Viral Video: 10 ರೂ. ಸಿಗರೇಟ್ 12ರೂ.ಗೆ ಮಾರಾಟ ಮಾಡ್ತಾರೆ... ಗುರೂಜಿ ಎದುರು ಭಕ್ತನ ಗೋಳಾಟ! ಈ ವಿಡಿಯೊ ನೋಡಿ
Local Tapris: ಜಿಎಸ್‌ಟಿ 2.0 ಜಾರಿಗೆ ತರುವ ಮೊದಲೇ, ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಪೆಟ್ಟಿ ಅಂಗಡಿ ಮತ್ತು ಅಂಗಡಿ ಮಾಲೀಕರು ಸಿಗರೇಟ್‌ಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರಂತೆ. ಈ ಬಗ್ಗೆ ವ್ಯಕ್ತಿಯೊಬ್ಬ ಜನಪ್ರಿಯ ಗುರು ಅನಿರುದ್ಧಾಚಾರ್ಯ ಅವರ ಬಳಿ ಮಾತನಾಡಿರುವ ವಿಡಿಯೊ ವೈರಲ್ ಆಗಿದೆ.

-

ನವದೆಹಲಿ: ಭಾರತ ಸರ್ಕಾರ ಸೆಪ್ಟೆಂಬರ್ 22 ರಂದು ದೇಶದಲ್ಲಿ ಜಿಎಸ್‌ಟಿ 2.0 (GST 2.0) ಜಾರಿಗೆ ತರುವ ಮೊದಲೇ, ಗ್ರಾಮೀಣ ಪ್ರದೇಶಗಳು ಮತ್ತು ಹಳ್ಳಿಗಳಲ್ಲಿ ಸ್ಥಳೀಯ ಪೆಟ್ಟಿ ಅಂಗಡಿ ಮತ್ತು ಅಂಗಡಿ ಮಾಲೀಕರು ಸಿಗರೇಟ್‌ಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರಂತೆ. ಈ ಬಗ್ಗೆ ಜನಪ್ರಿಯ ಗುರು ಅನಿರುದ್ಧಾಚಾರ್ಯರೊಂದಿಗಿನ (Aniruddhacharya) ವ್ಯಕ್ತಿಯೊಬ್ಬ ನಡೆಸಿದ ವೈರಲ್ ಸಂವಾದದಿಂದ ತಿಳಿದುಬಂದಿದೆ.ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೊ ವೈರಲ್ (Viral Video) ಆಗಿದ್ದು, ಅನಿರುದ್ಧಾಚಾರ್ಯ ಮತ್ತು ಅವರ ಅನುಯಾಯಿಯೊಬ್ಬರ ನಡುವಿನ ತಮಾಷೆಯ ಸಂಭಾಷಣೆಯು ಬಹಿರಂಗವಾಗಿದೆ.
ಬೋಳು ತಲೆಯ ಈ ವ್ಯಕ್ತಿ ಅನಿರುದ್ಧಾಚಾರ್ಯ ಅವರ ಬಳಿ ಧೂಮಪಾನ ಮಾಡಲು ತೊಂದರೆಯಾಗುತ್ತಿದೆ, ದಿನಕ್ಕೆ 10 ರಿಂದ 12 ಸಿಗರೇಟ್ ಸೇದುವುದಾಗಿ ಹೇಳಿದ್ದಾರೆ. ಕುತೂಹಲಕಾರಿಯಾಗಿ ಅನಿರುದ್ಧಾಚಾರ್ಯರು ಆತನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅನುಯಾಯಿ ತನ್ನ ಸ್ನೇಹಿತರ ಕಾರಣದಿಂದಾಗಿ ಹೆಚ್ಚುವರಿ ಸಿಗರೇಟ್ ಸೇದಲು ಒಲವು ತೋರುವುದಾಗಿ ಹೇಳಿದ್ದಾರೆ.
ವಿಡಿಯೊ ವೀಕ್ಷಿಸಿ:
This guy is from my hometown 🤣🤣 pic.twitter.com/VqIu71RUbb
— Prayag (@theprayagtiwari) September 22, 2025
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ನೀವು ನಂಬುತ್ತೀರಾ ಅಥವಾ ಇಲ್ಲವೇ ಎಂದು ಅನಿರುದ್ಧಾಚಾರ್ಯರು ಆ ವ್ಯಕ್ತಿಯನ್ನು ಕೇಳಿದಾಗ, ಅನುಯಾಯಿ ಸಕಾರಾತ್ಮಕವಾಗಿ ಉತ್ತರಿಸಿದರು. ಆದರೆ, ಸ್ಥಳೀಯ ಅಂಗಡಿ ಮಾಲೀಕರು ಹೊಗೆಯನ್ನು ಉಸಿರಾಡದೆ ಸಿಗರೇಟ್ ಸೇವಿಸುವವರೆಗೆ ಅದು ಹಾನಿಕಾರಕವಲ್ಲ ಎಂದು ಹೇಳುತ್ತಾರೆ ಎಂದು ಹೇಳಿದರು. ನಂತರ ಅವರು ಗುರುಗಳಿಗೆ ತಮ್ಮ ನಿವಾಸದ ಬಳಿಯಿರುವ ಸಣ್ಣ ಟ್ಯಾಪ್ರಿಗಳು ಭಾರತ ಸರ್ಕಾರ ಜಿಎಸ್‌ಟಿ 2.0 ವಿಧಿಸುವ ಮೊದಲೇ 10 ರೂ.ಗಳ ಸಿಗರೇಟ್ ಅನ್ನು 12 ರೂ.ಗಳಿಗೆ ಮಾರಾಟ ಮಾಡಲು ಪ್ರಾರಂಭಿಸಿವೆ ಎಂದು ತಿಳಿಸಿದರು.
