ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಾರಿನ ಮೇಲೆ ನಿಂತು ಸ್ಟಂಟ್ ಮಾಡಿದ ವಧು-ವರ; ಮುಂದೇನಾಯ್ತು? ವಿಡಿಯೊ ನೋಡಿ!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಚಲಿಸುತ್ತಿರುವ ಕಾರಿನ ಚಾವಣಿಯ ಮೇಲೆ ವಧು-ವರರು ಸ್ಟಂಟ್ ಮಾಡಿದ್ದು, ಇದರ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಈ ವಿಡಿಯೊವನ್ನು ಗಮನಿಸಿದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಶುರುಮಾಡಿದ್ದಾರೆ.

ರೀಲ್ಸ್‌ ಕ್ರೇಜ್‌ಗೆ ಬಿದ್ದ ವಧು-ವರ ಕಾರಿನ ಮೇಲೆ ನಿಂತು ಡಾನ್ಸ್‌!

Profile pavithra May 12, 2025 4:24 PM

ಭೋಪಾಲ್: ಈಗ ಸೋಶಿಯಲ್‌ ಮೀಡಿಯಾದ ಜಮಾನ! ಏನೇ ಮಾಡಿದ್ರೂ ಅದನ್ನು ವಿಡಿಯೊ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಬೇಕು ಎಂಬ ಮನೋಭಾವ ಹೆಚ್ಚಾಗಿದೆ. ಇದೀಗ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಧು-ವರರ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊದಲ್ಲಿ, ವರನು ಚಲಿಸುವ ಕಾರಿನ ಚಾವಣಿಯ ಮೇಲೆ ನಿಂತು ಖಡ್ಗವನ್ನು ಬೀಸಿದರೆ, ವಧು ಕಾರಿನ ಬಾನೆಟ್ ಮೇಲೆ ಕುಳಿತು ಡ್ಯಾನ್ಸ್‌ ಮಾಡಿದ್ದಾಳೆ. ವಧು ಮತ್ತು ವರರ ಈ ಸ್ಟಂಟ್ ಮಾಡುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನಂತರ ಟ್ರಾಫಿಕ್‍ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಈ ವೈರಲ್ ಆದ ವಿಡಿಯೊದಲ್ಲಿ, ಹೂವುಗಳಿಂದ ಅಲಂಕರಿಸಲ್ಪಟ್ಟ ಕಾರಿನಲ್ಲಿ ಸೇತುವೆಯ ಮೇಲೆ ಚಲಿಸುವಾಗ ವಧು ಮತ್ತು ವರ ಅದರ ಮೇಲೆ ಹತ್ತಿ ಸ್ಟಂಟ್ ಮಾಡಿದ್ದಾರೆ.ವಧು ಕಾರಿನ ಬಾನೆಟ್ ಮೇಲೆ ಕುಳಿತರೆ, ವರ ಚಾವಣಿಯ ಮೇಲೆ ಕುಳಿತು ಖಡ್ಗ ಬೀಸಿದ್ದಾನೆ. ಇವರ ಈ ಶೋಕಿ ಅಪಘಾತಕ್ಕೆ ಕಾರಣವಾಗುತ್ತದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.



ವಧು ಮತ್ತು ವರರು ಸ್ಟಂಟ್ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಧು ಮತ್ತು ವರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಈ ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಸ್ತೆಯಲ್ಲಿ ವಾಹನಗಳು ಚಲಿಸುವಾಗ ಇಂತಹ ಸ್ಟಂಟ್‍ಗಳನ್ನು ಮಾಡುವುದು ಅಪಾಯ ಮಾತ್ರವಲ್ಲದೇ ಇತರ ಪ್ರಯಾಣಿಕರ ಜೀವಕ್ಕೂ ಆಪತ್ತನ್ನುಂಟುಮಾಡುತ್ತದೆ. ಹಾಗಾಗಿ ತಪಿಸ್ಥರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವುದಾಗಿ ಟ್ರಾಫಿಕ್ ಡಿಎಸ್‌ಪಿ ಅಜಿತ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Video ‌Viral: ಇವ್ರು ಮಾಡೋ ಪಕೋಡಕ್ಕೆ ಅಮೆರಿಕನ್ನರೇ ಫುಲ್‌ ಫಿದಾ! ಈ ದಂಪತಿ ಇದೀಗ ಫುಲ್‌ ವೈರಲ್‌

ಈ ಹಿಂದೆ ಕೂಡ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ಯುವಕನೊಬ್ಬ ಸ್ಟಂಟ್ ಮಾಡಿದ್ದು, ಇದರ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೊವನ್ನು ಗಮನಿಸಿದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಶುರುಮಾಡಿದ್ದರು.ವೈರಲ್ ಆದ ವಿಡಿಯೊದಲ್ಲಿ, ಬಿಳಿ ಮಾರುತಿ ಎರ್ಟಿಗಾದಲ್ಲಿ ಒಬ್ಬ ಯುವಕ ವೇಗವಾಗಿ ಚಲಿಸುವ ಕಾರಿನ ಮೇಲ್ಭಾಗದಲ್ಲಿ ನಿಂತಿದ್ದರೆ, ಇನ್ನೊಬ್ಬ ಕಿಟಕಿಯಿಂದ ಹೊರಗೆ ವಾಲುತ್ತಿರುವುದು ರೆಕಾರ್ಡ್‌ ಆಗಿದೆ. ಇಬ್ಬರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡಿದ್ದಾರೆ. ಹಾಗೇ ಅವರು ಈ ಅಪಾಯಕಾರಿ ಸ್ಟಂಟ್ ಮಾಡುವಾಗ ಮೊಬೈಲ್ ಫೋನ್ ಅನ್ನು ಕೂಡ ಬಳಸಿದ್ದಾರಂತೆ.