಳೆಯೊಬ್ಬಳು ಬೆಕ್ಕನ್ನು ಮನೆಯೊಳಗೆ ಬಿಟ್ಟು ಮನೆ ಖಾಲಿ ಮಾಡಿದ ಕಾರಣ ಬೆಕ್ಕು ಒಂದು ತಿಂಗಳ ಕಾಲ ಜೀವಕ್ಕಾಗಿ ಹೋರಾಡಿದ ಘಟನೆಯೊಂದು ನಡೆದಿದೆ. 'ಮಿರಾಕಲ್' ಎಂಬ ಹೆಸರಿನ ಈ ಬೆಕ್ಕು ಮಾಲೀಕರು ಮನೆಯಲ್ಲಿ ಬಿಟ್ಟು ಹೋದ ಬಳಿಕ ಟಾಯ್ಲೆಟ್‌ ನೀರು ಕುಡಿದು ಮನೆಯಲ್ಲಿ ಮಿಕ್ಕಿದ ಆಹಾರವನ್ನು ತಿಂದು ಜೀವ ಉಳಿಸಿಕೊಂಡಿದೆಯಂತೆ. ಕೊನೆಗೆ ಅನಿಮಲ್ ರೆಸ್ಕ್ಯೂ ಈ ಬೆಕ್ಕನ್ನು ರಕ್ಷಿಸಿದೆಯಂತೆ(Viral News). ಬೆಕ್ಕಿನ ಈ ಸಂಕಷ್ಟಕ್ಕೆ ಕಾರಣರಾದವರ ಬಗ್ಗೆ ತಿಳಿಯಲು ಅಧಿಕಾರಿಗಳು ತನಿಖೆಯನ್ನು ಶುರುಮಾಡಿದಾಗ, 27 ವರ್ಷದ ಮಹಿಳೆ ಈ ಬೆಕ್ಕಿನ ಮಾಲೀಕಳು ಎಂಬುದಾಗಿ ತಿಳಿದುಬಂದಿದೆ. ಫ್ಲ್ಯಾಟ್ ಮಾಲೀಕರಿಗೆ ತಿಳಿಸದೆ ಬಾಡಿಗೆ ಫ್ಲ್ಯಾಟ್ ಖಾಲಿ ಮಾಡಿ ಬೆಕ್ಕನ್ನು ಮಾತ್ರ ಅಲ್ಲೇ ಬಿಟ್ಟು ಹೋಗಿದ್ದಾಗಿ ಅವಳು ಒಪ್ಪಿಕೊಂಡಿದ್ದಾಳೆ. ಹೀಗಾಗಿ ಪ್ರಾಣಿ ಕ್ರೌರ್ಯ ಪ್ರಕರಣಗಳಡಿಯಲ್ಲಿ ಆಕೆಯನ್ನು ಫೆಬ್ರವರಿ 3 ರಂದು ಬಂಧಿಸಲಾಗಿದೆ.

ಜಪಾನ್‍ನಲ್ಲಿ ಪ್ರಾಣಿ ಕ್ರೌರ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. 2010 ರಿಂದ, ಜಪಾನ್‍ನ ರಾಷ್ಟ್ರೀಯ ಪೊಲೀಸ್ ಸಂಸ್ಥೆ ಪ್ರಾಣಿಗಳ ಕ್ರೌರ್ಯದ ಪ್ರಕರಣಗಳನ್ನು ದಾಖಲಿಸುತ್ತಿದೆ. 2023 ರಲ್ಲಿ, ಅಧಿಕಾರಿಗಳು 181 ಪ್ರಕರಣಗಳನ್ನು ತನಿಖೆ ಮಾಡಿದ್ದಾರೆ. ಈ ಎಲ್ಲಾ ಘಟನೆಗಳಲ್ಲಿ ಸುಮಾರು 90 ಪ್ರತಿಶತದಷ್ಟು ಘಟನೆಗಳು ಬೆಕ್ಕುಗಳು ಮತ್ತು ನಾಯಿಗಳಿಗೆ ಸಂಬಂಧಿಸಿದವು ಎನ್ನಲಾಗಿದೆ. ಇವುಗಳಲ್ಲಿ, 64 ಪ್ರಕರಣಗಳು ಪ್ರಾಣಿಗಳನ್ನು ಒಂಟಿಯಾಗಿ ಬಿಟ್ಟು ಹೋದ ಪ್ರಕರಣಗಳಾಗಿದ್ದರೆ, 57 ಪ್ರಕರಣಗಳು ಆಹಾರದ ಕೊರತೆ ಮತ್ತು ನಿಂದನೆ ಮತ್ತು ನಿರ್ಲಕ್ಷ್ಯಕ್ಕೆ ಸಂಬಂಧಿಸಿವೆ. ಇನ್ನೂ 41 ಪ್ರಕರಣಗಳು ಉದ್ದೇಶಪೂರ್ವಕ ಹಾನಿ ಅಥವಾ ಕೊಲೆಯನ್ನು ಒಳಗೊಂಡಿವೆ. ಜಪಾನ್‍ನ ಪ್ರಾಣಿ ಕ್ರೌರ್ಯ ಕಾನೂನುಗಳ ಅಡಿಯಲ್ಲಿ, ಸಾಕುಪ್ರಾಣಿಗಳನ್ನು ತ್ಯಜಿಸುವುದು ಅಥವಾ ನಿಂದಿಸುವುದು ಗಂಭೀರ ಅಪರಾಧವಾಗಿದ್ದು, ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಮಿಲಿಯನ್ ಯೆನ್‌ವರೆಗೆ ದಂಡ ವಿಧಿಸಲಾಗುತ್ತದೆಯಂತೆ.

ಈ ಸುದ್ದಿಯನ್ನೂ ಓದಿ: Viral Video: ಛೇ..ಎಂಥಾ ಪೈಶಾಚಿಕ ಕೃತ್ಯ! ರೀಲ್‌ ಕ್ರೇಜ್‌ಗಾಗಿ ಬೆಕ್ಕುಗಳನ್ನು ಕಟ್ಟಿಹಾಕಿ ಕೊಂದ ಪಾಪಿ- ಬೆಚ್ಚಿ ಬೀಳಿಸುವ ವಿಡಿಯೊ ವೈರಲ್

ಪಂಜಾಬ್‍ನ ಜಲಂಧರ್‌ನಲ್ಲಿ ರೀಲ್ ಕ್ರೇಜ್‌ಗೆ ಬಿದ್ದ ವ್ಯಕ್ತಿಯೊಬ್ಬ ಬೆಕ್ಕುಗಳನ್ನು ದಾರುಣವಾಗಿ ಹತ್ಯೆಮಾಡಿರುವ ಘಟನೆ ವರದಿಯಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೊ ಅಪ್‌ಲೋಡ್‌ ಮಾಡುವುದಕ್ಕಾಗಿ ಮನ್‌ದೀಪ್‌ ಎಂಬಾತ ನಾಯಿಗಳ ಮುಂದೆ ಬೆಕ್ಕುಗಳನ್ನು ಕಟ್ಟಿ ಹಾಕಿ ನಾಯಿ ಬೆಕ್ಕುಗಳ ಮೇಲೆ ದಾಳಿ ಮಾಡಿ ಕೊಂದು ಹಾಕುವಂತೆ ಮಾಡಿದ್ದಾನೆ. ಇಂತಹ ಭಯಾನಕ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ

ಮನ್‌ದೀಪ್‌ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ಉತ್ತೇಜಿಸುವ ಹಲವಾರು ಪೋಸ್ಟ್‌ಗಳಿವೆ. ಒಂದು ವಿಡಿಯೊದಲ್ಲಿ, ಅವನು ತನ್ನ ಸಾಕು ನಾಯಿಗಳಲ್ಲಿ ಒಂದನ್ನು ಹಗ್ಗದಿಂದ ಕಟ್ಟಿ ಎಳೆದಿದ್ದಾನೆ. ಈ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ನೆಟ್ಟಿಗರು ಅವನ ಅಮಾನವೀಯ ಕೃತ್ಯವನ್ನು ಖಂಡಿಸಿದ್ದಾರೆ ಮತ್ತು ಪ್ರಾಣಿಗಳನ್ನು ಈ ಅನ್ಯಾಯದಿಂದ ಕಾಪಾಡುವಂತೆ ಕರೆ ನೀಡಿದ್ದಾರೆ.