Viral Video: ಮದ್ವೆ ಎಂಜಾಯ್ ಮಾಡ್ತಿದ್ದ ವಧುವಿಗೆ ತ್ರಾಸ್ ಕೊಟ್ಟ ಕಂದಮ್ಮ; ಈ ವಿಡಿಯೊ ನೋಡಿ.. ಫುಲ್ ಫನ್ನಿ ಆಗಿದೆ!
ಮದುವೆಯ ಆರತಕ್ಷತೆಯೊಂದರಲ್ಲಿ ಚಿಕ್ಕ ಮಗುವನ್ನು ದಂಪತಿ ವಧುವಿನ ಕೈಗೆ ನೀಡಿದ್ದಾರೆ. ಆ ವೇಳೆ ಮಗು ಹಠ ಹಿಡಿದು ಅತ್ತಿದ್ದು, ಮಗುವನ್ನು ಸಮಾಧಾನ ಪಡಿಸಲು ವಧು ಪರದಾಡಿದ್ದಾಳೆ. ಕೊನೆಗೆ ವರ ಬಂದು ಮಗುವನ್ನು ತಟ್ಟಿ ಸಮಾಧಾನ ಮಾಡಿದ್ದಾನೆ. ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ರಂಜಿಸಿದೆ.


ನವದೆಹಲಿ: ಮಗುವನ್ನು ಸಂಬಾಳಿಸುವುದು ಬಹಳ ಕಷ್ಟದ ಕೆಲಸ. ಮಗು ರಚ್ಚೆ ಹಿಡಿದು ಅತ್ತರೆ, ಅದನ್ನು ಸಮಾಧಾನಪಡಿಸಲು ತಾಯಿ ಹರಸಾಹಸ ಮಾಡಬೇಕಾಗುತ್ತದೆ. ಅದರಲ್ಲೂ ಕೆಲವು ಮಕ್ಕಳು ಫಂಕ್ಷನ್‍ಗಳಿಗೆ ಹೋದಾರಂತೂ ಕಿರಿಕಿರಿಯಿಂದ ಅಳುತ್ತಿರುತ್ತವೆ. ಇದೀಗ ಮದುವೆಯ ಆರತಕ್ಷತೆಯೊಂದರಲ್ಲಿ ಅಂತಹದೊಂದು ಮಗುವನ್ನು ದಂಪತಿ ವಧುವಿನ ಕೈಗೆ ನೀಡಿದ್ದು, ಆ ವೇಳೆ ಮಗುವನ್ನು ಸಮಾಧಾನ ಪಡಿಸಲು ವಧು ಪಟ್ಟ ಪರದಾಟ ಹೇಳತೀರದ್ದು, ಅದರ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ರಂಜಿಸಿದೆ.
ಮದುವೆಗೆ ಬಂದ ಅತಿಥಿಗಳೊಬ್ಬರು ಊಟ ಮಾಡಿ ಬರುವವರೆಗೆ ತಮ್ಮ ಮಗುವನ್ನು ನೋಡಿಕೊಳ್ಳುವಂತೆ ತಿಳಿಸಿ ವಧು-ವರರ ಕೈಗೆ ಒಪ್ಪಿಸಿದ್ದಾರೆ. ಅತ್ತ ಪೋಷಕರು ಸಖತ್ ಆಗಿ ಊಟ ಮಾಡುತ್ತಿದ್ದರೆ, ಇತ್ತ ವಧು ಮಗುವನ್ನು ಸಮಾಧಾನಪಡಿಸುವಷ್ಟರಲ್ಲಿ ಸುಸ್ತಾಗಿ ಹೋಗಿದ್ದಾಳೆ. ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲು ಆಗದೇ ವಧು ವರನ ಕೈಗೆ ನೀಡಿದ್ದಾಳೆ. ಕೊನೆಗೆ ವರನು ಮಗುವನ್ನು ಸಮಾಧಾನಪಡಿಸಿ ತಟ್ಟಿ ಮಲಗಿಸಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೈರಲ್ ವಿಡಿಯೊ ಕಂಡು ಸೋಶಿಯಲ್ ಮೀಡಿಯಾ ನೆಟ್ಟಿಗರು ನಕ್ಕಿದ್ದಾರೆ. ಹಲವರು ವರನು ಪುಟ್ಟ ಮಗುವಿನ ಬಗ್ಗೆ ತುಂಬಾ ಕಾಳಜಿ ವಹಿಸಿದ್ದಾನೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ, ಮತ್ತು ಇತರರು ಪೋಷಕರ ಮೇಲೆ ಕಿಡಿಕಾರಿದ್ದಾರೆ. ಇಲ್ಲಿಯವರೆಗೆ, ಈ ವಿಡಿಯೊ 1.2 ಮಿಲಿಯನ್ ವೀವ್ಸ್ ಗಳಿಸಿದೆ.
ನೆಟ್ಟಿಗರೊಬ್ಬರು , “ವರನನ್ನು ಎಂತಹ ಒಳ್ಳೆಯ ವ್ಯಕ್ತಿ” ಎಂದು ಹೊಗಳಿದ್ದಾರೆ.ಇನ್ನೊಬ್ಬರು, "ವರ ಮಗುವನ್ನು ಸಮಾಧಾನ ಪಡಿಸಿದ ರೀತಿ ನೋಡಿದರೆ, ಅವನು ಮುಂದೆ ಒಳ್ಳೆಯ ತಂದೆಯಾಗುತ್ತಾನೆ!" ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲೇ ಪತಿಗೆ ಹಿಗ್ಗಾ-ಮುಗ್ಗಾ ಚಪ್ಪಲಿಯಿಂದ ಥಳಿಸಿದ ಪತ್ನಿ- ವಿಡಿಯೊ ನೋಡಿ
ಇತ್ತೀಚೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮದುವೆಯ ಡ್ರೆಸ್ ಹಾಕಿಕೊಂಡು ಅಲಂಕರಿಸಿಕೊಂಡಿದ್ದ ವಧು ವೇದಿಕೆಯ ಹೊರಗೆ 'ಮೇ ಜಲೋ' ಹಾಡಿಗೆ ಮೂವರು ಹುಡುಗಿಯರೊಂದಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾಳೆ. ಅವಳ ನೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಹೃದಯವನ್ನು ಗೆದ್ದಿದೆ. ಅವಳು ತನ್ನ ಮದುವೆ ದಿನದ ನೃತ್ಯ ಪ್ರದರ್ಶನಕ್ಕಾಗಿ ಅಭ್ಯಾಸ ಮಾಡುತ್ತಿದ್ದಳೇ? ಅಥವಾ ಮದುವೆ ದಿನದಂದೇ ನೃತ್ಯ ಮಾಡುತ್ತಿದ್ದಾಳೆಯೇ? ಎಂಬುದು ತಿಳಿದಿಲ್ಲ.