#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Vide: ವರನ ಸಿಬಿಲ್ ಸ್ಕೋರ್ ಕಡಿಮೆ- ಮದುವೆ ಕ್ಯಾನ್ಸಲ್‌ ಮಾಡಿದ ವಧುವಿನ ಕುಟುಂಬ

ಈಗ ಮದುವೆ(Marriage Cancel Case) ಮುರಿದುಬೀಳುವುದಕ್ಕೆ ಚಿಕ್ಕ ಚಿಕ್ಕ ಕಾರಣಗಳೇ ಸಾಕು. ಇದಕ್ಕೆ ಸಾಕ್ಷಿಯೆಂಬಂತೆ ಇದೀಗ ಮಹಾರಾಷ್ಟ್ರದ ಮುರ್ತಿಜಾಪುರದಲ್ಲಿ ವರನೊಬ್ಬನ ಮದುವೆ ಸಿಬಿಲ್ ಸ್ಕೋರ್ ವಿಚಾರದಿಂದ ಮುರಿದುಬಿದ್ದಿದೆ. ವರನ ಸಿಬಿಲ್ ಸ್ಕೋರ್ ನೋಡಿ ವಧುವಿನ ಮಾವ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ವರನ ಸಿಬಿಲ್‌ ಸ್ಕೋರ್‌ ಕಡಿಮೆ ಇದೆ ಎಂದು ಮದ್ವೆನೇ ಕ್ಯಾನ್ಸಲ್‌!

marriage cancel

Profile pavithra Feb 8, 2025 4:11 PM

ಮುಂಬೈ: ಒಂದು ಮದುವೆಯ ಸಂಬಂಧವನ್ನು ಮಾಡುವಾಗ ಆ ವ್ಯಕ್ತಿಯ ಅಥವಾ ಕುಟುಂಬದ ಪೂರ್ವಾಪರಗಳನ್ನು ವಿಚಾರಿಸುತ್ತಾರೆ. ಯಾಕೆಂದರೆ ಮುಂದೆ ಅವರ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರಬಾರದೆಂದು. ಹಾಗಾಗಿ ಎಲ್ಲವೂ ಸರಿಯಾಗಿದ್ದರೆ ಮಾತ್ರ ಆ ಸಂಬಂಧಕ್ಕೆ ಮದುವೆಯವರೆಗೆ ಮುಂದುವರಿಯುತ್ತದೆ. ಆದರೆ ಈಗ ಕಾಲ ಬದಲಾಗಿದೆ. ಮದುವೆಯಾಗುವ ಹುಡುಗನ ಆರೋಗ್ಯ ತಪಾಸಣೆ, ಬ್ಯಾಂಕ್‌ ಬ್ಯಾಲೆನ್ಸ್‌, ಕಾರು-ಮನೆ ಇವೆಲ್ಲವೂಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಮದುವೆಗಳು ತಾಳಿ ಕಟ್ಟುವ ವೇಳೆ ಕ್ಯಾನ್ಸಲ್‌ ಆಗಿದ್ದು ಇವೆ. ಇದೀಗ ಮಹಾರಾಷ್ಟ್ರದಲ್ಲಿ ವರನೊಬ್ಬನ ಸಿಬಿಲ್ ಸ್ಕೋರ್ ಕಡಿಮೆ ಇದ್ದಿದ್ದಕ್ಕೆ ವಧುವಿನ ಕುಟುಂಬ ಆತನನ್ನು ತಿರಸ್ಕರಿಸಿ ಮದುವೆಯನ್ನು ರದ್ದುಗೊಳಿಸಿದ ಘಟನೆಯೊಂದು(Viral News) ನಡೆದಿದೆ.

