ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿಮಾನದಲ್ಲಿ ಹೋಳಿ ಡ್ಯಾನ್ಸ್ ಮಾಡಿದ ಸ್ಪೈಸ್ ಜೆಟ್ ಕ್ಯಾಬಿನ್ ಸಿಬ್ಬಂದಿ; ವಿಡಿಯೊ ವೈರಲ್

Viral Video: ಹೋಳಿ ಹಬ್ಬದ ಪ್ರಯುಕ್ತ ಸ್ಪೈಸ್ ಜೆಟ್ ಕ್ಯಾಬಿನ್ ಸಿಬ್ಬಂದಿ ವಿಮಾನದಲ್ಲಿ ಹಿಟ್ ಬಾಲಿವುಡ್ ಹಾಡಾದ 'ಬಲಮ್ ಪಿಚ್ಕಾರಿʼಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಮಾನಯಾನ ಸಂಸ್ಥೆಯ ಈ ಪ್ರಯತ್ನಗಳನ್ನು ಕೆಲವರು ಹೊಗಳಿದರೆ, ಇತರರು ಟೀಕಿಸಿದ್ದಾರೆ.

ಸ್ಪೈಸ್ ಜೆಟ್‌ನಲ್ಲಿ ಹೋಳಿ ಸಂಭ್ರಮ

Profile pavithra Mar 15, 2025 1:40 PM

ಹೊಸದಿಲ್ಲಿ: ಹೋಳಿ (Holi) ಹಬ್ಬವೆಂದರೆ ಎಲ್ಲೆಲ್ಲೂ ಸಡಗರ, ಸಂಭ್ರಮ ತುಂಬಿರುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಸ್ಪೈಸ್ ಜೆಟ್ ಕ್ಯಾಬಿನ್ ಸಿಬ್ಬಂದಿ ವಿಮಾನದಲ್ಲಿ ಹಿಟ್ ಬಾಲಿವುಡ್ ಹಾಡಾದ 'ಬಲಮ್ ಪಿಚ್ಕಾರಿʼಗೆ ಸಖತ್‌ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ವಿಮಾನಯಾನ ಸಂಸ್ಥೆಯ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ ಕ್ಯಾಬಿನ್ ಸಿಬ್ಬಂದಿ ಬಿಳಿ ಉಡುಪನ್ನು ಧರಿಸಿ, ಡ್ಯಾನ್ಸ್ ಮಾಡಿದರೆ, ಪ್ರಯಾಣಿಕರು ಕೂಡ ಖುಷಿಯಿಂದ ಅವರನ್ನು ಹುರಿದುಂಬಿಸುತ್ತಿರುವುದು ಕಂಡು ಬಂದಿದೆ. ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೊ 84,000ಕ್ಕೂ ಹೆಚ್ಚು ವ್ಯೂವ್ಸ್ ಮತ್ತು 5,000ಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ.

ವೈರಲ್ ಆದ ವಿಡಿಯೊದಲ್ಲಿ, ಕ್ಯಾಬಿನ್ ಸಿಬ್ಬಂದಿ ಬಿಳಿ ಉಡುಗೆಗಳನ್ನು ಧರಿಸಿ, ʼಯೇ ಜವಾನಿ ಹೈ ದೀವಾನಿʼ ಟ್ರ್ಯಾಕ್‌ಗೆ ಸಖತ್‌ ಆಗಿ ಹೆಜ್ಜೆ ಹಾಕಿರುವುದು ಕಂಡು ಬಂದಿದೆ. ವಿಮಾನದಲ್ಲಿನ ಈ ಹಬ್ಬದ ವಾತಾವರಣವು ಪ್ರಯಾಣಿಕರಿಗೆ ಅನಿರೀಕ್ಷಿತ ಹೋಳಿ ಸಂಭ್ರಮದ ಜತೆಗೆ ಆನಂದವನ್ನುಂಟು ಮಾಡಿತು.

ಸ್ಪೈಸ್ ಜೆಟ್ ಕ್ಯಾಬಿನ್ ಸಿಬ್ಬಂದಿಯ ಹೋಳಿ ಡ್ಯಾನ್ಸ್‌ ಇಲ್ಲಿದೆ ನೋಡಿ...

