Viral Video: ನೂಡಲ್ಸ್ ಹೀಗೂ ಮಾಡ್ತಾರಾ....? ವಿಲಕ್ಷಣ ಪಾಕವಿಧಾನದ ವಿಡಿಯೊ ವೈರಲ್
ಸಿಂಗಾಪುರದ ಕ್ಯಾಲ್ವಿನ್ ಲೀ ಎಂಬ ಫೇಮಸ್ ವ್ಯಕ್ತಿ ಕೋಕಾ ಕೋಲಾ ಮತ್ತು ಮೊಟ್ಟೆಗಳನ್ನು ಹಾಕಿ ನೂಡಲ್ಸ್ ತಯಾರಿಸಿದ್ದಾನೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ವೀಕ್ಷಕರಲ್ಲಿ ಕುತೂಹಲ ಹಾಗೂ ಗೊಂದಲವನ್ನು ಉಂಟುಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ಬಗೆಯ ಪಾಕವಿಧಾನ ಮಾಡುವ ರೀಲ್ಸ್‌ಗಳನ್ನು ನೀವೆಲ್ಲರೂ ನೋಡಿರಬಹುದು. ಅಂತಹದ್ದೇ ಮತ್ತೊಂದು ವಿಡಿಯೊ ಇಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಲ್ಲೊಬ್ಬ ವ್ಯಕ್ತಿ ನೂಡಲ್ಸ್ ಬೇಯಿಸಲು ನೀರಿನ ಬದಲು ತಂಪು ಪಾನೀಯವನ್ನು ಬಳಸಿದ್ದಾನೆ. ಆತನ ಈ ವಿಲಕ್ಷಣ ಪಾಕವಿಧಾನದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸಿಂಗಾಪುರದ ಕ್ಯಾಲ್ವಿನ್ ಲೀ ಎಂಬ ವ್ಯಕ್ತಿ ಕೋಕಾ ಕೋಲಾ ಮತ್ತು ಮೊಟ್ಟೆಗಳನ್ನು ಬಳಸಿ ತಯಾರಿಸಿದ ನೂಡಲ್ಸ್ ವಿಡಿಯೊ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಕ್ಯಾಲ್ವಿನ್ ಲೀ ಇತ್ತೀಚಿನ ಇನ್‌ಸ್ಟಾಗ್ರಾಂ ರೀಲ್‍ನಲ್ಲಿ, ನೂಡಲ್ಸ್, ಕೋಕಾ-ಕೋಲಾ ಮತ್ತು ಮೊಟ್ಟೆಗಳು ಈ ಮೂರು ಪದಾರ್ಥಗಳನ್ನು ಬೆರೆಸಿ ಒಂದು ರೀತಿಯ ಖಾದ್ಯವನ್ನು ತಯಾರಿಸಿದ್ದಾನೆ. ಇದು ಕೆಲವು ವೀಕ್ಷಕರಲ್ಲಿ ಕುತೂಹಲವನ್ನು ಉಂಟುಮಾಡಿದ್ದರೆ ಇನ್ನು ಕೆಲವರನ್ನು ಗೊಂದಲಕ್ಕೀಡು ಮಾಡಿದೆ.
ಈಗಾಗಲೇ ಸಾವಿರಾರು ವ್ಯೂವ್ಸ್ ಗಳಿಸಿರುವ ಈ ವಿಡಿಯೊದಲ್ಲಿ, ಸಿಂಗಾಪುರದ ವ್ಯಕ್ತಿ ಮೊದಲಿಗೆ ಒಂದು ಬಾಣಲೆಯಲ್ಲಿ ನೂಡಲ್ಸ್ ಹಾಕಿ ಅದಕ್ಕೆ ನೀರಿನ ಬದಲು ಕೋಕೋ ಕೋಲಾ ಹಾಕಿ ಬೇಯಿಸಿದ್ದಾನೆ. ನಂತರ ಇದಕ್ಕೆ ಎರಡು ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ಬೇಯಿಸಿದ್ದಾನೆ. ಈ ಪಾಕವಿಧಾನವು ವಿಲಕ್ಷಣವಾಗಿದ್ದರೂ ಅದನ್ನು ಸೇವಿಸಲು ಆತ ಭಯಪಡದೇ ಅದರ ರುಚಿ ನೋಡಿ ವಾವ್ ಎಂದು ಹೇಳಿದ್ದಾನೆ.