ವರದಿ ಪ್ರಕಾರ, ಮಹಾರಾಷ್ಟ್ರದ ಮುರ್ತಿಜಾಪುರದಲ್ಲಿ ಈ ಘಟನೆ ನಡೆದಿದೆ. ವಧುವಿನ ಮಾವ ವರನ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಲು ಒತ್ತಾಯಿಸಿದ್ದಾನಂತೆ. ಸಿಬಿಲ್‌ ಸ್ಕೋರ್ ಕಡಿಮೆ ಇರುವುದನ್ನು ಕಂಡು ಆ ವರನನ್ನು ತಿರಸ್ಕರಿಸಲಾಯಿತಂತೆ. ಹಾಗೇ ವರು ಸಾಕಷ್ಟು ಬ್ಯಾಂಕ್‌ಗಳಿಂದ ಸಾಲ ಕೂಡ ತೆಗೆದುಕೊಂಡಿದ್ದನಂತೆ. ಇದನ್ನೆಲ್ಲಾ ಕಂಡ ವಧುವಿನ ಕುಟುಂಬ ಸಖತ್‌ ಶಾಕ್‌ ಆಗಿದೆಯಂತೆ. ವರನ ಸಿಬಿಲ್ ಸ್ಕೋರ್ ಕೂಡ ಕಡಿಮೆ ಇದೆಯಂತೆ. ಹಾಗಾಗಿ ವಧುವಿನ ಮಾವ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾನೆ. ಈಗಾಗಲೇ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ವರ ತನ್ನ ಸೋದರ ಸೊಸೆಗೆ ಸೂಕ್ತ ಜೋಡಿಯಲ್ಲ ಎಂದು ಮಾವ ವಾದಿಸಿದ್ದಾನೆ. ಕೊನೆಗೆ ವಧುವಿನ ಕುಟುಂಬದ ಇತರ ಸದಸ್ಯರು ಸಹ ಒಪ್ಪಿ ಮದುವೆ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದ್ದಾರಂತೆ.

ಸಿಬಿಲ್ ಸ್ಕೋರ್ ಎಂದರೆ ಏನು?

ಸಿಬಿಲ್ ಸ್ಕೋರ್ ಎಂಬುದು ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಹೇಳುವ ಮೂರು ಅಂಕಿಗಳ ಸಂಖ್ಯೆಯಾಗಿದೆ. ಇದು 300 ರಿಂದ 900 ವರೆಗೆ ಇರುತ್ತದೆ. ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸುವ ಸಾಧ್ಯತೆ ಸೇರಿದಂತೆ ವ್ಯಕ್ತಿಯ ಸಾಲದ ಅರ್ಹತೆಯನ್ನು ನಿರ್ಧರಿಸಲು ಬ್ಯಾಂಕಿನಲ್ಲಿ ಸಿಬಿಲ್ ಸ್ಕೋರ್ ಅನ್ನು ಬಳಸುತ್ತಾರೆ.

ಈ ಸುದ್ದಿಯನ್ನೂ ಓದಿ:Viral Video: ಊಟ ಕಡಿಮೆಯಾಯಿತೆಂದು ಮದುವೆ ಕ್ಯಾನ್ಸಲ್‌- ಪೊಲೀಸ್‌ ಠಾಣೆಯಲ್ಲಿ ಫುಲ್ ಹೈಡ್ರಾಮಾ!

ಮದುವೆ ಮನೆಯಲ್ಲಿ ಊಟದ ಕೊರತೆಯಾಗಿದ್ದಕ್ಕೆ ವರನ ಕುಟುಂಬದವರು ಮದುವೆಯನ್ನೇ ರದ್ದುಪಡಿಸಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ. ಕೊನೆಗೆ ಮಂಟಪದಲ್ಲಿ ನಡೆಯಬೇಕಿದ್ದ ಮದುವೆ ಪೊಲೀಸ್ ಠಾಣೆಯಲ್ಲಿ ನಡೆಯಿತು. ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅತಿಥಿಗಳಿಗೆ ಊಟದ ವ್ಯವಸ್ಥೆಯಲ್ಲಿ ತೊಂದರೆಯಾಯಿತು. ಸರಿಯಾಗಿ ಊಟದ ವ್ಯವಸ್ಥೆ ಮಾಡಿಲ್ಲ ಎಂಬ ಕಾರಣಕ್ಕೆ ವರನ ಕುಟುಂಬದವರು ಗಲಾಟೆ ಮಾಡಿದ್ದಾರೆ ಮತ್ತು ಮದುವೆಯನ್ನು ರದ್ದುಪಡಿಸಲು ಮುಂದಾಗಿದ್ದಾರಂತೆ. ವರನ ಕುಟುಂಬದ ನಡವಳಿಕೆಯಿಂದ ವಧುವಿನ ಕುಟುಂಬವು ಅಸಮಾಧಾನಗೊಂಡು ಪೊಲೀಸರನ್ನು ಸಂಪರ್ಕಿಸಿ ಕೊನೆಗೆ ಪೊಲೀಸ್‌ ಸ್ಟೇಷನ್‌ನಲ್ಲಿ ಮದುವೆ ನಡೆಯಿತು.