Viral Video: ಖ್ಯಾತ ಟಿಕ್‌ಟಾಕ್ ಸ್ಟಾರ್ ಅಶ್ಲೀಲ ವಿಡಿಯೊ ಲೀಕ್; ಸಂದರ್ಶನದಲ್ಲಿ ಆಕೆ ಹೇಳಿದ್ದೇನು ಗೊತ್ತಾ?
ಅಶ್ಲೀಲ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ನಂತರ ಸೋಶಿಯಲ್ ಮೀಡಿಯಾ ಲೋಕದಿಂದ ಕಣ್ಮರೆಯಾದ ಪಾಕಿಸ್ತಾನದ ಟಿಕ್ ಟಾಕರ್ ಇಮ್ಶಾ ರೆಹಮಾನ್ ಅವರು ಮತ್ತೆ ಕಾಣಿಸಿಕೊಂಡು ಮೊದಲ ಸಂದರ್ಶನವನ್ನು ನೀಡಿದ್ದಾಳೆ. ಅವರು ಈ ವೇಳೆ ಅಶ್ಲೀಲ ವಿಡಿಯೊಗಳು ನಕಲಿ ಎಂದು ಸ್ಪಷ್ಟಪಡಿಸಿದ್ದಾಳೆ ಮತ್ತು ಹಗರಣವು ಆಕೆಯ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಬಗ್ಗೆ ತಿಳಿಸಿದ್ದಾಳೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್(Viral News) ಆಗಿದೆ.
ಇಸ್ಲಾಮಾಬಾದ್: ನವೆಂಬರ್‌ನಲ್ಲಿ ನಡೆದ ನಕಲಿ ವಿಡಿಯೊ ಹಗರಣದ ನಂತರ ಸೋಶಿಯಲ್ ಮೀಡಿಯಾದಿಂದ ಕಣ್ಮರೆಯಾದ ಪಾಕಿಸ್ತಾನದ ಟಿಕ್ ಟಾಕರ್ ಇಮ್ಶಾ ರೆಹಮಾನ್ ಅವರು ಇತ್ತೀಚೆಗೆ ಮತ್ತೆ ಕಾಣಿಸಿಕೊಂಡು ತಮ್ಮ ಮೊದಲ ಸಂದರ್ಶನವನ್ನು ನೀಡಿದ್ದಾಳೆ. ಕಳೆದ ವರ್ಷದ ಕೊನೆಯಲ್ಲಿ ಇಮ್ಷಾ ರೆಹಮಾನ್ ಅಶ್ಲೀಲ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ನಂತರ ಆಕೆಯ ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು.
ಆದರೆ ನುಕ್ತಾ ಪಾಕಿಸ್ತಾನ್‍ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ಅಶ್ಲೀಲ ವಿಡಿಯೊಗಳು ನಕಲಿ ಎಂದು ಸ್ಪಷ್ಟಪಡಿಸಿದ್ದಾಳೆ ಮತ್ತು ಹಗರಣವು ಆಕೆಯ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಬಗ್ಗೆ ಮಾತನಾಡಿದ್ದಾಳೆ. ನಕಲಿ ವಿಡಿಯೊ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ ಎಂದು ಆಕೆ ಹೇಳಿದ್ದಾಳೆ.
Finally FIA arrested the culprit behind the Imsha Rehman Data leak. pic.twitter.com/sATQQ5LTH9
— Han🐣Nah (@YogurtBeaches) February 1, 2025
ನಕಲಿ ಅಶ್ಲೀಲ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಸಾರವಾದ ನಂತರ ಜನವರಿ 30 ರಂದು, ಇಮ್ಷಾ ರೆಹಮಾನ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಳೆ. ನಾನು ವಿಡಿಯೊವನ್ನು ನೋಡಿದೆ. ನನ್ನ ಜೀವನ ಮುಗಿದಂತೆ ಭಾಸವಾಯಿತು ಎಂದು ರೆಹಮಾನ್ ಹೇಳಿದ್ದಾಳೆ.ನನಗೆ ಯುನಿವರ್ಸಿಟಿಗೆ ಹೋಗಲು ಸಾಧ್ಯವಾಗಿಲ್ಲ ಜನರನ್ನು ಎದುರಿಸಲು ಆಗಲಿಲ್ಲ, ಅದು ಅಲ್ಲದೇ ಸಾಕಷ್ಟು ಕೊಲೆ ಬೆದರಿಕೆಗಳು ಬಂದಿತ್ತು ಎಂದು ಆಕೆ ತಾವು ಪಟ್ಟ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.
ನಕಲಿ ವಿಡಿಯೊಗಳನ್ನು ರಚಿಸುವ ಜನರ ವಿರುದ್ಧ ಆಕೆ ವಾಗ್ದಾಳಿ ನಡೆಸಿದ್ದಾಳೆ. "ಇತರರ ವಿಡಿಯೊಗಳನ್ನು ಮಾಡಿ ಮತ್ತು ಅವುಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದು ಒಳ್ಳೆಯದು ಎಂದು ಸೋಶಿಯಲ್ ಮೀಡಿಯಾದ ಕೆಲವರು ಭಾವಿಸುತ್ತಾರೆ. ಆದರೆ ಆ ವ್ಯಕ್ತಿಯ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅವರು ಯೋಚಿಸುವುದಿಲ್ಲ" ಎಂದು ರೆಹಮಾನ್ ಹೇಳಿದ್ದಾಳೆ.
"ಈ ವಿಡಿಯೊಗಳು ವೈರಲ್ ಆದಾಗ, ನಾನು ನನ್ನ ಖಾತೆಯಲ್ಲಿ ಸ್ಪಷ್ಟೀಕರಣವನ್ನು ನೀಡಬಹುದಿತ್ತು. ಆದರೆ ಈ ಘಟನೆಯ ಹಿಂದೆ ಯಾರಿದ್ದಾರೆ ಎಂದು ನೋಡಲು ನಾನು ಕಾನೂನು ಮಾರ್ಗವನ್ನು ತೆಗೆದುಕೊಳ್ಳಲು ಬಯಸಿದ್ದೆ" ಎಂದು ಆಕೆ ಹೇಳಿದ್ದಾಳೆ. ಈ ವೇಳೆ ಆಕೆ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್ಐಎ) ಯನ್ನು ಶ್ಲಾಘಿಸಿದ್ದು, ವಿಡಿಯೊಗಳಿಗೆ ಸಂಬಂಧಿಸಿದಂತೆ ಅವರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ: Viral News: ಲೀಕ್ ಆಯ್ತು ಪಾಕ್ ಟಿಕ್‌ಟಾಕ್ ಸ್ಟಾರ್ ಮರ್ಯಮ್ ಫೈಸಲ್ ಖಾಸಗಿ ವಿಡಿಯೊ; ಈ ಜಾಲಕ್ಕೆ ಬಲಿಯಾದ 5ನೇ ಸಂತ್ರಸ್ತೆ ಈಕೆ
ಮಾಹಿತಿ ಪ್ರಕಾರ, ರೆಹಮಾನ್ ನಕಲಿ ವಿಡಿಯೊಗಳನ್ನು ರಚಿಸಿದ್ದಕ್ಕಾಗಿ ಎಫ್ಐಎ ಗುಜ್ರಾನ್ವಾಲಾದಿಂದ ಅಬ್ದುಲ್ ಅಜೀಜ್ ಎಂಬ ವ್ಯಕ್ತಿಯನ್ನು ಬಂಧಿಸಿದೆ. ವಿಚಾರಣೆಯ ಸಮಯದಲ್ಲಿ, ಅಜೀಜ್ ತಾನು ಕೇವಲ ಮೆಮ್ ಅನ್ನು ರಚಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ. ಹೆಚ್ಚಿನ ವಿವರಗಳನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.