ಈ ವಿಡಿಯೊ 84,000ಕ್ಕೂ ಹೆಚ್ಚು ವ್ಯೂವ್ಸ್ ಮತ್ತು 5,000ಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಿ, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ವಿಮಾನ ಯಾನದ ಪ್ರಯತ್ನಗಳನ್ನು ಕೆಲವರು ಹೊಗಳಿದರೆ, ಇತರರು ಟೀಕಿಸಿದ್ದಾರೆ. "ಒಂದು ಕಾಲದಲ್ಲಿ ಸ್ಪೈಸ್ ಜೆಟ್ ಆಗಿರುವುದಕ್ಕೆ ಹೆಮ್ಮೆ ಇದೆ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. "ಇತರ ವಿಮಾನಯಾನ ಸಂಸ್ಥೆಗಳ ಸಿಬ್ಬಂದಿಗೆ ಇಂದು ರಜೆ ಇರುತ್ತದೆ. ಆದರೆ ಎಸ್‌ಜಿ ಸಿಬ್ಬಂದಿ? ಅವರು ವಿಮಾನದ ಮಧ್ಯದಲ್ಲಿ ಹೋಳಿಯನ್ನು ಆನಂದಿಸುತ್ತಿದ್ದಾರೆ!" ಎಂದು ಇನ್ನೊಬ್ಬರು ಹೇಳಿದ್ದಾರೆ.

ಆದರೆ ಕೆಲವು ನೆಟ್ಟಿಗರು ಈ ಕೃತ್ಯವನ್ನು ಟೀಕಿಸಿದ್ದಾರೆ. ಇವರು "ವೃತ್ತಿಪರವಲ್ಲ" ಎಂದು ಹೇಳಿದ್ದಾರೆ. "ತಮ್ಮ ಉದ್ಯೋಗಿಗಳಿಂದ ನೃತ್ಯವನ್ನು ಈ ರೀತಿ ಮಾಡಿಸಿದ್ದು ತಪ್ಪು” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. "ಕ್ಯಾಬಿನ್ ಸಿಬ್ಬಂದಿ ಸದಸ್ಯನಾಗಿ, ನಾನು ಅದನ್ನು ಪ್ರಶಂಸಿಸುವುದಿಲ್ಲ. ಇದು ವೃತ್ತಿಪರವಲ್ಲ" ಎಂದು ಇನ್ನೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Holi 2025: ಹೋಳಿ ಹಬ್ಬದ ಪೌರಾಣಿಕ ಹಿನ್ನೆಲೆ ಏನು...? ಹೋಲಿಕಾ ದಹನ ಯಾಕೆ ಮಾಡುತ್ತಾರೆ ಗೊತ್ತಾ..?
"ಇದು ವೃತ್ತಿಪರವಲ್ಲ, ವಿಮಾನಯಾನ ಸಂಸ್ಥೆಗಳು ಕೇವಲ ಪ್ರಭಾವವನ್ನು ಬೀರಲು ಕೆಲವು ಮಾನದಂಡಗಳನ್ನು ಕಾಪಾಡಿಕೊಳ್ಳುವುದು ಮತ್ತು ಸಿಬ್ಬಂದಿಯ ಗೌರವದೊಂದಿಗೆ ರಾಜಿ ಮಾಡಿಕೊಳ್ಳುವುದು ನ್ಯಾಯಯುತವಲ್ಲ" ಎಂದು ಮೂರನೆಯವರು ಅಭಿಪ್ರಾಯಪಟ್ಟಿದ್ದಾರೆ. "ಇದಕ್ಕಾಗಿಯೇ ಭಾರತದಲ್ಲಿ ಕ್ಯಾಬಿನ್ ಸಿಬ್ಬಂದಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ದಯವಿಟ್ಟು ಸುರಕ್ಷತೆ, ಭದ್ರತೆ ಮತ್ತು ಗ್ರಾಹಕ ಸೇವೆಯ ಬಗ್ಗೆ ಗಮನ ಹರಿಸಿ" ಎಂದು ಮತ್ತೊಬ್ಬರು ಹೇಳಿದ್ದಾರೆ.