ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಭಾರತ ಮೂಲದ ಗರ್ಭಿಣಿಯರಿಗೆ ಈ ದೇಶದಲ್ಲಿ ಸಿಗುತ್ತೆ ಬರೋಬ್ಬರಿ 1.26 ಲಕ್ಷ ರೂ!

South Korea’s maternity support system: ದಕ್ಷಿಣ ಕೊರಿಯಾ ದೇಶವು ಮಾತೃತ್ವ ಯೋಜನೆಯನ್ನು ಜಾರಿಗೆ ತಂದಿದೆ. ಜನನ ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಈ ದೇಶವು ಗರ್ಭಿಣಿಯಾಗುವಂತೆ ಮಹಿಳೆಯರಿಗೆ ಪ್ರೋತ್ಸಾಹಿಸುತ್ತಿದೆ. ಇದಕ್ಕಾಗಿ ಅಪಾರ ಧನ ಸಹಾಯ ನೀಡುತ್ತಿದೆ. ಈ ಬಗ್ಗೆ ಭಾರತೀಯ ಮೂಲದ ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ.

ಗರ್ಭಿಣಿಯರಿಗೆ ಈ ದೇಶದಲ್ಲಿ ಸಿಗುತ್ತೆ ಬರೋಬ್ಬರಿ 1.26 ಲಕ್ಷ ರೂ. ಗಿಫ್ಟ್‌

-

Priyanka P Priyanka P Sep 17, 2025 4:22 PM

ಸಿಯೋಲ್: ದಕ್ಷಿಣ ಕೊರಿಯಾ (South Korea) ದೇಶದಲ್ಲಿ ಮಾತೃತ್ವ ಬೆಂಬಲ ವ್ಯವಸ್ಥೆಯು ವ್ಯಾಪಕ ಪ್ರಶಂಸೆಯನ್ನು ಗಳಿಸುತ್ತಿದೆ. ಗರ್ಭಿಣಿಯಾದರೆ ಇಲ್ಲಿನ ಸರ್ಕಾರ ಧನ ಸಹಾಯ ಒದಗಿಸುತ್ತದೆ. ಈ ದೇಶದಲ್ಲಿ ತನ್ನ ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಭಾರತೀಯ ಮಹಿಳೆಯೊಬ್ಬರು ಸರ್ಕಾರದಿಂದ 1.26 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಈ ಬಗ್ಗೆ ವಿಡಿಯೊವನ್ನು ಇನ್ಸ್ಟಾಗ್ರಾಂ (Instagram) ನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ದಕ್ಷಿಣ ಕೊರಿಯಾದ ವ್ಯಕ್ತಿಯನ್ನು ಮದುವೆಯಾಗಿರುವುದನ್ನು ತೋರಿಸಲಾಗಿದೆ. ಆ ಮಹಿಳೆ ಕೊರಿಯಾದಲ್ಲಿ ಗರ್ಭಿಣಿಯಾಗಿದ್ದಕ್ಕಾಗಿ ತನಗೆ ಹಣ ಸಿಕ್ಕಿತು ಎಂಬ ಶೀರ್ಷಿಕೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಹಾಗೆಯೇ ದಕ್ಷಿಣ ಕೊರಿಯಾದ ಅಧಿಕಾರಿಗಳಿಂದ ಪಡೆದ ವಿವಿಧ ಆರ್ಥಿಕ ಸಹಾಯಗಳನ್ನು ವಿವರಿಸಿದರು.

ಭಾರತೀಯ ಮೂಲದ ಮಹಿಳೆಯು ಗರ್ಭಿಣಿ ಎಂದು ದೃಢಪಟ್ಟ ತಕ್ಷಣ ಕೊರಿಯನ್ ಸರ್ಕಾರವು ತಪಾಸಣೆ ಮತ್ತು ಔಷಧಿಗಳು ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸುಮಾರು 63,100 ರೂ.ಗಳನ್ನು ಹಸ್ತಾಂತರಿಸಿದೆ ಎಂದು ಬಹಿರಂಗಪಡಿಸಿದರು. ಗರ್ಭಿಣಿಯರಿಗೆ ಸಾರ್ವಜನಿಕ ಸಾರಿಗೆ ವೆಚ್ಚಕ್ಕಾಗಿ 44,030 ರೂ.ಗಳನ್ನು ಸಹ ನೀಡಲಾಗಿದೆ.

ವಿಡಿಯೊ ವೀಕ್ಷಿಸಿ:

ಅಷ್ಟೇ ಅಲ್ಲ, ಮಗುವಿಗೆ ಜನ್ಮ ನೀಡಿದ ಕೊರಿಯನ್ ಸರ್ಕಾರವು ದಂಪತಿಗೆ 1.26 ಲಕ್ಷ ರೂ.ಗಳಷ್ಟು ಹಣವನ್ನು ನೀಡಿತು. ಸರ್ಕಾರದ ಆರ್ಥಿಕ ನೆರವು ಅಲ್ಲಿಗೆ ನಿಲ್ಲಲಿಲ್ಲ. ದಕ್ಷಿಣ ಕೊರಿಯಾ ಸರ್ಕಾರದಿಂದ ಮಾಸಿಕ ಆರ್ಥಿಕ ನೆರವು ಪಡೆಯುತ್ತಲೇ ಇದ್ದಿದ್ದಾಗಿ ಮಹಿಳೆ ಬಹಿರಂಗಪಡಿಸಿದ್ದಾರೆ. ಮಗುವಿನ ಮೊದಲ ವರ್ಷಕ್ಕೆ ಪ್ರತಿ ತಿಂಗಳು 63,100 ರೂ., ಎರಡನೇ ವರ್ಷಕ್ಕೆ ತಿಂಗಳಿಗೆ 31,000 ರೂ. ಪಡೆದಿದ್ದಾರೆ ಮಗುವಿನ ಎರಡು ವರ್ಷದಿಂದ ಎಂಟು ವರ್ಷದವರೆಗೆ 12,600 ರೂ.ಗಳನ್ನು ಪಡೆಯುತ್ತಾರೆ ಎಂದು ಮಹಿಳೆ ಹೇಳಿದ್ದಾರೆ.

ಜುಲೈ 2024 ರಲ್ಲಿ, ಸಿಯೋಲ್ ಮೆಟ್ರೋಪಾಲಿಟನ್ ಸರ್ಕಾರವು 35 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ನೆರವು ಮತ್ತು ವೈದ್ಯಕೀಯ ನೆರವು ನೀಡುವ ಯೋಜನೆಗಳನ್ನು ಘೋಷಿಸಿತು. ದೇಶದಲ್ಲಿ ಮದುವೆ ಮತ್ತು ಹೆರಿಗೆಯ ಸರಾಸರಿ ವಯಸ್ಸು ಹೆಚ್ಚುತ್ತಿರುವ ಪ್ರವೃತ್ತಿಗೆ ವಿರುದ್ಧವಾಗಿ ಸರ್ಕಾರವು ಕಾರ್ಯನಿರ್ವಹಿಸಿತು. ಜನನ ಪ್ರಮಾಣ ಹೆಚ್ಚಿಸಲು ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ದಂಪತಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಈ ಯೋಜನೆಗಳನ್ನು ತಂದಿತು.

ಜನನ ಪ್ರಮಾಣ ಕುಸಿಯುತ್ತಿರುವ ನಡುವೆಯೂ ಹೆಚ್ಚಿನ ಮಹಿಳೆಯರು ಗರ್ಭಿಣಿಯಾಗುವಂತೆ ಪ್ರೋತ್ಸಾಹಿಸಲು ಅಧಿಕಾರಿಗಳು 2020 ರಲ್ಲಿ ಈಗಾಗಲೇ ಒಂದು ಉಪಕ್ರಮವನ್ನು ಪ್ರಾರಂಭಿಸಿದ್ದರು. ಈ ಕಾರ್ಯಕ್ರಮದಡಿಯಲ್ಲಿ, ದೇಶದ ಅನೇಕ ಮಹಿಳೆಯರು ಗಣನೀಯ ಆರ್ಥಿಕ ಬೆಂಬಲ ಮತ್ತು ಈ ಸಹಾಯವನ್ನು ಪಡೆದಿದ್ದಾರೆ.

ಭಾರತೀಯ ಮಹಿಳೆಗೆ ಕೊರಿಯಾದ ಆರ್ಥಿಕ ನೆರವು

ಭಾರತೀಯ ಮೂಲದ ಮಹಿಳೆಯ ಗರ್ಭಧಾರಣೆಯ ಪ್ರಯಾಣ ಮತ್ತು ದಕ್ಷಿಣ ಕೊರಿಯಾ ಸರ್ಕಾರದಿಂದ ಅವರು ಪಡೆದ ಬಹು ಆರ್ಥಿಕ ನೆರವು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು. ಮಾತೃತ್ವ ಬೆಂಬಲಕ್ಕಾಗಿ ಅನೇಕರು ಕೊರಿಯಾ ದೇಶವನ್ನು ಶ್ಲಾಘಿಸಿದ್ದಾರೆ. ಕೊರಿಯಾದ ಜನನ ಪ್ರಮಾಣ ಕಡಿಮೆಯಾಗುತ್ತಿದೆ ಮತ್ತು ಕೊರಿಯನ್ ಮಹಿಳೆಯರು ಮಗುವನ್ನು ಬೆಳೆಸುವುದು ಜೀವನಕ್ಕೆ ತುಂಬಾ ದುಬಾರಿ ಎಂದು ನಂಬುತ್ತಾರೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದು ನಿಜಕ್ಕೂ ಅದ್ಭುತವಾಗಿದೆ. ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ ಮಹಿಳೆಯರನ್ನು ಕೆಲಸದಿಂದ ವಜಾಗೊಳಿಸುವ ಇತರ ದೇಶಗಳಗಿಂತ ಭಿನ್ನವಾಗಿ ಈ ದೇಶ ಯೋಚಿಸಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದರು. ಪ್ರಪಂಚದ ಎಲ್ಲೆಡೆ ಇದು ಹೀಗೇ ಇರಬೇಕು ಎಂದು ಮಗದೊಬ್ಬರು ಹೇಳಿದರು.

ಇದನ್ನೂ ಓದಿ: Viral Video: ಹೀಗೂ ಉಂಟೇ!? ಮದುವೆಯಲ್ಲಿ ಚಿಕನ್ ಲೆಗ್ ಪೀಸನ್ನು ಪರ್ಸ್‌ಗೆ ತುಂಬಿದ ಮಹಿಳೆ