Viral Video: ಮಲಗಿದ್ದ ವ್ಯಕ್ತಿಯ ಮೈ ಮೇಲೆ ಹರಿದ ದೈತ್ಯ ಕಾಳಿಂಗ ಸರ್ಪ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!
ಹಾಸಿಗೆಯ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ದೈತ್ಯಾಕಾರದ ಕಾಳಿಂಗ ಸರ್ಪ ಹರಿದುಕೊಂಡು ಹೋಗುತ್ತಿದ್ದರೂ ಆತ ಸ್ವಲ್ಪ ಕೂಡ ಹೆದರದೇ ಅಲುಗಾಡದೆ ಮಲಗಿಕೊಂಡಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.


ಡೆಹ್ರಡೂನ್: ಹಾವೆಂದರೆ ಸಾಕು ಎಲ್ಲರೂ ಬೆಚ್ಚಿಬೀಳುತ್ತಾರೆ. ಅಂಥದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಮೇಲೆ ದೈತ್ಯಾಕಾರದ ಕಾಳಿಂಗ ಸರ್ಪ ಹರಿದರೂ ತುಟಿಕ್ ಪಿಟಿಕ್ ಎನ್ನದೇ ಸುಮ್ಮನೇ ಮಲಗಿದ್ದಾನಂತೆ. ಇದೇನೂ ನಿಜನಾ...ಸುಳ್ಳಾ ಎಂಬ ಅನುಮಾನ ನಿಮಗೂ ಕೂಡ ಇದೆಯಾ....? ಈ ಸುದ್ದಿಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಹಾಸಿಗೆಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ಎಚ್ಚರದಲ್ಲಿರುವಾಗಲೇ ಆತನ ಮೈಮೇಲೆ ಕಾಳಿಂಗ ಸರ್ಪ(King Cobra) ಹರಿದುಕೊಂಡು ಹೋಗಿದೆ. ಮೈ ಮೇಲೆ ಹಾವು ಹರಿಯುತ್ತಿರುವುದು ಆತನಿಗೆ ಗೊತ್ತಿದ್ದರೂ ಕೂಡ ಆತ ಸುಮ್ಮನೇ ಮಲಗಿಯೇ ಇದ್ದಾನಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವಿಷಕಾರಿ ಕಾಳಿಂಗ ಸರ್ಪ ಮೈ ಮೇಲೆ ಇದ್ದರೂ ಆತ ಏನೂ ಕೂಡ ಮಾಡದೇ ಸುಮ್ಮನೇ ಮಲಗಿರುವುದನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಉತ್ತರಾಖಂಡದಲ್ಲಿ ಈ ಘಟನೆ ನಡೆದಿದೆಯಂತೆ. ಆದರೆ ಇದು ನೈಜ ಘಟನೆಯೇ ಎಂಬುದು ತಿಳಿದುಬಂದಿಲ್ಲ!
ವೈರಲ್ ವಿಡಿಯೊದಲ್ಲಿ ವ್ಯಕ್ತಿಯ ಕಾಲುಗಳ ಮೇಲೆ ನಿಧಾನವಾಗಿ ಕಾಳಿಂಗ ಸರ್ಪ ಹರಿದು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಹಾವು ಮೈಮೇಲಿದ್ದರೂ ಆತ ಸ್ವಲ್ಪ ಕೂಡ ಭಯಪಡದೆ ಕಣ್ಣುಬಿಟ್ಟುಕೊಂಡು ಮಲಗಿದ್ದಾನಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ.
ಆ ವ್ಯಕ್ತಿಯ ತಾಳ್ಮೆಯ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತರರು ಅವನ ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅವನಿಗೆ ಬೇಜವಾಬ್ದಾರಿ ವ್ಯಕ್ತಿ ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಅಲ್ಲದೇ ಈ ರೀತಿಯ ವಿಡಿಯೊಗಾಗಿ ಜೀವವನ್ನು ಪಣಕ್ಕಿಡುವುದು ಒಳ್ಳೆಯದಲ್ಲ ಎಂದು ಕೆಲವರು ಕಿಡಿಕಾರಿದ್ದಾರೆ. ಒಬ್ಬ ನೆಟ್ಟಿಗರು, "ಕ್ಯಾಮೆರಾಮೆನ್ ಸಾಯಲಿಲ್ಲ" ಎಂದು ಹೇಳಿದ್ದಾರೆ. ಮತ್ತೊಬ್ಬರು, “ಕಾಳಿಂಗ ಸರ್ಪ ನಿಮಗೆ ರೆಕಾರ್ಡ್ ಮಾಡಲು ಅವಕಾಶ ಮಾಡಿಕೊಟ್ಟಿತ್ತು” ಎಂದಿದ್ದಾರೆ.ಇನ್ನು ಕೆಲವರು ಆ ಹಾವನ್ನು ನೋಡಿ ಅದು ಆ ವ್ಯಕ್ತಿ ಸಾಕಿದ ಹಾವಾಗಿರಬೇಕು ಎಂದು ಹೇಳಿದ್ದಾರೆ.
ಕಾಳಿಂಗ ಸರ್ಪದ ಬೆಚ್ಚಿಬೀಳಿಸುವ ವಿಡಿಯೊ ಇಲ್ಲಿದೆ ನೋಡಿ...
ಈ ಸುದ್ದಿಯನ್ನೂ ಓದಿ:Viral News: ಪ್ರೀತಿ, ಮೋಸ, ಮದುವೆ-ತನ್ನ ಜೀವನದಲ್ಲಾದ ಈ ಮೂರು ಅನುಭವವನ್ನು ಬಿಚ್ಚಿಟ್ಟ ಮಹಿಳೆ
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಹಾರ್ದಿದಾಲಿ ಗ್ರಾಮದ ಮನೆಯೊಂದರ ನೆಲಮಾಳಿಗೆಯಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳು ಒಟ್ಟಿಗೆ ಸುರುಳಿಯಾಗಿ ಸುತ್ತಿಕೊಂಡು ಸ್ಥಳೀಯರನ್ನು ಬೆಚ್ಚಿ ಬೀಳಿಸಿತ್ತು. ಈ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ವರದಿ ಪ್ರಕಾರ, ನೆಲಮಾಳಿಗೆಯ ಗೂಡಿನಂತಹ ರಚನೆಯಲ್ಲಿ ಡಜನ್‍ಗಟ್ಟಲೆ ಹಾವುಗಳು ಕಂಡುಬಂದಿದ್ದು, ಗ್ರಾಮಸ್ಥರು ತಕ್ಷಣ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿ ಪರಿಶೀಲನೆ ನಡೆಸುವಂತೆ ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದರು.