#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಸಸ್ಪೆಂಡ್‌ ಮಾಡಿದ ಸೀನಿಯರ್ಸ್‌ಗೆ ಆಫೀಸ್ ಎದುರು ಟೀ ಅಂಗಡಿ ಇಟ್ಟು ಚಮಕ್‌ ಕೊಟ್ಟ ಇನ್ಸ್‌ಪೆಕ್ಟರ್‌

ಉತ್ತರ ಪ್ರದೇಶದ ಅಮಾನತುಗೊಂಡ ಪೊಲೀಸ್ ಇನ್ಸ್‌ಪೆಕ್ಟರ್‌ ತಮ್ಮ ಅರ್ಧ ಸಂಬಳವನ್ನು ಪಡೆಯಲು ನಿರಾಕರಿಸಿ ಝಾನ್ಸಿಯಲ್ಲಿ ಸಿನಿಯರ್ಸ್‍ ಆಫೀಸ್‍ ಮುಂದೆ ಚಹಾ ಅಂಗಡಿಯನ್ನು ಹಾಕಿ, ಈ ಅಂಗಡಿಯಲ್ಲಿ ಗಳಿಸಿದ ಹಣದಿಂದ ಜೀವನ ನಡೆಸುವುದಾಗಿ ತಿಳಿಸಿದ್ದಾನೆ. ಇನ್ಸ್‌ಪೆಕ್ಟರ್‌ ಚಹಾ ಮಾರಾಟ ಮಾಡಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗಿದೆ.

ಆಫೀಸ್ ಎದುರು ಟೀ ಅಂಗಡಿ ಇಟ್ಟು ಸೀನಿಯರ್ಸ್‌ ಚಮಕ್‌ ಕೊಟ್ಟ ಸಸ್ಪೆಂಡೆಡ್‌ ಇನ್ಸ್‌ಪೆಕ್ಟರ್‌

Viral Video

Profile pavithra Feb 4, 2025 3:33 PM

ಲಖನೌ: ಪೊಲೀಸ್ ಅಧಿಕಾರಿಗಳು ಯಾವುದಾದರೂ ಕಾರಣಕ್ಕೆ ಅಮಾನತುಗೊಂಡಾಗ ಅವರಿಗೆ ಜೀವನ ನಡೆಸಲು ಅರ್ಧ ಸಂಬಳವನ್ನು ನೀಡಲಾಗುತ್ತದೆ. ಇದೀಗ ಉತ್ತರ ಪ್ರದೇಶದ ಅಮಾನತುಗೊಂಡ ಪೊಲೀಸ್ ಇನ್ಸ್‌ಪೆಕ್ಟರ್‌ ಒಬ್ಬ ಅರ್ಧ ಸಂಬಳವನ್ನು ನಿರಾಕರಿಸಿ ಟೀ ಅಂಗಡಿಯೊಂದನ್ನು ಹಾಕಿಕೊಂಡಿದ್ದಾನಂತೆ. ಟೀ ಅಂಗಡಿಯನ್ನು ನಡೆಸುವ ಮೂಲಕ ಗಳಿಸಿದ ಆದಾಯದಿಂದ ಮನೆಯನ್ನು ನಡೆಸುವುದಾಗಿ ತಿಳಿಸಿ ಮೇಲಾಧಿಕಾರಿಗೆ ಪತ್ರವನ್ನು ಬರೆದಿದ್ದಾನೆ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಮಾನತುಗೊಂಡ ಪೊಲೀಸ್ ಅಧಿಕಾರಿ ತನ್ನ ಸಂಬಳದ ಒಂದು ಭಾಗವನ್ನು ಪಡೆಯಲು ನಿರಾಕರಿಸಿ ಟೀ ಅಂಗಡಿ ಮೂಲಕ ಜೀವನ ನಡೆಸುತ್ತೇನೆ ಎಂದಿರುವುದು ಈಗ ಎಲ್ಲೆಡೆ ವೈರಲ್‌ ಆಗಿದೆ. ಇನ್ಸ್‌ಪೆಕ್ಟರ್‌ ಟೀ ತಯಾರಿಸುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