ಇದರ ವಿಡಿಯೊವನ್ನು ಪೋಸ್ಟ್ ಮಾಡಿ ಇದು ಸಖತ್ ರುಚಿಯಾಗಿದೆ ಎಂದು ಹೇಳಿದ್ದಾನೆ. ಹಾಗೇ ಆ ಖಾದ್ಯದ ಕುರಿತು ಒಂದಷ್ಟು ವಿವರಣೆಯನ್ನೂ ನೀಡಿದ್ದಾನೆ. ನೂಡಲ್ಸ್ ಕೋಕಾ-ಕೋಲಾ ಪರಿಮಳವನ್ನು ಚೆನ್ನಾಗಿ ಹೀರಿಕೊಂಡಿತು, ಮತ್ತು ಮೊಟ್ಟೆ ಅದ್ಭುತವಾದ ಕ್ರಿಂ ಟಚ್ ಅನ್ನು ನೀಡಿತು ಎಂದು ಬರೆದಿದ್ದಾನೆ. ಹಾಗೇ ನೆಟ್ಟಿಗರಿಗೆ ಈ ಪಾಕವಿಧಾನವನ್ನು ಪ್ರಯತ್ನಿಸುವಂತೆ ತಿಳಿಸಿದ್ದಾನೆ.
ಈ ಸುದ್ದಿಯನ್ನೂ ಓದಿ: Viral Video: ಇದೆಂಥಾ ಅಸಹ್ಯ! ತಯಾರಿಸಿಟ್ಟ ಜಾಮೂನ್ ಗೆ ಮೂತ್ರ ವಿಸರ್ಜನೆ ಮಾಡಿದ ಕೊಳಕ! ವಿಡಿಯೊ ವೈರಲ್!
ಈ ರೀತಿ ವಿಲಕ್ಷಣವಾದ ಪಾಕವಿಧಾನಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಂಡುಬಂದಿದ್ದು, ಇದೆ ಮೊದಲಲ್ಲ. ಈ ಹಿಂದೆ ವ್ಯಕ್ತಿಯೊಬ್ಬ ಕೋಕೋ ಕೋಲಾ ಬಳಸಿ ಪಾಸ್ತಾವನ್ನು ತಯಾರಿಸಿದ್ದ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ವೈರಲ್ ವಿಡಿಯೊದಲ್ಲಿ ಆತ ಖಾದ್ಯವನ್ನು ತಯಾರಿಸಲು, ಪಾಸ್ತಾಗೆ ಹಿಟ್ಟನ್ನು ತಯಾರಿಸಲು ಮೆಂಟೋಸ್ ಅನ್ನು ಮೊಟ್ಟೆಗಳೊಂದಿಗೆ ಬೆರೆಸಿ ನಂತರ ಹಿಟ್ಟನ್ನು ಪಾಸ್ತಾ ಯಂತ್ರದಲ್ಲಿ ಹಾಕಿ ಪಾಸ್ತಾ ತಯಾರಿಸಿದ್ದಾನೆ. ಇದಲ್ಲದೆ, ಕೋಕಾ-ಕೋಲಾವನ್ನು ಬಾಣಲೆಗೆ ಹಾಕಿ ಅದರಲ್ಲಿ ಪಾಸ್ತಾವನ್ನು ಬೇಯಿಸಿ ಸೇವಿಸಿದ್ದಾನೆ. ಈ ವಿಡಿಯೊ ಸುಮಾರು 1.5 ಲಕ್ಷ ವ್ಯೂವ್ಸ್ ಗಳಿಸಿದೆ. ಆದರೆ ಈ ಖಾದ್ಯ ನೆಟ್ಟಿಗರನ್ನು ಅಸಮಾಧಾನಗೊಳಿಸಿತ್ತು.