Viral Video: ರೀಲ್ಸ್ ಮಾಡ್ತಿದ್ದ ಯುವತಿಗೆ ಈ ಕಿಡಿಗೇಡಿ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ
ಸೋಶಿಯಲ್ ಮೀಡಿಯಾ ಇನ್‌ಪ್ಲುವೆನ್ಸರ್ ಮಾನಸಿ ಸುರವಾಸೆಯ ವಿಡಿಯೊಂದು ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆಕೆ ರೀಲ್‌ಗಾಗಿ ಮೆಟ್ಟಿಲಿನ ಮೇಲೆ ಕುಳಿತು ವಿಡಿಯೊ ಮಾಡುತ್ತಿರುವಾಗ ವ್ಯಕ್ತಿಯೊಬ್ಬ ಬಂದು ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನಂತೆ. ಇದರಿಂದ ಕೋಪಗೊಂಡ ಆಕೆ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.


ನವದೆಹಲಿ: ರೀಲ್ಸ್ ಮಾಡುತ್ತಿದ್ದ ಯುವತಿಯ ಜೊತೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ವರದಿಯಾಗಿದೆ. ಸೋಶಿಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಮಾನಸಿ ಸುರವಾಸೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಮೆಟ್ಟಿಲುಗಳ ಮೇಲೆ ವಿಡಿಯೊವನ್ನು ಚಿತ್ರೀಕರಿಸುವಾಗ ಆಕೆಯನ್ನು ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸಿದ್ದಾನಂತೆ. ಇದರಿಂದ ಕೋಪಗೊಂಡ ಆಕೆ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ, ಮಾನಸಿ ಕೆಂಪು ಸ್ಲೀವ್ಲೆಸ್ ಬ್ಲೌಸ್ ಮತ್ತು ಬಿಳಿ ಕಸೂತಿ ಸ್ಕರ್ಟ್ ಧರಿಸಿ, ಮೆಟ್ಟಿಲುಗಳ ಮೇಲೆ ವಿಡಿಯೊ ರೆಕಾರ್ಡ್ ಮಾಡುತ್ತಿರುವಾಗ ವ್ಯಕ್ತಿಯೊಬ್ಬ ಮೆಟ್ಟಿಲ ಬಳಿ ಬಂದಿದ್ದಾನೆ. ಆ ವ್ಯಕ್ತಿ ಮೇಲಕ್ಕೆ ಬರುವುದನ್ನು ನೋಡಿದ ಆಕೆ ಅವನಿಗೆ ಮೇಲೆ ಹೋಗಲು ಜಾಗ ಬಿಟ್ಟು ನಿಂತಿದ್ದಾಳೆ. ಆಗ ಆ ವ್ಯಕ್ತಿ ತನ್ನ ಕೈಯನ್ನು ಅವಳ ಕಡೆಗೆ ಚಾಚಿ, ಅವಳನ್ನು ಮುಟ್ಟಲು ಮುಂದಾಗಿದ್ದಾನೆ. ಆಗ ಮಾನಸಿ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಆಗ ಆ ವ್ಯಕ್ತಿ ತಕ್ಷಣ "ಕ್ಷಮಿಸಿ, ಕ್ಷಮಿಸಿ!" ಎಂದು ಹೇಳಿ ಓಡಿಹೋಗಿದ್ದಾನೆ.
ಮಾನಸಿ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಹಾಗೇ ವಿಡಿಯೊ ಸಾಕ್ಷಿ ತೆಗೆದುಕೊಂಡು ಆಕೆ ಈ ಘಟನೆಯನ್ನು ವ್ಯಕ್ತಿಯ ಕುಟುಂಬಕ್ಕೆ ವರದಿ ಮಾಡಿದಾಗ ಅವನ ಕುಟುಂಬವು ಅವನ ಕಾರ್ಯವನ್ನು ಸಮರ್ಥಿಸಿಕೊಂಡಿದೆ. ಅವನು ಮಾನಸಿಕ ಅಸ್ವಸ್ಥನೆಂದು ಹೇಳಿದೆ ಎಂದು ಆಕೆ ಪೋಸ್ಟ್‌ನಲ್ಲಿ ಹೇಳಿದ್ದಾಳೆ. ಮಾನಸಿ ಈ ಘಟನೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರೂ, ಈ ವಿಷಯವನ್ನು ಪೊಲೀಸ್ ಠಾಣೆಗೆ ವರದಿ ಮಾಡಲಾಗಿದೆಯೇ ಎಂಬುದು ಸ್ಪಷ್ಟಪಡಿಸಿಲ್ಲ.
ವಿಡಿಯೊ ಇಲ್ಲಿದೆ ನೋಡಿ...
Just saw this video on instagram. It healed me for everything I’ve gotten assaulted by a man and I never got the courage to slap them pic.twitter.com/yfWWa4LNom
— Faree Ferrari (@faree_for_real) April 27, 2025
ಈ ಹಿಂದೆ ಚಲಿಸುತ್ತಿರುವ ಬಸ್ಸಿನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆ ಮಹಿಳೆ ಆತನನ್ನು ಬಸ್ಸಿನಲ್ಲಿ ಎಲ್ಲರ ಮುಂದೆ ಹಿಗ್ಗಾಮಗ್ಗಾ ಥಳಿಸಿದ್ದಳು. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ರೀಲ್ಸ್‌ಗಾಗಿ ಮರ ಏರಿ ಡ್ಯಾನ್ಸ್ ಮಾಡಿದ ಕಾಶ್ಮೀರಿ ಮಹಿಳೆ; ನೆಟ್ಟಿಗರು ಹೇಳಿದ್ದೇನು ನೋಡಿ
ವೈರಲ್ ವಿಡಿಯೊದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದ್ದನು. ಆಗ ಕೋಪಗೊಂಡ ಮಹಿಳೆ ವ್ಯಕ್ತಿಗೆ ಒಂದು ಅಥವಾ ಎರಡು ಬಾರಿ ಅಲ್ಲ, 26 ಕ್ಕೂ ಹೆಚ್ಚು ಬಾರಿ ಕಪಾಳಮೋಕ್ಷ ಮಾಡಿದ್ದಳು. ವ್ಯಕ್ತಿ ತನ್ನ ಕೃತ್ಯಗಳಿಗೆ ಕ್ಷಮೆಯಾಚಿಸಿದರೂ ಮಹಿಳೆ ಬಿಡದೆ ವ್ಯಕ್ತಿಗೆ ಪದೇ ಪದೇ ಕಪಾಳಮೋಕ್ಷ ಮಾಡಿದ್ದಳು. ಗಲಾಟೆಯ ಹೊರತಾಗಿಯೂ, ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರು ಮಧ್ಯಪ್ರವೇಶಿಸಲಿಲ್ಲ, ಮಹಿಳೆಗೆ ಕಪಾಳಮೋಕ್ಷ ಮಾಡುವುದನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಅಂತಿಮವಾಗಿ, ಕಂಡೆಕ್ಟರ್ ಮಧ್ಯಪ್ರವೇಶಿಸಿ ಸಮಾಧಾನ ಮಾಡಲು ಮುಂದಾಗಿದ್ದನು. ಆದರೆ ಮಹಿಳೆ ಬಸ್ ಅನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಬೇಕೆಂದು ಒತ್ತಾಯಿಸಿದ್ದಳು.