ಅಮಾನತುಗೊಂಡ ಪೊಲೀಸ್ ಅಧಿಕಾರಿಯನ್ನು ಪೊಲೀಸ್ ಇನ್ಸ್‌ಪೆಕ್ಟರ್‌ ಮೋಹಿತ್ ಯಾದವ್ ಎಂದು ಗುರುತಿಸಲಾಗಿದೆ. ರಿಸರ್ವ್ ಇನ್ಸ್‌ಪೆಕ್ಟರ್‌ (ಆರ್‌ಐ) ಅವರೊಂದಿಗಿನ ವಿವಾದದ ನಂತರ ಇನ್ಸ್‌ಪೆಕ್ಟರ್‌ ಅನ್ನು ತಾತ್ಕಾಲಿಕವಾಗಿ ಕೆಲಸದಿಂದ ತೆಗೆದುಹಾಕಲಾಗಿತ್ತು. ಮಾಹಿತಿ ಪ್ರಕಾರ, ಈ ಘಟನೆಯ ನಂತರ ಆತ ಇಲಾಖೆ ವಿಚಾರಣೆಯನ್ನು ಎದುರಿಸುತ್ತಿದ್ದಾನೆ ಎನ್ನಲಾಗಿದೆ.



ಯಾದವ್ ತನ್ನ ಚಹಾ ಅಂಗಡಿಯಲ್ಲಿ ನಿಂತು ಚಹಾವನ್ನು ತಯಾರಿಸುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಿನಿಯರ್ಸ್‍ ಆಫೀಸ್‍ನ ಮುಂದೆ ಚಹಾ ಮಾರಾಟಗಾರನಾಗಿ ನಿಂತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

"ನಾನು ಪೊಲೀಸ್ ಇನ್ಸ್‌ಪೆಕ್ಟರ್‌ ಆಗಿದ್ದೇನೆ. ನಾನು ಎಲ್ಲಿಗೆ ಹೋದರೂ, ಒಂದಲ್ಲ ಒಂದು ಘಟನೆಯನ್ನು ಸೃಷ್ಟಿಸಲಾಗುತ್ತದೆ ಮತ್ತು ನನ್ನ ಮೇಲೆ ಇಲಾಖಾ ತನಿಖೆ ನಡೆಸಲಾಗುತ್ತದೆ. ನನ್ನ ಅಮಾನತು ಅವಧಿಯಲ್ಲಿ, ನಾನು ಅರ್ಧದಷ್ಟು ಸಂಬಳವನ್ನು ಸಹ ತೆಗೆದುಕೊಳ್ಳುವುದಿಲ್ಲ ಎಂದು ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ನಾನು ನನ್ನ ಸ್ವಂತ ವ್ಯವಹಾರವನ್ನು ಮಾಡುತ್ತೇನೆ. ನಾನು ನನ್ನ ಮನೆಯನ್ನು ಚಹಾ ಅಂಗಡಿಯಿಂದ ಮಾತ್ರ ನಡೆಸುತ್ತೇನೆ" ಎಂದು ಯಾದವ್ ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಮುಂಬೈ ಪೊಲೀಸ್‌ ಕೊಳಲಿನ ಮಾಧುರ್ಯಕ್ಕೆ ಮನಸೋಲದವರೇ ಇಲ್ಲ- ವಿಡಿಯೊ ವೈರಲ್

ಇನ್ಸ್‌ಪೆಕ್ಟರ್‌ ಯಾದವ್ ಅಮಾನತಿಗೆ ಕಾರಣವಾದ ವಿವಾದವು ಜನವರಿ 15 ರಂದು ಪೊಲೀಸ್ ಲೈನ್ಸ್‌ನಲ್ಲಿ ಸಂಭವಿಸಿದೆ.