ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಧಿಕಾರಿಗಳಿಗೆ ಕೇಂದ್ರ ಸಚಿವನ ಫುಲ್‌ ಕ್ಲಾಸ್‌- ಅಷ್ಟಕ್ಕೂ ಆಗಿದ್ದೇನು? ವಿಡಿಯೊ ಫುಲ್‌ ವೈರಲ್‌

ಮಧ್ಯಪ್ರದೇಶದ ಶಿವಪುರಿಯಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಹ್ಲಾದ್ ಪಟೇಲ್ ವೇದಿಕೆಯ ಮೇಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಆ ವೇಳೆ ಅವರು ಅನುಚಿತ ಭಾಷೆಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಇದು ಈಗ ವೈರಲ್(Viral Video)ಆಗಿದೆ.

ಅಧಿಕಾರಿಗಳಿಗೆ ಕೇಂದ್ರ ಸಚಿವನ ಫುಲ್‌ ಕ್ಲಾಸ್‌- ವಿಡಿಯೊ ವೈರಲ್‌

Profile pavithra Apr 13, 2025 1:48 PM

ಭೋಪಾಲ್: ಮಧ್ಯಪ್ರದೇಶದ ಶಿವಪುರಿಯಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಹ್ಲಾದ್ ಪಟೇಲ್ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಕೋಪಗೊಂಡು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ಆ ವೇಳೆ ಅವರು ಅನುಚಿತ ಭಾಷೆಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಆ ವೇಳೆ ಅವರು ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡದೆ ಹೊರಟು ಹೋಗಿದ್ದಾರೆ. ಇದರಿಂದ ಗ್ರಾಮಸ್ಥರು ನಿರಾಶೆಗೊಂಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಇದು ಈಗ ವೈರಲ್(Viral Video) ಆಗಿದೆ.

ಮಾಹಿತಿಯ ಪ್ರಕಾರ, ಸಚಿವ ಪ್ರಹ್ಲಾದ್ ಪಟೇಲ್ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿವಪುರಿ ಜಿಲ್ಲೆಯ ಪೊಹ್ರಿ ಬ್ಲಾಕ್‍ನ ದೇವಪುರ ಗ್ರಾಮಕ್ಕೆ ಬಂದಿದ್ದರಂತೆ. ಈ ಕಾರ್ಯಕ್ರಮವನ್ನು ಜಲ ಗಂಗಾ ಸಂರಕ್ಷಣಾ ಅಭಿಯಾನದ ಭಾಗವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಸಚಿವರು ಸ್ಥಳೀಯ ದೇವಸ್ಥಾನಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ್ದಾರೆ. ಆದರೆ, ಅವರು ವೇದಿಕೆಯಲ್ಲಿ ಮಾತನಾಡುವಾಗ ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚಿಸಲು ಶುರುಮಾಡಿದ ಕೂಡಲೇ, ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಬೆಳಕಿಗೆ ಬಂದಿತು. ಇದರಿಂದ ಕೋಪಗೊಂಡ ಸಚಿವರು ಅಲ್ಲಿ ಹಾಜರಿದ್ದ ಅಧಿಕಾರಿಗಳನ್ನು ಗದರಿಸಿದ್ದಾರೆ.

ಸಚಿವರ ವಿಡಿಯೊ ಇಲ್ಲಿದೆ ನೋಡಿ...



