ಲಾಸ್ ಏಂಜಲೀಸ್: ಮೇಘನ್ ಮಾರ್ಕೆಲ್ (Meghan Markle) ಅವರು ಪ್ರಿನ್ಸ್ ಹ್ಯಾರಿಗೆ (Prince Harry) ಸಿಹಿ ಮುತ್ತು ನೀಡಿದ ವಿಡಿಯೊವೊಂದು (Viral Video) ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2025ರ ಮೇಜರ್ ಲೀಗ್ ಬೇಸ್‌ಬಾಲ್ ಸೀಸನ್ ನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ (Los Angeles Dodgers) ಗೆಲುವಿನ ಬಳಿಕ ಮೇಘನ್ ಮಾರ್ಕೆಲ್ ಅವರು ಪ್ರಿನ್ಸ್ ಹ್ಯಾರಿಗೆ ಸಿಹಿ ಮುತ್ತು ನೀಡಿ ಸಂಭ್ರಮಿಸಿದರು. ಮೇಘನ್ ಮಾರ್ಕೆಲ್ ಅವರು ಲಾಸ್ ಏಂಜಲೀಸ್ ಡಾಡ್ಜರ್ಸ್ ಗೆಲುವನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದ್ದನ್ನು ಈ ವಿಡಿಯೊದಲ್ಲಿ ಕಾಣಬಹುದು.
2025ರ ಮೇಜರ್ ಲೀಗ್ ಬೇಸ್‌ಬಾಲ್ ಸೀಸನ್ ನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಪಂದ್ಯವನ್ನು ಗೆದ್ದ ತಕ್ಷಣ ಮೇಘನ್ ಮಾರ್ಕೆಲ್ ಅವರು ಸಂತೋಷದಿಂದ ಕುಣಿದು ಹ್ಯಾರಿಯನ್ನು ತಬ್ಬಿಕೊಂಡು ಮುತ್ತು ನೀಡಿದರು. ಆದರೆ ಹ್ಯಾರಿ ಇದರಲ್ಲಿ ಹೆಚ್ಚು ಆಸಕ್ತರಾಗಿಲ್ಲದಂತೆ ಕಂಡು ಬಂದಿದ್ದಾರೆ.
ಇದನ್ನೂ ಓದಿ: Physical Harassment: ಮೇಡಂ... ಎಂದು ಕರೆದು ಹಸ್ತ ಮೈಥುನ; ವಾಕಿಂಗ್ ಹೋಗಿದ್ದ ಮಹಿಳೆಗೆ ಕಿರುಕುಳ
ಸರಣಿಯ ಕೊನೆಯ ಪಂದ್ಯದಲ್ಲಿ ಟೊರೊಂಟೊ ಬ್ಲೂ ಜೇಸ್ ಅನ್ನು ಸೋಲಿಸಿದ ಲಾಸ್ ಏಂಜಲೀಸ್ ಡಾಡ್ಜರ್ಸ್ ಎರಡನೇ ಸತತ ವಿಶ್ವ ಸರಣಿಯನ್ನು ಗೆದ್ದುಕೊಂಡಿತು. ಇದನ್ನು ಸರಳವಾಗಿ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಸಂಭ್ರಮಿಸಿದರು.
ತಮ್ಮ ಖಾಸಗಿ ಹೋಮ್ ಥಿಯೇಟರ್‌ನಲ್ಲಿ ಕೊನೆಯ ಇನ್ನಿಂಗ್ಸ್ ಅನ್ನು ವೀಕ್ಷಿಸುತ್ತಿರುವ ದಂಪತಿಯ ಸಣ್ಣ ಕ್ಲಿಪ್ ಅನ್ನು ಮೇಘನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಡಾಡ್ಜರ್ಸ್ ಗೆಲುವಿನ ಬಳಿಕ ಮೇಘನ್ ಸಂತೋಷದಿಂದ ಕುಣಿದು ಹ್ಯಾರಿಯ ಬಳಿಗೆ ಹೋಗಿ ಅವರನ್ನು ತಬ್ಬಿಕೊಂಡು ಮುತ್ತಿಟ್ಟರು. ಮೇಘನ್ ಅವರ ಪ್ರತಿಕ್ರಿಯೆಗೆ ಹ್ಯಾರಿ ಆಸಕ್ತಿಯಿಲ್ಲದಂತೆ ವರ್ತಿಸಿರುವುದು ವಿಡಿಯೊದಲ್ಲಿ ಕಾಣಬಹುದು. ಮೇಘನ್ ಅವರ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ. ವಿಡಿಯೊ ವೈರಲ್ ಆದ ತಕ್ಷಣ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಪ್ರತಿಕ್ರಿಯೆ ನಿಜವಾದದ್ದೇ ಅಥವಾ ನಾಟಕೀಯವೇ ಎಂದು ಚರ್ಚೆಯನ್ನು ಪ್ರಾರಂಭಿಸಿದ್ದಾರೆ.
