Viral Video: 'ಚಾಹನ್ ಕೆ ಮೊಹಲ್ಲಾ' ಹಾಡಿಗೆ ಕುಣಿದ ಜರ್ಮನ್ ಮಹಿಳೆ; ನೆಟ್ಟಿಗರು ಫುಲ್ ಫಿದಾ!
ಐಶ್ವರ್ಯಾ ರೈ ಮತ್ತು ಅಕ್ಷಯ್ ಕುಮಾರ್ ಅಭಿನಯದ 'ಆಕ್ಷನ್ ರಿಪ್ಲೇ' ಚಿತ್ರದ ಜನಪ್ರಿಯ ಹಾಡಿಗೆ ಜರ್ಮನ್ ಮಹಿಳೆಯೊಬ್ಬಳು ಸಖತ್ ಆಗಿ ಸೊಂಟ ಬಳುಕಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಹೋಳಿ ಸಮಯದಲ್ಲಿ ಈ ಡ್ಯಾನ್ಸ್ ರೀಲ್ ಅನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ಮಹಿಳೆಯ ನೃತ್ಯಕ್ಕೆ ಫಿದಾ ಆಗಿದ್ದಾರೆ.


ನವದೆಹಲಿ: ಹಾಡು, ನೃತ್ಯಕ್ಕೆ ದೇಶ, ಭಾಷೆಯ ಹಂಗಿಲ್ಲ ಅನ್ನುತ್ತಾರೆ. ಒಳ್ಳೆಯ ಹಾಡಿಗೆ ನಮಗೆ ಅರಿವೇ ಇಲ್ಲದ ಹಾಗೇ ಮನಸ್ಸು ಸೋಲುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ಹಾಡುಗಳಿಗೆ ವಿದೇಶಿಯರು ಕುಣಿಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುವುದನ್ನು ನೀವೆಲ್ಲಾ ನೋಡಿರಬಹುದು. ಈಗ ಅಂತದ್ದೇ ವಿಡಿಯೊವೊಂದು ಸಖತ್ ಸದ್ದು ಮಾಡುತ್ತಿದೆ. ಏನಿದು ವಿಡಿಯೊ, ಯಾವ ಹಾಡು, ಯಾರು ಆ ನೃತ್ಯಗಾರ್ತಿ ಎಂಬ ಕುತೂಹಲ ನಿಮಗೂ ಇರಬಹುದು ಅಲ್ವಾ....? ಐಶ್ವರ್ಯಾ ರೈ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 'ಆಕ್ಷನ್ ರಿಪ್ಲೇ' ಚಿತ್ರದ ಜನಪ್ರಿಯ ಹಾಡಿಗೆ ಜರ್ಮನ್ ಮಹಿಳೆಯೊಬ್ಬಳು ಸಖತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹೃದಯಗಳನ್ನು ಗೆದ್ದಿದ್ದಾಳೆ. ಆಕೆಯ ಡ್ಯಾನ್ಸ್ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಕಪ್ಪು ಕ್ರಾಪ್ ಟಾಪ್ ಮತ್ತು ಕಂದು ಬಣ್ಣದ ಗೋಲ್ಡನ್ ಸ್ಕರ್ಟ್ ಧರಿಸಿದ ಈ ಮಹಿಳೆ ಕ್ಯಾಮೆರಾ ಮುಂದೆ ಸೊಗಸಾಗಿ ಸೊಂಟ ಬಳುಕಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಹೋಳಿ ಸಮಯದಲ್ಲಿ ಈ ಡ್ಯಾನ್ಸ್ ರೀಲ್ ಅನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಟ್ರೆಂಡಿಂಗ್ ಹಾಡಿಗೆ ಜರ್ಮನ್ ಲೇಡಿ ಸ್ಟೆಪ್ಸ್ ಹಾಕುವುದನ್ನು ಕಂಡು ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ. ಹಾಗಾಗಿ ಸೋಶಿಯಲ್ ಮೀಡಿಯಾ ನೆಟ್ಟಿಗರಲ್ಲಿ ಕೆಲವರು ಅವಳ ಅಭಿನಯವನ್ನು ಹೊಗಳಿದರೆ ಅನೇಕರು ಅವಳ ನೃತ್ಯದ ಸ್ಟೈಲ್ ಮತ್ತು ಬಾಲಿವುಡ್ ಮೇಲಿನ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿ " ಅದ್ಭುತ" ಎಂದು ವರ್ಣಿಸಿದ್ದಾನೆ. ಇನ್ನು ಕೆಲವರು ‘ಹಾರ್ಟ್’ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
'ಆಕ್ಷನ್ ರಿಪ್ಲೇ' ಹಾಡಿಗೆ ಮಹಿಳೆ ಡ್ಯಾನ್ಸ್ ಮಾಡಿದ ವಿಡಿಯೊ ಇಲ್ಲಿದೆ ನೋಡಿ...
