'ಡ್ಯಾಡೀಸ್ ಹೋಮ್' ಡೈಲಾಗ್ ಬಳಸಿ ಪೊಲೀಸ್ ವಾಹನದಲ್ಲಿ ಕುಳಿತು ರೀಲ್ಸ್ ಮಾಡಿದ ಯುವಕ; ಮುಂದೇನಾಯ್ತು ನೀವೇ ನೋಡಿ
Viral Video: ಇಲ್ಲೊಬ್ಬ ಯುವಕ ಪೊಲೀಸ್ ವಾಹನ ಏರಿ ರೀಲ್ಸ್ ಮಾಡಿದ್ದಾನೆ. ಈತನಿಗೆ ಪೊಲೀಸ್ ವಾಹನ ಬಳಸಲು ಅವಕಾಶ ನೀಡಿದವರು ಯಾರೆಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸದ್ಯ ಸಾರ್ವಜನಿಕ ಭದ್ರತೆ ಮತ್ತು ಪೋಲಿಸ್ ವಾಹನದ ನಿಯಂತ್ರಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ.
ಪೊಲೀಸ್ ವಾಹನ ಬಳಸಿ ಯುವಕನ ರೀಲ್ಸ್ -
ಮುಂಬೈ, ಆ. 28: ಇತ್ತೀಚೆಗೆ ರೀಲ್ಸ್ ಗೀಳು ಹೆಚ್ಚಾಗಿದೆ. ಸಾರ್ವಜನಿಕ ಸ್ಥಳದಲ್ಲೂ ಹುಚ್ಚಾಟ ಮೆರೆದು ವಿಡಿಯೊ ಚಿತ್ರೀಕರಣ (Viral News) ಮಾಡುವವರಿದ್ದಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಪೊಲೀಸ್ ವಾಹನ ಏರಿ ರೀಲ್ಸ್ ಮಾಡಿದ್ದಾನೆ. ಈತನಿಗೆ ಪೊಲೀಸ್ ವಾಹನ ಬಳಸಲು ಅವಕಾಶ ನೀಡಿದವರು ಯಾರೆಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸದ್ಯ ಸಾರ್ವಜನಿಕ ಭದ್ರತೆ ಮತ್ತು ಪೋಲಿಸ್ ವಾಹನ ಬಳಕೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ.
ರೀಲ್ಸ್ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದವರು ಅನೇಕರು ಇದ್ದಾರೆ. ಹೆಚ್ಚಿನ ಲೈಕ್, ವೀವ್ಸ್ ಗಳಿಸಬೇಕೆಂದು ಇಂದಿನ ಯುವ ಜನಾಂಗ ನಾನಾ ರೀತಿಯ ಸಾಹಸ ಮಾಡುತ್ತಿದೆ. ಇದೀಗ ಯುವಕ ಪೊಲೀಸ್ ವಾಹನ ಏರಿ ಪೋಸ್ ನೀಡಿದ್ದಾನೆ. ಮುಂಬೈ ಪೊಲೀಸರ ಅಧಿಕೃತ ವಾಹನ ಇದಾಗಿದ್ದು 'ಡ್ಯಾಡೀಸ್ ಹೋಮ್' ಎಂಬ ಡೈಲಾಗ್ ಜತೆಗೆ ರೀಲ್ಸ್ ಮಾಡಿದ್ದಾನೆ.
ಪೊಲೀಸ್ ಅಧಿಕಾರಿಯಲ್ಲದೆ ನಾಗರಿಕನೊಬ್ಬ ಪೊಲೀಸ್ ವಾಹನವನ್ನು ಪ್ರವೇಶಿಸಿದ್ದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ವಿಜಯ್ ಎಂಬ ಯುವಕನು ಮುಂಬೈ ಪೊಲೀಸ್ ವಾಹನದಲ್ಲಿ ಈ ರೀತಿ ಹುಚ್ಚಾಟ ಮೆರೆದಿದ್ದಾನೆ.
ವಿಡಿಯೊ ನೋಡಿ:
MUMBAI | Is this person associated with the Mumbai Police? @MumbaiPolice @CPMumbaiPolice, please verify Instagram ID @harijan6282. He allegedly made a Reel inside a police vehicle and later deleted it. If he is not a police official, how did he gain access to the vehicle? (1/2).. pic.twitter.com/ACONdxuxfr
— ℝ𝕒𝕛 𝕄𝕒𝕛𝕚 (@Rajmajiofficial) August 27, 2026
ವೈರಲ್ ವಿಡಿಯೊದಲ್ಲಿ ಯುವಕ ಪೊಲೀಸ್ ಎಸ್‌ಯುವಿಯನ್ನು ಸಮೀಪಿಸಿ ವಾಹನವನ್ನು ಪ್ರವೇಶಿಸುತ್ತಿರುವುದನ್ನು ಕಾಣಬಹುದು. ನಂತರ ಅವನು ಬಾಗಿಲು ಮುಚ್ಚಿ, ಚಾಲಕನ ಸೀಟಿನಲ್ಲಿ ಕುಳಿತು ಸ್ಟೀರಿಂಗ್ ವ್ಹೀಲ್ ಹಿಡಿದುಕೊಂಡು ಪೋಸ್ ನೀಡುತ್ತಿದ್ದಾನೆ. ಹಿನ್ನೆಲೆಯಲ್ಲಿ 'ಡ್ಯಾಡೀಸ್ ಹೋಮ್' ಎಂಬ ಡೈಲಾಗ್ ಪ್ಲೇ ಆಗುತ್ತಿತ್ತು.
ಕಾರಿನಲ್ಲಿ ಊಟ ಮಾಡಿ ತಟ್ಟೆ ರಸ್ತೆಗೆ ಎಸೆದ ಕುಟುಂಬ
ಈ ರೀಲ್ ವೈರಲ್ ಆದ ನಂತರ ಇನ್‌ಸ್ಟಾಗ್ರಾಮ್‌ನಿಂದ ಡಿಲೀಟ್ ಮಾಡಲಾಗಿದೆ. ಆದರೆ ಈ ವಿಡಿಯೊ ಕುರಿತು ಮುಂಬೈ ಪೊಲೀಸರು ಇನ್ನು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.