Viral Video: ಬಾರ್ ಡ್ಯಾನ್ಸರ್ ಜತೆ ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ ಎಎಸ್‍ಐ; ವಿಡಿಯೊ ವೈರಲ್ ಬೆನ್ನಲ್ಲೇ ಅಮಾನತು
ASI Caught Grooving with Bar Dancer: ಎಎಸ್‌ಐ ಒಬ್ಬರು ಆರ್ಕೆಸ್ಟ್ರಾ ನರ್ತಕಿಯೊಂದಿಗೆ ಅಶ್ಲೀಲವಾಗಿ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಎಎಸ್ಐ ಸಂಜೀವ್ ಗೌರ್ ಮತ್ತು ಇತರ ಕೆಲವರು ನೃತ್ಯ ಮಾಡುತ್ತಾ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.

-

ಭೋಪಾಲ್: ಎಎಸ್‌ಐ ಒಬ್ಬರು ಆರ್ಕೆಸ್ಟ್ರಾ ನರ್ತಕಿಯೊಂದಿಗೆ ಅಶ್ಲೀಲವಾಗಿ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಮಧ್ಯ ಪ್ರದೇಶ (Madhya Pradesh)ದ ದಾಟಿಯಾದಲ್ಲಿ ಈ ಘಟನೆ ನಡೆದಿದೆ. ವಿಡಿಯೊದಲ್ಲಿ ದಾಟಿಯಾ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿರುವ ಎಎಸ್ಐ ಸಂಜೀವ್ ಗೌರ್ ಬಾಲಿವುಡ್ ಹಾಡಿಗೆ ಇಬ್ಬರು ಮಹಿಳೆಯರೊಂದಿಗೆ ಡ್ಯಾನ್ಯಾ ಮಾಡಿ ಅನುಚಿತವಾಗಿ ವರ್ತಿಸಿದ್ದಾರೆ.
ಮಾಹಿತಿಯ ಪ್ರಕಾರ, ಈ ವಿಡಿಯೊ ಸೆಪ್ಟೆಂಬರ್ 2ರಂದು ಕಾನ್‌ಸ್ಟೇಬಲ್ ರಾಹುಲ್ ಬೌಧ್ ಅವರ ಹುಟ್ಟುಹಬ್ಬದ ಪಾರ್ಟಿಯದ್ದಾಗಿದೆ. ಈ ಪಾರ್ಟಿಯನ್ನು ಹೊಟೇಲ್ ಒಂದರಲ್ಲಿ ಆಯೋಜಿಸಲಾಗಿತ್ತು. ಇಬ್ಬರು ಬಾರ್ ಡ್ಯಾನ್ಸರ್‌ಗಳನನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ವಿಡಿಯೊದಲ್ಲಿ ಎಎಸ್ಐ ಸಂಜೀವ್ ಗೌರ್ ಮತ್ತು ಇತರ ಕೆಲವು ಪುರುಷರು ನೃತ್ಯ ಮಾಡುತ್ತ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.
ವಿಡಿಯೊ ವೀಕ್ಷಿಸಿ:
#WATCH | ASI Caught Performing Obscene Dance With A Woman In MP's Datia#MadhyaPradesh #MPNews pic.twitter.com/1Ne614qPzp
— Free Press Madhya Pradesh (@FreePressMP) September 8, 2025
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಂಡಿತು. ದಾತಿಯಾ ಎಸ್‌ಪಿ ಸೂರಜ್ ವರ್ಮಾ ಮಾಹಿತಿ ನೀಡಿ ಎಎಸ್‌ಐ ಸಂಜೀವ್ ಗೌರ್ ಮತ್ತು ಕಾನ್‌ಸ್ಟೇಬಲ್ ರಾಹುಲ್ ಬೌಧ್ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿದರು. ತನಿಖೆ ಪೂರ್ಣಗೊಳ್ಳುವವರೆಗೆ ಇಬ್ಬರನ್ನೂ ಕರ್ತವ್ಯದಿಂದ ತೆಗೆದುಹಾಕಲಾಗಿದೆ.
ಪೊಲೀಸ್ ಪಡೆಯ ವರ್ಚಸ್ಸು ಮತ್ತು ಖ್ಯಾತಿಗೆ ಧಕ್ಕೆ ತರುವ ಯಾವುದೇ ರೀತಿಯ ವರ್ತನೆಯನ್ನು ಸಹಿಸುವುದಿಲ್ಲ ಎಂದು ಎಸ್‌ಪಿ ಸೂರಜ್ ವರ್ಮಾ ಸ್ಪಷ್ಟವಾಗಿ ಹೇಳಿದ್ದಾರೆ. ಅಂತಹ ದುಷ್ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ. ಈ ಬಗ್ಗೆ ಈಗಾಗಲೇ ವಿವರವಾದ ತನಿಖೆ ನಡೆಯುತ್ತಿದ್ದು, ಅದು ಪೂರ್ಣಗೊಂಡ ನಂತರ ಪ್ರಕರಣದ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕಾನೂನು ಮತ್ತು ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ಸೀರೆಯುಟ್ಟ ಯುವಕನೊಬ್ಬ ಪೊಲೀಸ್ ಅಧಿಕಾರಿಯೊಂದಿಗೆ ಅಶ್ಲೀಲ ರೀಲ್ಸ್ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿತ್ತು. ವಿಡಿಯೊ ವೀಕ್ಷಿಸಿದ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ನೋಯ್ಡಾದ ರಾಷ್ಟ್ರೀಯ ದಲಿತ ಪ್ರೇರಣಾ ಸ್ಥಳ ಎಂಬಲ್ಲಿ ಈ ಘಟನೆ ನಡೆದಿತ್ತು ಎಂದು ವರದಿಯಾಗಿದೆ. ಇದು ಸೂಕ್ಷ್ಮ ಮತ್ತು ಸಾಂಕೇತಿಕ ಸ್ಥಳವೆಂದು ಪರಿಗಣಿಸಲ್ಪಟ್ಟಿದ್ದು, ಈ ಕಾರಣದಿಂದಾಗಿ ಅಶ್ಲೀಲ ವಿಡಿಯೊದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿದ್ದರು.
ಇದನ್ನೂ ಓದಿ: Dance Bars: ಅಶ್ಲೀಲ ನೃತ್ಯ, ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್ ಬಾರ್‌ಗಳ ಮೇಲೆ ಪೊಲೀಸ್ ದಾಳಿ