ವೇದಿಕೆಯಲ್ಲಿದ್ದ ಅಧಿಕಾರಿಗಳನ್ನುದ್ದೇಶಿಸಿ ಕೋಪದಿಂದ ಮಾತನಾಡಿದ ಪಟೇಲ್, ಅಧಿಕಾರಿಗಳು ನಿರಂತರವಾಗಿ 'ನಿಷ್ಪ್ರಯೋಜಕ ಚಟುವಟಿಕೆಗಳಲ್ಲಿ' ತೊಡಗಿದ್ದಾರೆ ಎಂದು ಹೇಳುವ ಮೂಲಕ ಅನುಚಿತ ಭಾಷೆಯನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಅದು ಅಲ್ಲದೇ ಅವರು ಸಭೆಯಲ್ಲಿ ಭಾಷಣ ಮಾಡದೇ ಇದ್ದಕ್ಕಿದ್ದಂತೆ ಕಾರ್ಯಕ್ರಮದಿಂದ ಹೊರಟು ಹೋಗಿದ್ದಾರಂತೆ. ಇದರಿಂದ ಅಲ್ಲಿ ನೆರೆದಿದ್ದ ಜನಸಮೂಹ ಮತ್ತು ಸಂಘಟಕರು ನಿರಾಶೆಗೊಂಡಿದ್ದಾರೆ.

ಇಡೀ ಘಟನೆಯನ್ನು ಕಾರ್ಯಕ್ರಮದಲ್ಲಿ ಹಾಜರಿದ್ದ ಜನರು ಮೊಬೈಲ್ ಫೋನ್‍ಗಳಲ್ಲಿ ಸೆರೆಹಿಡಿದಿದ್ದಾರೆ ಮತ್ತು ಸಚಿವರ ಕೋಪದ ಹೇಳಿಕೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಅವರ ಹತಾಶೆ ಮತ್ತು ಅನುಚಿತ ಪದಗಳ ಬಳಕೆ ಮಾಡಿರುವುದು ಸ್ಪಷ್ಟವಾಗಿ ಕೇಳಿದೆ. ಸಚಿವರು ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಕ್ಕೆ ಗ್ರಾಮಸ್ಥರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಸ್ಥಳೀಯ ಸಮಸ್ಯೆಗಳನ್ನು ಸಚಿವರೊಂದಿಗೆ ಚರ್ಚಿಸಲು ಬಯಸಿದ್ದರಂತೆ. ಆದರೆ ಸಚಿವರ ಸಿಟ್ಟಿನಿಂದ ಅವಕಾಶ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಟೇಲ್ ಅವರ ವಿಡಿಯೊ ತುಣುಕನ್ನು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಪಟ್ವಾರಿ, ಇವರು ಬಿಜೆಪಿಯ ಮಾಜಿ ಕೇಂದ್ರ ಸಚಿವ ಮತ್ತು ಪ್ರಸ್ತುತ ಮಧ್ಯಪ್ರದೇಶ ಸರ್ಕಾರದ ಕ್ಯಾಬಿನೆಟ್ ಸಚಿವ ಪ್ರಹ್ಲಾದ್ ಪಟೇಲ್. ಈ ದುರಹಂಕಾರಿ ಬಿಜೆಪಿ ನಾಯಕ ಈಗ ಸಾರ್ವಜನಿಕರನ್ನು 'ನೌಟಾಂಕಿಬಾಜ್' ಎಂದು ಕರೆಯುತ್ತಿದ್ದಾರೆ. ಈ ಹಿಂದೆ ಇದೇ ವ್ಯಕ್ತಿ ಸಾರ್ವಜನಿಕರನ್ನು ಭಿಕ್ಷುಕರು ಎಂದು ಕರೆದಿದ್ದರು. ಭಿಕ್ಷುಕ ಹೇಳಿಕೆಗೆ ಸಚಿವರು ಎಂದಿಗೂ ಕ್ಷಮೆಯಾಚಿಸಿಲ್ಲ ಎಂದು ಪಟ್ವಾರಿ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಹಸುಗಳ ಮೇಲೆ ಪೈಶಾಚಿಕ ಕೃತ್ಯ- ಇಬ್ಬರು ಅರೆಸ್ಟ್‌! ಶಾಕಿಂಗ್‌ ವಿಡಿಯೊ ವೈರಲ್‌

ಸಚಿವ ಪ್ರಹ್ಲಾದ್ ಪಟೇಲ್ ನೇತೃತ್ವದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಶಿವಪುರಿಯ ಪೊಹ್ರಿ ಜನಪದ್ ಪಂಚಾಯತ್‍ ಉಸ್ತುವಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಿರಿರಾಜ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ.