ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಿಕಿನಿ ತೊಟ್ಟ ಮಹಿಳೆಯರನ್ನು ಕಂಡೊಡನೆ ಈತ ಮಾಡಿದ್ದೇನು ಗೊತ್ತಾ? ನೆಟ್ಟಿಗರು ಫುಲ್‌ ಗರಂ

ಕಿಡಿಗೇಡಿಯೊಬ್ಬ ಹೃಷಿಕೇಶದ ನದಿ ತೀರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಯುರೋಪಿಯನ್ ಮಹಿಳಾ ಪ್ರವಾಸಿಗರನ್ನು ಬಿಕಿನಿಯಲ್ಲಿ ಚಿತ್ರೀಕರಿಸಿ ರೀಲ್ಸ್‌ ರಚಿಸಿ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಮಹಿಳೆಯರಿಗೆ ತಿಳಿಯದಂತೆ ಅವರ ವಿಡಿಯೊ ಮಾಡಿದ ವ್ಯಕ್ತಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಕಿನಿ ತೊಟ್ಟ ಮಹಿಳೆಯರನ್ನು ಕಂಡೊಡನೆ ಈತ ಮಾಡಿದ್ದೇನು ಗೊತ್ತಾ?

Profile pavithra Apr 11, 2025 3:58 PM

ಹೃಷಿಕೇಶ: ಯಾವುದೇ ವ್ಯಕ್ತಿಯ ಅದರಲ್ಲೂ ಮಹಿಳೆಯರ ಅನುಮತಿ ಇಲ್ಲದೇ ಅವರ ಖಾಸಗಿ ಪೋಟೊ, ವಿಡಿಯೊಗಳನ್ನು ಬಳಸುವಂತಿಲ್ಲ. ಇದನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ. ಇಂತಹ ಕೃತ್ಯ ಎಸಗಿದವರ ಮೇಲೆ ಮಾನನಷ್ಟ ಮೊಕ್ಕದ್ದಮೆ ಕೂಡ ಹೂಡಬಹುದು. ಹೀಗಿರುವಾಗ ದೆಹಲಿ ಮೂಲದ ಕಂಟೆಂಟ್ ಕ್ರಿಯೇಟರ್ ಒಬ್ಬ ವಿದೇಶಿ ಮಹಿಳೆಯರ ಅನುಮತಿಯಿಲ್ಲದೆ ಅವರ ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದಾನೆ. ಸೋಶಿಯಲ್ ಮೀಡಿಯಾ ಪೇಜ್‍ 'ಜೂನಿಯರ್ ಮೈಕೆಲ್' ನಲ್ಲಿ ಈ ವ್ಯಕ್ತಿ ಹೃಷಿಕೇಶದ ನದಿ ತೀರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಯುರೋಪಿಯನ್ ಮಹಿಳಾ ಪ್ರವಾಸಿಗರ ವಿಡಿಯೊ ಮಾಡಿ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಮಹಿಳೆಯರಿಗೆ ಆತ ವಿಡಿಯೊ ಮಾಡಿದ ಬಗ್ಗೆ ತಿಳಿದಿಲ್ಲ. ಹೀಗಾಗಿ ಆತನ ವಿರುದ್ಧ ಆರೋಪ ಮಾಡಲಾಗಿದೆ.

ವೈರಲ್ ಆದ ವಿಡಿಯೊದಲ್ಲಿ ಪ್ರವಾಸಿ ಮಹಿಳೆಯರು ಬಿಕಿನಿ ತೊಟ್ಟು ನದಿಯಲ್ಲಿ ಆಟವಾಡುವಾಗ ವ್ಯಕ್ತಿಯೊಬ್ಬ ಅದನ್ನು ವಿಡಿಯೊ ಮಾಡಿದ್ದಾನೆ. ಆದರೆ ಆ ಮಹಿಳೆಯರಿಗೆ ಆತ ತಮ್ಮನ್ನು ವಿಡಿಯೊ ಮಾಡುತ್ತಿದ್ದಾನೆ ಎಂಬುದು ತಿಳಿದಿಲ್ಲ.ಇದೀಗ ಟೀಕೆಗೆ ಗುರಿಯಾಗಿದೆ. ಅನೇಕರು ಪ್ರವಾಸಿಗರ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ವ್ಯೂವ್ಸ್ ಪಡೆಯಲು ವಿದೇಶಿಗರ ಚಿತ್ರಗಳನ್ನು ಬಳಸಿದ್ದಕ್ಕಾಗಿ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೊಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ ಮತ್ತು ಕಾನೂನು ಕ್ರಮಕ್ಕೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ವಿಡಿಯೊವನ್ನು ಮೂಲತಃ ಪೋಸ್ಟ್ ಮಾಡಿದ ಖಾತೆಯಿಂದ ಈಗ ಡಿಲೀಟ್ ಮಾಡಲಾಗಿದೆ. ಆದರೆ ಕಂಟೆಂಟ್ ಕ್ರಿಯೇಟರ್‌ನ ವಿರುದ್ಧ ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊ ಬಗ್ಗೆ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. "ಮಹಿಳೆಯರನ್ನು ಅವರಿಗೆ ತಿಳಿಯದಂತೆ ವಿಶೇಷವಾಗಿ ಅಶ್ಲೀಲ ಉಡುಪಿನಲ್ಲಿ ಚಿತ್ರೀಕರಿಸುವುದು ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ. ಅನೇಕರು ವ್ಯಕ್ತಿಯ ಕ್ರಮಗಳನ್ನು ಖಂಡಿಸಿ ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರೆ, ಈ ವಿವಾದವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕವಾಗಿ ಕ್ಷೇತ್ರಗಳಲ್ಲಿ ಧರಿಸುವಂತಹ ಡ್ರೆಸ್ ಕೋಡ್ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿತು. ಧಾರ್ಮಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾದ ಹೃಷಿಕೇಶದಂತಹ ಸ್ಥಳಗಳಿಗೆ ಭೇಟಿ ನೀಡುವಾಗ ಪ್ರವಾಸಿಗರು "ಸೂಕ್ತವಾಗಿ" ಉಡುಪು ಧರಿಸಬೇಕು ಎಂದು ಕೆಲವು ನೆಟ್ಟಿಗರು ತಿಳಿಸಿದ್ದಾರೆ. "ಇಂತಹ ಹೊರಗಿನವರಿಂದ, ಉತ್ತರಾಖಂಡದ ಹೆಸರಿಗೆ ಧಕ್ಕೆಯಾಗುತ್ತದೆ ಮತ್ತು ವಿದೇಶಿಯರು ಶೀಘ್ರದಲ್ಲೇ ಪ್ರವಾಸೋದ್ಯಮಕ್ಕಾಗಿ ಇಲ್ಲಿಗೆ ಬರುವುದನ್ನು ನಿಲ್ಲಿಸಬೇಕು” ಎಂದು ಮತ್ತೊಬ್ಬ ನೆಟ್ಟಿಗರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಕೋರ್ಟ್‌ ವಿಚಾರಣೆಗೆ AI ವಕೀಲನನ್ನು ನಿಯೋಜಿಸಿದ ಭೂಪ! ಆಮೇಲೇನಾಯ್ತು ಗೊತ್ತಾ?

ಈ ಹಿಂದೆ ಉತ್ತರಾಖಂಡದ ಹೃಷಿಕೇಶದಲ್ಲಿ ವಿದೇಶಿ ಪ್ರವಾಸಿಗರು ಬಿಕಿನಿಯಲ್ಲಿ ಸ್ನಾನ ಮಾಡಿದ್ದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಪವಿತ್ರ ಗಂಗಾ ನದಿಯನ್ನು ಗೋವಾ ಬೀಚ್ ಆಗಿ ಪರಿವರ್ತಿಸಿದ್ದಕ್ಕಾಗಿ ವಿದೇಶಿಗರ ಮೇಲೆ ನೆಟ್ಟಿಗರು ಕಿಡಿಕಾರಿದ್ದಾರೆ. ಇಂತಹ ಕೆಲಸಗಳು ಹೃಷಿಕೇಶದಲ್ಲಿ ನಡೆಯುತ್ತಿದ್ದರೆ ಶೀಘ್ರದಲ್ಲೇ ಅದು ಮಿನಿ ಬ್ಯಾಂಕಾಕ್ ಆಗಲಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ.