Viral Video: ನ್ಯಾಯಾಲಯದ ಹೊರಗೆ ಕಕ್ಷಿದಾರರಿಗೆ ಹಿಗ್ಗಾಮುಗ್ಗಾ ಥಳಿಸಿದ ವಕೀಲರು; ವಿಡಿಯೊ ನೋಡಿ
ಪಾಕಿಸ್ತಾನದಲ್ಲಿ ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿದ್ದು ತಪ್ಪಾಗಿದ್ದಕ್ಕೆ ವಕೀಲರು ಮತ್ತು ಅವರ ಕಕ್ಷಿದಾರರ ನಡುವೆ ಹಿಂಸಾತ್ಮಕ ಜಗಳ ನಡೆದಿದೆ. ಈ ಆತಂಕಕಾರಿ ವಿಡಿಯೊ ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಕಾನೂನು ವೃತ್ತಿಯ ನೈತಿಕ ಮಾನದಂಡಗಳನ್ನು ಪ್ರಶ್ನಿಸಿದ್ದಾರೆ.
![ನ್ಯಾಯಾಲಯದ ಹೊರಗೆ ವಕೀಲರು ಕಕ್ಷಿದಾರರಿಗೆ ಹೀಗಾ ಮಾಡೋದು!?](https://cdn-vishwavani-prod.hindverse.com/media/original_images/lawyer_fight_viral.jpg)
lawyer fight viral
![Profile](https://vishwavani.news/static/img/user.png)
ಇಸ್ಲಾಮಾಬಾದ್: ಸಾಮಾನ್ಯವಾಗಿ ಎಲ್ಲ ಕೇಸ್‍ಗಳು ನ್ಯಾಯಾಲಯದ ಒಳಗೆ ಇತ್ಯರ್ಥವಾಗುವುದಿಲ್ಲ. ಕೆಲವೊಂದು ಕೇಸ್‍ಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳುತ್ತಾರೆ. ಅದೇರೀತಿ ಇಲ್ಲೊಂದು ಕೇಸ್ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಿದ್ದು, ಆದರೆ ಅದು ತಪ್ಪಾಗಿ ಇತ್ಯರ್ಥವಾದ ಕಾರಣ ಪಾಕಿಸ್ತಾನದ ನ್ಯಾಯಾಲಯದ ಹೊರಗೆ ವಕೀಲರು ಮತ್ತು ಅವರ ಕಕ್ಷಿದಾರರ ನಡುವೆ ಹಿಂಸಾತ್ಮಕ ಜಗಳ ನಡೆದಿದೆ. ಈ ಆತಂಕಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ನ್ಯಾಯಾಲಯದ ಕಟ್ಟಡದ ಬಳಿಯ ಅಂಗಳಕ್ಕೆ ಬಂದ ವಕೀಲರ ಗುಂಪು ಕುರ್ಚಿಗಳನ್ನು ಎತ್ತಿಕೊಂಡು ಅಲ್ಲಿದ್ದ ಮೂವರು ಕಕ್ಷಿದಾರರ ಮೇಲೆ ದಾಳಿ ಮಾಡಿದ್ದಾರೆ. ಈ ವಾಗ್ವಾದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಹಿಂಸಾತ್ಮಕವಾದ ಜಗಳವನ್ನು ಕಂಡು ಅಲ್ಲಿದ್ದ ಜನರು ಆಘಾತಗೊಂಡಿದ್ದಾರೆ.
Kalesh b/w Lawyers-Client (Our Of Court Settlement in Pakistan)
— Ghar Ke Kalesh (@gharkekalesh) January 30, 2025
pic.twitter.com/TOibMAGikF
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶವನ್ನು ಹುಟ್ಟು ಹಾಕಿದೆ. ಅನೇಕರು ಕಾನೂನು ವೃತ್ತಿಯ ನೈತಿಕ ಮಾನದಂಡಗಳನ್ನು ಪ್ರಶ್ನಿಸಿದ್ದಾರೆ. ಕಾಮೆಂಟ್ ವಿಭಾಗಗಳಲ್ಲಿ ನೆಟ್ಟಿಗರು ಅನೇಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. "ದೇಶದಿಂದ ವಿಭಜಿಸಲ್ಪಟ್ಟಿದ್ದು, ಕಾಲೇಶ್‍ನಿಂದ ಒಂದಾಗಿದೆ" ಎಂದು ಒಬ್ಬ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ವಿಡಿಯೊದಲ್ಲಿ ಸೆರೆಯಾದ ಘಟನೆ ನಡೆದ ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ಸ್ಪಷ್ಟವಾಗಿಲ್ಲ.
ಈ ಸುದ್ದಿಯನ್ನೂ ಓದಿ:Viral Video: ಟೋಲ್ ಗೇಟ್ ಬಳಿ ಗುಂಡು ಹಾರಿಸಿ ಕಿಡಿಗೇಡಿಗಳ ಅಟ್ಟಹಾಸ- ವಿಡಿಯೊ ಫುಲ್ ವೈರಲ್
ಈ ತಿಂಗಳ ಆರಂಭದಲ್ಲಿ, ರಾಜಸ್ಥಾನದ ಜೋಧಪುರದಲ್ಲಿ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಮತ್ತೊಂದು ನಾಟಕೀಯ ಜಗಳವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ವಂಚಿಸಿ ಸಿಕ್ಕಿಬಿದ್ದ ವಿದ್ಯಾರ್ಥಿ ಮತ್ತು ಮೇಲ್ವಿಚಾರಕರ ನಡುವಿನ ಜಗಳವನ್ನು ಸೆರೆಹಿಡಿಯಲಾಗಿತ್ತು. ಇದು ಎರಡು ಗಂಟೆಗಳಲ್ಲಿ 50,000ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿತ್ತು.