Viral Video: ಛೇ..ಎಂಥಾ ಪೈಶಾಚಿಕ ಕೃತ್ಯ! ರೀಲ್ ಕ್ರೇಜ್‌ಗಾಗಿ ಬೆಕ್ಕುಗಳನ್ನು ಕಟ್ಟಿಹಾಕಿ ಕೊಂದ ಪಾಪಿ- ಬೆಚ್ಚಿ ಬೀಳಿಸುವ ವಿಡಿಯೊ ವೈರಲ್
ರೀಲ್‍ಗಳನ್ನು(Reel Craze) ಕ್ರೇಜ್‌ಗಾಗಿ ಮನ್‌ದೀಪ್ ಎಂಬಾತ ಉದ್ದೇಶಪೂರ್ವಕವಾಗಿ ನಾಯಿಗಳ ಮುಂದೆ ಬೆಕ್ಕುಗಳನ್ನು ಕಟ್ಟಿ ಹಾಕಿ ನಾಯಿ ಬೆಕ್ಕುಗಳ ಮೇಲೆ ದಾಳಿ ಮಾಡಿ ಕೊಂದುಹಾಕುವಂತೆ ಮಾಡಿದ್ದಾನೆ. ಇಂತಹ ಭಯಾನಕ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಇದೀಗ ಮನ್‌ದೀಪ್ ಅನ್ನು ಪೊಲೀಸರು ಬಂಧಿಸಿದ್ದಾರೆ(Viral Video).
Vishwavani News
Jan 11, 2025 5:49 PM
ಚಂಡೀಗಢ: ಪಂಜಾಬ್‍ನ ಜಲಂಧರ್‌ನಲ್ಲಿ ರೀಲ್ ಕ್ರೇಜ್‌ಗೆ(Reel Craze) ಬಿದ್ದ ವ್ಯಕ್ತಿಯೊಬ್ಬ ಬೆಕ್ಕುಗಳನ್ನು ದಾರುಣವಾಗಿ ಹತ್ಯೆಮಾಡಿರುವ ಘಟನೆ ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಅಪ್‌ಲೋಡ್ ಮಾಡುವುದಕ್ಕಾಗಿ ಮನ್‌ದೀಪ್ ಎಂಬಾತ ನಾಯಿಗಳ ಮುಂದೆ ಬೆಕ್ಕುಗಳನ್ನು ಕಟ್ಟಿ ಹಾಕಿ ನಾಯಿ ಬೆಕ್ಕುಗಳ ಮೇಲೆ ದಾಳಿ ಮಾಡಿ ಕೊಂದು ಹಾಕುವಂತೆ ಮಾಡಿದ್ದಾನೆ. ಇಂತಹ ಭಯಾನಕ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ(Viral Video).
View this post on Instagram A post shared by mandeep singh (@mandee5103)
ಮನ್‌ದೀಪ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ಉತ್ತೇಜಿಸುವ ಹಲವಾರು ಪೋಸ್ಟ್‌ಗಳಿವೆ. ಒಂದು ವಿಡಿಯೊದಲ್ಲಿ, ಅವನು ತನ್ನ ಸಾಕು ನಾಯಿಗಳಲ್ಲಿ ಒಂದನ್ನು ಹಗ್ಗದಿಂದ ಕಟ್ಟಿ ಎಳೆದಿದ್ದಾನೆ. ಈ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ನೆಟ್ಟಿಗರು ಅವನ ಅಮಾನವೀಯ ಕೃತ್ಯವನ್ನು ಖಂಡಿಸಿದ್ದಾರೆ ಮತ್ತು ಪ್ರಾಣಿಗಳನ್ನು ಈ ಅನ್ಯಾಯದಿಂದ ಕಾಪಾಡುವಂತೆ ಕರೆ ನೀಡಿದ್ದಾರೆ.
View this post on Instagram A post shared by mandeep singh (@mandee5103)
ಯುವಿ ಎಂಬ ವ್ಯಕ್ತಿ, ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್ ಜೊತೆ ಸೇರಿ ಈ ಬಗ್ಗೆ ಪೊಲೀಸರಿಗೆ ವರದಿ ಮಾಡಿದ್ದಾರೆ. ಪೊಲೀಸರು ತಕ್ಷಣ ಪ್ರತಿಕ್ರಿಯಿಸಿ, ಮನ್‌ದೀಪ್ ವಿರುದ್ಧ ಎಫ್ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.ಈ ಕಾರ್ಯಾಚರಣೆಯ ಸಮಯದಲ್ಲಿ ಒಂದು ನಾಯಿಯನ್ನು ರಕ್ಷಿಸಲಾಗಿದೆ. ಆದರೆ ಮನ್‌ದೀಪ್ ವಿಡಿಯೊಗಳಲ್ಲಿ ಕಾಣಿಸಿಕೊಂಡಿರುವ ಇತರ ಪ್ರಾಣಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:ಮಾಲ್‌ಗೆ ನುಗ್ಗಿದ ಕೋತಿ; ಮಹಿಳೆ ಮೇಲೆ ಅಟ್ಯಾಕ್- ಇಲ್ಲಿದೆ ವಿಡಿಯೊ
ಮುಂಬೈ ಪೊಲೀಸ್ ಅಧಿಕಾರಿ ಮತ್ತು ಪ್ರಾಣಿ ಕಾರ್ಯಕರ್ತ ಸುಧೀರ್ ಕುಡಲ್ಕರ್ ಸೋಶಿಯಲ್ ಮೀಡಿಯಾಗಳ ಮೂಲಕ ಪ್ರಕರಣದ ಬಗ್ಗೆ ಮಾಹಿತಿಗಳನ್ನು ನೀಡಿದ್ದಾರೆ. ಎಕ್ಸ್‌ನಲ್ಲಿ ಈ ಬಗ್ಗೆ ವಿವರಗಳನ್ನು ಹಂಚಿಕೊಂಡ ಕುಡಲ್ಕರ್, "ಮನ್‌ದೀಪ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ, ಒಂದು ನಾಯಿಯನ್ನು ರಕ್ಷಿಸಿದ್ದಾರೆ. ಯುವಿ @ ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್, ಅವರು ಸರಿಯಾದ ಸಮಯಕ್ಕೆ ಎಫ್ಐಆರ್ ದಾಖಲಿಸಿದ್ದಲ್ಲದೆ ನಾಯಿಗಳನ್ನು ರಕ್ಷಿಸಿದ್ದಾರೆ. ಆರೋಪಿಯ ಇನ್‌ಸ್ಟಾಗ್ರಾಂನಲ್ಲಿ ತೋರಿಸಲಾದ ಪ್ರಾಣಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರೆದಿವೆ. ನಾವು ಇಂತಹ ಕೃತ್ಯದ ವಿರುದ್ಧ ನಿಲುವು ತೆಗೆದುಕೊಳ್ಳಬೇಕು" ಎಂದು ಅವರು ಬರೆದಿದ್ದಾರೆ.