ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಸಖತ್‌ ವೈರಲ್‌ ಆಯ್ತು ಮೂವರು ಸಹೋದರರ ಈ ಕ್ಯೂಟ್‌ ಡ್ಯಾನ್ಸ್‌! ನೆಟ್ಟಿಗರು ಹೇಳಿದ್ದೇನು?

ಆಸ್ತಿ, ಹಣಕ್ಕಾಗಿ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮೂವರು ಸಹೋದರರು ಒಂದೇ ವೇದಿಕೆಯ ಮೇಲೆ ಪ್ರೀತಿಯಿಂದ ನೃತ್ಯ ಮಾಡಿದ ವಿಡಿಯೊವೊಂದು ಸಖತ್‌ ಸದ್ದು ಮಾಡುತ್ತಿದೆ. ಇವರ ವಿಡಿಯೊ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಪ್ರತಿಯೊಬ್ಬ ಪೋಷಕರಿಗೂ ಅಂತಹ ಗಂಡು ಮಕ್ಕಳು ಸಿಗಲಿ ಎಂದು ಹಾರೈಸಿದ್ದಾರೆ. ಈ ವಿಡಿಯೊ ಈಗ ವೈರಲ್‌ (Viral Video)ಆಗಿದೆ.

ನವದೆಹಲಿ: ಸೋದರ ಸಂಬಂಧ ಎಂಬುದು ಅತ್ಯದ್ಬುತ ಸಂಗತಿ. ಇತ್ತೀಚಿನ ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳು ಮರೆಯಾಗುತ್ತಿವೆ. ಇಂತಹ ಸ್ಥಿತಿ ಇರುವಾಗ ಮೂವರು ಸಹೋದರರ ಒಂದೇ ವೇದಿಕೆಯ ಮೇಲೆ ಸಖತ್‌ ಆಗಿ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್ ಚಿತ್ರ 'ಹಮ್ ಸಾಥ್ ಸಾಥ್ ಹೈ' ನ 'ಯೇ ತೋ ಸಚ್ ಹೈ ಕಿ ಭಗವಾನ್ ಹೈ' ಎಂಬ ಭಾವನಾತ್ಮಕ ಹಾಡಿಗೆ ಮೂವರು ಸಹೋದರರು ವೇದಿಕೆಯಲ್ಲಿ ಒಟ್ಟಿಗೆ ನೃತ್ಯ ಮಾಡುತ್ತಿರುವ ಹೃದಯಸ್ಪರ್ಶಿ ವೀಡಿಯೊ ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿದೆ. ಈ ಅಪೂರ್ವ ಸಹೋದರರ ಕ್ಯೂಟ್‌ ಡ್ಯಾನ್ಸ್‌ ವಿಡಿಯೊ(Viral Video) ನೋಡಿದ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಲೈವ್ ಆಗಿ ಸೆರೆಹಿಡಿಯಲಾದ ಈ ಸಹೋದರರ ನೃತ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈಗಂತೂ ಆಸ್ತಿ, ಹಣಕ್ಕಾಗಿ ಕುಟುಂಬಗಳು ಒಡೆದು ಚೂರಾಗುತ್ತಿರುವ ಸುದ್ದಿಗಳೇ ಹೆಚ್ಚುತ್ತಿರುವಾಗ ಅಂತಹದ್ದರಲ್ಲಿ, ಮೂವರು ಸಹೋದರರು ಒಟ್ಟಾಗಿ ಪ್ರೀತಿಯಿಂದ ನೃತ್ಯ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.

ಮೂವರು ಸಹೋದರರ ಡ್ಯಾನ್ಸ್‌ ವಿಡಿಯೊ ಇಲ್ಲಿದೆ ನೋಡಿ...

ವಿಡಿಯೊದಲ್ಲಿ, ಕಪ್ಪು ಬಣ್ಣದ ಪ್ಯಾಂಟ್, ಓವರ್‌ಕೋಟ್‌ ಮ್ಯಾಚಿಂಗ್ ಉಡುಪನ್ನು ಧರಿಸಿದ ಈ ಮೂವರು ಸಹೋದರರು ವೇದಿಕೆಯ ಮೇಲೆ ಸಖತ್‌ ಆಗಿ ಹೆಜ್ಜೆ ಹಾಕಿದ್ದಾರೆ. ಅದು ಅಲ್ಲದೇ, ತಮ್ಮ ಪ್ರದರ್ಶನದ ಸಮಯದಲ್ಲಿ ಸಹೋದರರು ಮಂಡಿಯೂರಿ, ಮುಂದಿನ ಸಾಲಿನಲ್ಲಿ ಕುಳಿತಿದ್ದ ತಮ್ಮ ಹೆತ್ತವರಿಗೆ ಗೌರವ ಮತ್ತು ಪ್ರೀತಿಯ ಸಂಕೇತವನ್ನು ರವಾನಿಸಿದ್ದಾರೆ. ತಮ್ಮ ಮಕ್ಕಳು ಒಟ್ಟಿಗೆ ನೃತ್ಯ ಮಾಡುವುದನ್ನು ನೋಡುತ್ತಿದ್ದ ತಂದೆ-ತಾಯಿ ಕೂಡ ಭಾವುಕರಾಗಿದ್ದಾರೆ.

ವೆಡ್ಡಿಂಗ್ ಕೊರಿಯೋಗ್ರಾಫರ್ ರಿದ್ಧಿ ಈ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅನೇಕ ನೃತ್ಯ ಪ್ರೇಮಿಗಳು ಈ ವೀಡಿಯೋವನ್ನು ಶೇರ್ ಮತ್ತು ರಿ-ಪೋಸ್ಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಇದುವರೆಗೆ 36 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.‌

ಈ ಸುದ್ದಿಯನ್ನೂ ಓದಿ:‌Viral Video: ರೀಲ್ಸ್‌ ಮಾಡ್ತಿದ್ದ ಯುವತಿಗೆ ಈ ಕಿಡಿಗೇಡಿ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ

ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಸಹೋದರರನ್ನು ಹೊಗಳಿದ್ದಾರೆ. ಈ ವಿಡಿಯೊ ಭಾವನಾತ್ಮಕ ಮತ್ತು ಹೃದಯಸ್ಪರ್ಶಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಪ್ರತಿಯೊಬ್ಬ ಪೋಷಕರಿಗೂ ಅಂತಹ ಗಂಡು ಮಕ್ಕಳು ಸಿಗಲಿ. ಈ ವೀಡಿಯೊ ನನ್ನ ಕಣ್ಣುಗಳಲ್ಲಿ ಕಣ್ಣೀರು ತರಿಸಿತು" ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ."ಬೆಸ್ಟ್ ವಿಡಿಯೋ, ತುಂಬಾ ಎಮೋಷನಲ್!" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ, ಇನ್ನೊಬ್ಬರು "ದೃಷ್ಟಿ ತಾಕದಿರಲಿ" ಎಂದು ಹೇಳಿದ್ದಾರೆ. ನೃತ್ಯವನ್ನು ಮೆಚ್ಚಿದ ನೆಟ್ಟಿಗರು "ತುಂಬಾ ಸುಂದರ ಮತ್ತು ತುಂಬಾ ಚೆನ್ನಾಗಿದೆ ಎಂದು ಉದ್ಗರಿಸಿದ್ದಾರೆ.