ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೈಲಿನಲ್ಲಿ ಪತ್ನಿಗೆ ಕಾಲ್ಗೆಜ್ಜೆ ತೊಡಿಸಿದ ವೃದ್ಧ ಪತಿ; ಇವರನ್ನು ನೋಡಿ ಕಲಿಯಿರಿ ಎಂದ ನೆಟ್ಟಿಗರು

ತಮಿಳುನಾಡಿನ ಕೊಯಂಬತ್ತೂರು ಮೂಲದ ಮಹಿಳೆಯೊಬ್ಬರು ರೈಲು ಪ್ರಯಾಣದ ಸಮಯದಲ್ಲಿ ಮರೆಯಲಾಗದ ಪ್ರೇಮದ ಕ್ಷಣಕ್ಕೆ ಸಾಕ್ಷಿಯಾದರು. ಅದನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕು ಮೆಚ್ಚುಗೆ ಸೂಚಿಸಿದ್ದಾರೆ.

ರೈಲಿನಲ್ಲಿ ಪತ್ನಿಗೆ ಕಾಲ್ಗೆಜ್ಜೆ ತೊಡಿಸಿದ ವೃದ್ಧ ಪತಿ

-

Priyanka P Priyanka P Sep 8, 2025 7:52 PM

ಚೆನ್ನೈ: ಇದ್ದರೆ ಹೀಗಿರಬೇಕು ಎಂಬುದನ್ನು ಈ ದಂಪತಿಯಿಂದ ನೋಡಿ ಕಲಿಯಬೇಕು. ಇಂದಿನ ದಿನಗಳಲ್ಲಿ ಚಿಕ್ಕ-ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡು ವಿಚ್ಛೇದನ ಪಡೆದುಕೊಳ್ಳುವವರ ಮಧ್ಯೆ, ಈ ಆದರ್ಶ ದಂಪತಿಯಂತೆ ಬದುಕಿದರೆ ಜೀವನ ಎಷ್ಟೊಂದು ಸುಂದರ ಅಲ್ವಾ ಎಂದು ನಿಮಗೂ ಎನಿಸದೇ ಇರದು. ತಮಿಳುನಾಡಿನ ಕೊಯಂಬತ್ತೂರು ಮೂಲದ ಮಹಿಳೆಯೊಬ್ಬರು ರೈಲು (train) ಪ್ರಯಾಣದ ಸಮಯದಲ್ಲಿ ಮರೆಯಲಾಗದ ಪ್ರೇಮದ ಕ್ಷಣಕ್ಕೆ ಸಾಕ್ಷಿಯಾದರು. ಅದನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಪುಟದಲ್ಲಿ ಹಂಚಿಕೊಂಡಿದ್ದಾರೆ.

ರೈಲಿನ ಬದಿಯ ಲೋವರ್ ಬರ್ತ್‌ನಲ್ಲಿ ಕುಳಿತಿರುವ ವೃದ್ಧ ದಂಪತಿಯ ವಿಡಿಯೊವನ್ನು ಜಿಷ್ಮಾ ಉಣ್ಣಿಕೃಷ್ಣನ್ ಎಂಬುವವರು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಪತಿ ತನ್ನ ಪತ್ನಿಗೆ ಕಾಲ್ಗೆಜ್ಜೆ ಧರಿಸಲು ಸಹಾಯ ಮಾಡುವುದನ್ನು ಕಾಣಬಹುದು. ಪತ್ನಿಯು ಬಹಳ ಸಂತೋಷದಿಂದ ತನ್ನ ಕಾಲುಗಳನ್ನು ಚಾಚಿದ್ದಾಳೆ. ನಾನು ಪ್ರಯಾಣಿಸುತ್ತಿದ್ದೇನೆ ಎಂದು ಭಾವಿಸಿದ್ದೆ. ಆದರೆ ಒಂದು ಕ್ಷಣದಲ್ಲಿ ಜೀವಮಾನದ ಪ್ರೀತಿಗೆ ಸಾಕ್ಷಿಯಾದೆ ಎಂದು ಉಣ್ಣಿಕೃಷ್ಣನ್ ವಿಡಿಯೊದ ಜತೆಗಿನ ಶೀರ್ಷಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಂಪತಿಯ ಬಾಂಧವ್ಯದ ಬಗ್ಗೆ ಬಳಕೆದಾರರು ಸಂತೋಷ ವ್ಯಕ್ತಪಡಿಸಿದ್ದಾರೆ. ಇಂತಹ ದಂಪತಿಯನ್ನು ನೋಡಿ ಇಂದಿನ ಯುವಜನತೆ ಪ್ರೀತಿಯ ಪಾಠ ಕಲಿಯಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.

ವಿಡಿಯೊ ವೀಕ್ಷಿಸಿ:

ಇಳಿ ವಯಸ್ಸಿನಲ್ಲಿ ಮದುವೆಯಾಗಿದ್ದ ದಂಪತಿ

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ಉತ್ತಮ ನಿದರ್ಶನವೆಂಬಂತೆ ಕೇರಳದ ಸರ್ಕಾರಿ ವೃದ್ಧಾಶ್ರಮದಲ್ಲಿ ಭೇಟಿಯಾದ ಹಿರಿಯ ಜೀವಗಳು ಇತ್ತೀಚೆಗೆ ಪ್ರೀತಿಸಿ ಮದುವೆಯಾಗಿದ್ದರು. ಅವರ ಮದುವೆಯ ಫೋಟೊ ಮತ್ತು ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು, ಇದು ಭಾರಿ ವೈರಲ್ ಆಗಿತ್ತು.

ವಿಜಯ ರಾಘವನ್ (79) ಮತ್ತು ಸುಲೋಚನಾ (75) ಇಬ್ಬರೂ ವೃದ್ಧಾಶ್ರಮದಲ್ಲಿ ಭೇಟಿಯಾಗಿ ಮದುವೆಯಾದ ದಂಪತಿ. ವಿಜಯ ರಾಘವನ್ 2019ರಿಂದ ವೃದ್ಧಾಶ್ರಮದಲ್ಲೇ ವಾಸಿಸುತ್ತಿದ್ದರು ಮತ್ತು ಸುಲೋಚನಾ 2024ರಲ್ಲಿ ಅಲ್ಲಿಗೆ ಬಂದಿದ್ದಾರೆ. ನಂತರ ಅವರಿಬ್ಬರು ಭೇಟಿಯಾಗಿ ಸ್ನೇಹಿತರಾದರು. ತಮ್ಮ ಕಷ್ಟಸುಖಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಹೀಗಿರುವಾಗ ಕಾಲಾನಂತರದಲ್ಲಿ, ಅವರ ಸ್ನೇಹ ಪ್ರೀತಿಗೆ ತಿರುಗಿತು. ಬಾಂಧವ್ಯ ಬೆಳೆದಂತೆ, ಅವರು ಮದುವೆಯಾಗಲು ನಿರ್ಧರಿಸಿದ್ದಾರೆ. 2025ರ ಜುಲೈ 7ರಂದು ಇವರು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾದರು. ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು, ನಗರದ ಮೇಯರ್ ಎಂ.ಕೆ. ವರ್ಗೀಸ್ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಈ ಮದುವೆ ನಡೆದಿತ್ತು.

ಇದನ್ನೂ ಓದಿ: Chit fund scam: ಚೀಟಿ ಹೆಸರಲ್ಲಿ 40 ಕೋಟಿ ವಂಚಿಸಿ ದಂಪತಿ ಪರಾರಿ; ಡಿಸಿಎಂ, ಗೃಹ ಸಚಿವರಿಗೆ ದೂರು