ವಿಡಿಯೊ ಇಲ್ಲಿದೆ
ಸಾಮಾಜಿಕ ಮಾಧ್ಯಮದಲ್ಲಿ ಬಳಿಕ ಈ ವಿಡಿಯೊವನ್ನು ತೆಗೆದು ಹಾಕಲಾಗಿದೆ. ಈ ವೀಡಿಯೊದಲ್ಲಿ ಡಾಡ್ಜರ್ಸ್ ಗೆಲ್ಲುತ್ತಿದ್ದಂತೆ ಮೇಘನ್ ಬಹಳ ಉತ್ಸಾಹದಿಂದ ಕೂಗುತ್ತಿರುವುದನ್ನು ಕೇಳಬಹುದು. ಬಳಿಕ ಮೇಘನ್ ಹ್ಯಾರಿಯ ಬಳಿಗೆ ಓಡಿಹೋಗಿ ಆತನಿಗೆ ಚುಂಬಿಸಿದ್ದಾಳೆ. ಬಳಿಕ ಚಪ್ಪಾಳೆ ತಟ್ಟುತ್ತ ಗೆಳತಿಯ ಬಳಿ ಹೋದ ಮೇಘನ್ ಆಕೆಯನ್ನು ತಬ್ಬಿಕೊಂಡಳು.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, ಅವರು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದರಲ್ಲಿ ಆಕೆ ಒಬ್ಬಳೇ ಕಿರುಚಿ ಸಂಭ್ರಮಿಸಿದ್ದಾಳೆ. ಮತ್ತೊಬ್ಬರು, ಇದು ನಿಜವಾಗಿಯೂ ನರಕಯಾತನೆ ಏನು? ಇದು ಭಯಾನಕವಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಅವಳು ಇದನ್ನು ಏಕೆ ಪೋಸ್ಟ್ ಮಾಡುತ್ತಾಳೆ? ಹ್ಯಾರಿ ಒಬ್ಬಂಟಿಯಾಗಿ ಮತ್ತು ದುಃಖಿತನಾಗಿ ಕಾಣುತ್ತಿದೆ. ನಮ್ಮ ಜೀವನ ಎಷ್ಟು ಸಂತೋಷವಾಗಿದೆ ಎಂದು ಹೇಳುವುದಕ್ಕೆ ಆಕೆ ಈ ಪೋಸ್ಟ್ ಮಾಡಿದ್ದಾಳೆಯೇ ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯೆ ನೀಡುತ್ತಾ, ಆತ್ಮವಿಲ್ಲದ ಕೋಣೆ. ಹುಚ್ಚು ಹೆಂಡತಿ. ಮಕ್ಕಳಿಲ್ಲ, ಪುರುಷ ಸ್ನೇಹಿತರಿಲ್ಲ. ಇದು ವರ್ಲ್ಡ್ ಸೀರೀಸ್, ಗೇಮ್ 7, ಎಕ್ಸ್‌ಟ್ರಾ ಇನ್ನಿಂಗ್ಸ್....ಅವನು ಸಂಪೂರ್ಣವಾಗಿ ಹೊರಗುಳಿದಿದ್ದಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Winter Fashion 2025: ಚಳಿಗಾಲಕ್ಕೆ ಜತೆಯಾದ ಸ್ಟೈಲಿಶ್ ಟ್ರೆಂಚ್ ಕೋಟ್‌ಗಳಿವು
ಇನ್ನೊಬ್ಬರು, ಹೆನ್ರಿಯನ್ನು ಚುಂಬಿಸಿದ ತಕ್ಷಣ ಅವಳು ತನ್ನ ಕೂದಲನ್ನು ಏಕೆ ಸರಿಪಡಿಸುತ್ತಾಳೆ? ಇದು ಪ್ರದರ್ಶನಕ್ಕಾಗಿ ಎಂದು ಹೇಳಿದರು. ಮತ್ತೊಬ್ಬರು ಇದು ನೋಡಲು ಕಿರಿಕಿರಿ ಉಂಟುಮಾಡುತ್ತದೆ. ನಕಲಿ ಸಂಭ್ರಮ. ನಾವು ಎಷ್ಟು ಸಂತೋಷವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಮಾಡಿದ್ದಾಗಿತ್ತು ಎಂದಿದ್ದಾರೆ. ರಾಜ ಮನೆತನದಿಂದ ದೂರವಿರುವ ಹ್ಯಾರಿ ಮತ್ತು ಮೇಘನ್ 2018ರಲ್ಲಿ ಮದುವೆಯಾಗಿದ್ದು, ಎರಡು ವರ್ಷಗಳ ಅನಂತರ ತಮ್ಮ ಮಕ್ಕಳಾದ ಪ್ರಿನ್ಸ್ ಆರ್ಚೀ ಮತ್ತು ಪ್ರಿನ್ಸೆಸ್ ಲಿಲಿಬೆಟ್ ಅವರೊಂದಿಗೆ ಕ್ಯಾಲಿಫೋರ್ನಿಯಾಕ್ಕೆ ತೆರಳಿ ಅಲ್ಲೇ ವಾಸಿಸಲು ಪ್ರಾರಂಭಿಸಿದ್ದಾರೆ.