ಈ ಜರ್ಮನ್ ನರ್ತಕಿ ಭಾರತೀಯ ಹಾಡಿಗೆ ಟ್ಯೂನ್ ಮಾಡುತ್ತಿರುವುದು ಇದೇ ಮೊದಲಲ್ಲ. ಹೋಳಿ ಸಂದರ್ಭದಲ್ಲಿ, ಅವಳು ಬಾಲಿವುಡ್ ಸಂಗೀತದ ಮೇಲಿನ ಪ್ರೀತಿಯನ್ನು ತೋರಿಸುವ ಸಲುವಾಗಿ ಒಂದೆರಡು ವಿಡಿಯೊಗಳನ್ನು ಅಪ್ಲೋಡ್ ಮಾಡಿದ್ದಾಳೆ. ಅಂತಹ ಎಲ್ಲಾ ನೃತ್ಯ ವಿಡಿಯೊಗಳು ವೈರಲ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರ ಹೃದಯಗಳನ್ನು ಗೆದ್ದಿವೆ. ಬಾಲಿವುಡ್ ಹಾಡಿಗೆ ಅದರಲ್ಲೂ ನಟಿ ಐಶ್ವರ್ಯ ರೈ ಬಚ್ಚನ್ ಚಿತ್ರದ ಹಾಡಿಗೆ ಜನರು ನೃತ್ಯ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕಳೆದ ವರ್ಷ ಧೂಮ್ 2 ಚಿತ್ರದ ಬಾಲಿವುಡ್ ಹಾಡಿಗೆ ಯುವತಿಯೊಬ್ಬಳು ನೃತ್ಯ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ವಿಮಾನದಲ್ಲಿ ಹೋಳಿ ಡ್ಯಾನ್ಸ್ ಮಾಡಿದ ಸ್ಪೈಸ್ ಜೆಟ್ ಕ್ಯಾಬಿನ್ ಸಿಬ್ಬಂದಿ; ವಿಡಿಯೊ ವೈರಲ್
ವಿಡಿಯೊದಲ್ಲಿ ಧೂಮ್ 2 ಚಿತ್ರದ ಕ್ರೇಜಿ ಕಿಯಾ ರೇ... ಹಾಡಿಗೆ ಯುವತಿ ನೀಲಿ ವೆಲ್ವೆಟ್ ಕ್ರಾಪ್ ಟಾಪ್ ಮತ್ತು ಬಿಳಿ ಬ್ಯಾಗಿ ಪ್ಯಾಂಟ್ ಧರಿಸಿ ಇಬ್ಬರು ಹುಡುಗರೊಂದಿಗೆ ಸಲೀಸಾಗಿ ನೃತ್ಯ ಮಾಡಿದ್ದಾಳೆ. ಆಕೆ ನೃತ್ಯ ಮಾಡಿದ ವಿಡಿಯೊ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 100 ಸಾವಿರಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ. ಮತ್ತು ಅನೇಕ ನೆಟ್ಟಿಗರು ನೃತ್ಯಗಾರ್ತಿಯ ಅಭಿನಯವನ್ನು ಮೆಚ್ಚಿದ್ದಾರೆ.