Viral Video: ಟ್ರಾಫಿಕ್‌ಗೆ ಬೇಸತ್ತು ಇವ್ರು ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ!
Men carrying scooter on shoulders: ಇಬ್ಬರು ವ್ಯಕ್ತಿಗಳು ಟ್ರಾಫಿಕ್ ಜಾಮ್ ತಪ್ಪಿಸಲು ಸ್ಕೂಟರ್ ಅನ್ನು ಹೆಗಲ ಮೇಲೆ ಹೊತ್ತು ನಡೆದಿರುವ ದೃಶ್ಯ ಹರಿಯಾಣದ ಗುರುಗ್ರಾಮದಲ್ಲಿ ಕಂಡುಬಂದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೊ ನೋಡಿದ ನೆಟ್ಟಿಗರು ಹಾಸ್ಯಚಟಾಕಿ ಹಾರಿಸಿದ್ದಾರೆ.

-

ಗುರುಗ್ರಾಮ: ಟ್ರಾಫಿಕ್ ಜಾಮ್ (Traffic jam) ತಪ್ಪಿಸಲು ಇಬ್ಬರು ವ್ಯಕ್ತಿಗಳು ಸ್ಕೂಟರ್ ಅನ್ನು ಹೆಗಲ ಮೇಲೆ ಎತ್ತಿಕೊಂಡು ಓಡಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಹರಿಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುಗ್ರಾಮದಲ್ಲಿ ಟ್ರಾಫಿಕ್ ತಪ್ಪಿಸಲು ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಅನ್ನು ಭುಜದ ಮೇಲೆ ಹೊತ್ತುಕೊಂಡು ಹೋಗಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ ಬಳಕೆದಾರ ಆರಣ್ಶ್ ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಕಾರುಗಳು ಮತ್ತು ಬೈಕ್‌ಗಳಿರುವ ವಾಹನ ದಟ್ಟಣೆಯ ರಸ್ತೆಯಲ್ಲಿ ಇಬ್ಬರೂ ದ್ವಿಚಕ್ರ ವಾಹನವನ್ನು ಎತ್ತಿಕೊಂಡು ನಡೆಯುತ್ತಾ ಹೋಗುವುದನ್ನು ನೋಡಬಹುದು.
ಗುರ್ಗಾಂವ್ ಲೋಕಲ್ಸ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯು ಈ ವಿಡಿಯೊವನ್ನು ಮರುಪೋಸ್ಟ್ ಮಾಡಿದೆ. ಗುರುಗ್ರಾಮದ ಸಂಚಾರ ಸಮಸ್ಯೆಗೆ ಒಂದೇ ಒಂದು ಪರಿಹಾರ ಎಂದು ಹಾಸ್ಯಮಯವಾಗಿ ಬರೆಯಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಹಾಸ್ಯಮಯವಾಗ ಪ್ರತಿಕ್ರಿಯಿಸಿದ್ದಾರೆ. ಭಾರತ ಆರಂಭಿಕರಿಗಾಗಿ ಅಲ್ಲ ಎಂದು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ವಿಡಿಯೊ ವೀಕ್ಷಿಸಿ:
In Gurgaon, a man carried his scooter on his shoulder to avoid traffic 😭 pic.twitter.com/HQdXpQ6leC
— Aaraynsh (@aaraynsh) September 3, 2025
ಗುರುಗ್ರಾಮದಲ್ಲಿ ದೈನಂದಿನ ಪ್ರಯಾಣದ ತೊಂದರೆಗಳನ್ನು ತೋರಿಸುವ ವೈರಲ್ ವಿಡಿಯೊಗಳ ದೀರ್ಘ ಪಟ್ಟಿಗೆ ಈ ವಿಡಿಯೊ ಸೇರ್ಪಡೆಯಾಗಿದೆ. ಅಲ್ಲಿ ಭಾರಿ ದಟ್ಟಣೆಯು ವಾಹನ ಚಾಲಕರನ್ನು ನಿರಾಶೆಗೊಳಿಸುತ್ತದೆ.