ಆ ವ್ಯಕ್ತಿ ಅನಿರುದ್ಧಾಚಾರ್ಯರಿಗೆ, ತಾನು ಸ್ಥಳೀಯ ಅಂಗಡಿ ಮಾಲೀಕರಲ್ಲಿ ಒಬ್ಬರೊಂದಿಗೆ ಜಗಳವಾಡಿದ್ದಾಗಿ ಹೇಳಿದನು. ಅವನು ತನ್ನ ತಂದೆಗೆ ಈ ವಿಷಯವನ್ನು ತಿಳಿಸಿದ್ದಾನೆ. ಆದರೆ ಮರುದಿನವೂ ಅವನಿಗೆ ಹೆಚ್ಚಿನ ಹಣಕ್ಕೆ ಸಿಗರೇಟ್ ಮಾರಿದನು ಎಂದು ಹೇಳಿದ್ದಾನೆ. ಅನಿರುದ್ಧಾಚಾರ್ಯರಿಗೆ ವ್ಯಕ್ತಿಯೊಬ್ಬ ನೀಡಿದ ಈ ಹೇಳಿಕೆಯಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಬೆರಗಾಗಿದ್ದಾರೆ.
ಅನಿರುದ್ಧಾಚಾರ್ಯ ಮತ್ತು ಅವರ ಅನುಯಾಯಿಯ ನಡುವಿನ ಸಂಭಾಷಣೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಶೀಘ್ರದಲ್ಲೇ ನೆಟ್ಟಿಗರ ಗಮನ ಸೆಳೆಯಿತು. ಆ ವ್ಯಕ್ತಿ ಧೂಮಪಾನದಲ್ಲಿ ಅತಿಯಾದ ಆಸಕ್ತಿ ಹೊಂದಿದ್ದಾನೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದರು. ಜೊತೆಗೆ ಅವನ ಮತ್ತು ಅವನ ಸ್ನೇಹಿತರ ಅಸಡ್ಡೆ ಮತ್ತು ಹಾಸ್ಯಮಯ ಮನೋಭಾವದ ಬಗ್ಗೆಯೂ ಮಾತನಾಡಿದರು. ಆತ ನಗುತ್ತಿರುವ ರೀತಿ ನೋಡಿದರೆ ತಮಾಷೆ ಮಾಡುತ್ತಿದ್ದಾನೆಂದು ತೋರಿಸುತ್ತದೆ. ಆದರೆ, ಅವನು ಅಲ್ಲಿಗೆ ಬಂದಿರುವುದು ಒಳ್ಳೆಯ ಉದ್ದೇಶದಿಂದಲ್ಲ ಎಂದು ಒಬ್ಬ ಬಳಕೆದಾರರು ಹೇಳಿದರು.
ಆ ವ್ಯಕ್ತಿ ಸಂಭಾಷಣೆಯನ್ನು ಹೇಗೆ ಎಳೆದುಕೊಂಡು ಹೋಗುತ್ತಿದ್ದನೆಂದು ಬೇರೊಬ್ಬರು ಗಮನ ಸೆಳೆದರು. ಅನಿರುದ್ಧಾಚಾರ್ಯರು ವಿಷಯವನ್ನು ಇತ್ಯರ್ಥಪಡಿಸಲು ಬಿಡಲಿಲ್ಲ. ಬಾಬಾಜಿ ಯೋಚಿಸುತ್ತಿರಬೇಕು- ಅವರೇ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವುಗಳಿಗೆ ಸ್ವತಃ ಆತನೆ ಉತ್ತರಿಸುತ್ತಾನೆ ಎಂದು ಬಳಕೆದಾರರೊಬ್ಬರು ಹೇಳಿದರು.
ಸರ್ಕಾರದ ಕ್ರಮಕ್ಕೂ ಮುಂಚೆಯೇ ಸಣ್ಣ-ಪುಟ್ಟ ಅಂಗಡಿಗಳಉ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಸಿಗರೇಟ್ ಮಾರಾಟ ಮಾಡಲು ಪ್ರಾರಂಭಿಸಿದ್ದರಿಂದ GST 2.0 ರ ದುರುಪಯೋಗವನ್ನು ಸಂಭಾಷಣೆಯು ಎತ್ತಿ ತೋರಿಸಿತು. ಭಾರತ ಸರ್ಕಾರದ GST ಕೌನ್ಸಿಲ್, GST 2.0 ಅಡಿಯಲ್ಲಿ ಪಾನ್ ಮಸಾಲಾ, ಸಿಗಾರ್, ಸಿಗರಿಲ್ಲೋಸ್, ಹುಕ್ಕಾ ಮತ್ತು ಇತರ ರೀತಿಯ ಉತ್ಪನ್ನಗಳು ಸೇರಿದಂತೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಹಿಂದಿನ ಶೇಕಡಾ 28 ರಷ್ಟು ತೆರಿಗೆಯಿಂದ ಶೇಕಡಾ 40 ರಷ್ಟು ತೆರಿಗೆಯನ್ನು ವಿಧಿಸಿತ್ತು.
ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಕೋಲು, ಕಲ್ಲುಗಳಿಂದ ಹೆಬ್ಬಾವು ಕೊಲ್ಲಲು ಪ್ರಯತ್ನ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್