ಇತ್ತೀಚೆಗೆ ರೈಲ್ವೆ ಕ್ರಾಸಿಂಗ್ ಗೇಟ್ ಹಾಕಿದ್ದ ವೇಳೆ ಕಾಯಲು ತಾಳ್ಮೆಯಿರದ ವ್ಯಕ್ತಿಯೊಬ್ಬ ತನ್ನ ಬೈಕನ್ನು ಹೆಗಲ ಮೇಲೆ ಎತ್ತಿಕೊಂಡು ಕ್ರಾಸಿಂಗ್‌ನ ಎದುರು ಭಾಗಕ್ಕೆ ನಡೆದುಕೊಂಡು ಹೋಗುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತನನ್ನು ಬಾಹುಬಲಿ ಎಂದು ಕರೆದಿದ್ದರು. 100 ಕೆಜಿಗಿಂತ ಹೆಚ್ಚು ತೂಕದ ಬೈಕನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದಿದ್ದು, ಇದು ತೀವ್ರ ಬೆನ್ನು ನೋವಿಗೆ ಮತ್ತು ಸಂಧಿವಾತಕ್ಕೆ ಕಾರಣವಾಗಬಹುದು ಎಂದು ನೆಟ್ಟಿಗರು ಟೀಕಿಸಿದ್ದರು.
ಪ್ರಯಾಣಿಕರು ರೈಲ್ವೆ ಕ್ರಾಸಿಂಗ್‌ನಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಕಾಯುತ್ತಿದ್ದಾರೆ. ಸಿಗ್ನಲ್‌ಗಾಗಿ ಕಾಯಲು ಇಷ್ಟಪಡದ ಒಬ್ಬ ವ್ಯಕ್ತಿ, ತನ್ನ ಬೈಕನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾನೆ. ಆ ವ್ಯಕ್ತಿ ತನ್ನ ಕೈಗಳಿಂದ ಬೈಕನ್ನು ಎತ್ತಿ ರಸ್ತೆಯ ಇನ್ನೊಂದು ಬದಿಗೆ ಹೆಗಲ ಮೇಲೆ ಹೊತ್ತುಕೊಂಡು ಹೋಗುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಅಷ್ಟು ಭಾರದ ಬೈಕ್ ಎತ್ತಿಕೊಂಡರೂ ಅವನು ಕಷ್ಟಪಡುತ್ತಿರುವಂತೆ ಕಾಣುತ್ತಿಲ್ಲ, ಹಾಗೆಯೇ ವಿಶ್ರಾಂತಿ ಕೂಡ ತೆಗೆದುಕೊಳ್ಳಲಿಲ್ಲ. ಬಹುತೇಕ ಮಂದಿ 10-20 ಕೆ.ಜಿ. ತೂಕ ಹೊರಲು ಕಷ್ಟಪಡುತ್ತಾರೆ. ಅಂಥವರ ಮಧ್ಯೆ, ದ್ವಿಚಕ್ರ ವಾಹನವನ್ನೇ ಹೆಗಲ ಮೇಲೆ ಹೊತ್ತು ಸಾಗಿದ್ದ ವಿಡಿಯೊ ವೈರಲ್ ಆಗಿತ್ತು. ಈತನನ್ನು ಬಾಹುಬಲಿ ಎಂದೇ ನೆಟ್ಟಿಗರು ಕರೆದಿದ್ದರು, ಇನ್ನೂ ಕೆಲವರು ಕಾಯಲು ತಾಳ್ಮೆಯಿಲ್ಲವೆ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: Viral Video: ಸ್ಪೈಡರ್‌ಮ್ಯಾನ್ ವೇಷ ಧರಿಸಿ ಜನನಿಬಿಡ ರಸ್ತೆಯಲ್ಲಿ ಸಾಹಸ; ಬೈಕ್ ಸವಾರನಿಗೆ 15,000 ರೂ. ದಂಡ