Viral Video: ಊಟ ಕಡಿಮೆಯಾಯಿತೆಂದು ಮದುವೆ ಕ್ಯಾನ್ಸಲ್- ಪೊಲೀಸ್ ಠಾಣೆಯಲ್ಲಿ ಫುಲ್ ಹೈಡ್ರಾಮಾ!
ಆಹಾರದ ಕೊರತೆಯಾಗಿದ್ದಕ್ಕೆ ವರನ ಕುಟುಂಬದವರು ಮದುವೆಯನ್ನೇ ರದ್ದುಪಡಿಸಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ. ವರನ ಕುಟುಂಬದ ನಡವಳಿಕೆಯಿಂದ ವಧುವಿನ ಕುಟುಂಬವು ಅಸಮಾಧಾನಗೊಂಡು ಪೊಲೀಸರನ್ನು ಸಂಪರ್ಕಿಸಿದೆ. ಹೀಗಾಗಿ ಹಾಲ್‍ನಲ್ಲಿ ಆಗಬೇಕಿದ್ದ ಇವರ ಮದುವೆ ಪೊಲೀಸ್ ಠಾಣೆಯಲ್ಲಿ ನೇರವೇರಿದೆ.ಇದೀಗ ಎಲ್ಲೆಡೆ ವೈರಲ್(Viral Video) ಆಗಿದೆ.
ಗಾಂಧಿನಗರ: ಮದುವೆ ಎಂದರೆ ಎರಡೂ ಕುಟುಂಬಗಳ ನಡುವೆ ಸಂಭ್ರಮ, ಸಡಗರವಿರುತ್ತದೆ. ಕೆಲವೊಮ್ಮೆ ವಧು-ವರನ ಕಡೆಯವರ ಮಧ್ಯೆ ಮದುವೆ ಮಂಟಪದಲ್ಲಿ ಗಲಾಟೆ ನಡೆಯುವುದು ಉಂಟು.ಇಂತಹದ್ದೇ ಒಂದು ಘಟನೆಯೊಂದು ಸೂರತ್‌ನಲ್ಲಿ ನಡೆದಿದೆ.ಮದುವೆ ಮನೆಯಲ್ಲಿ ಊಟದ ಕೊರತೆಯಾಗಿದ್ದಕ್ಕೆ ವರನ ಕುಟುಂಬದವರು ಮದುವೆಯನ್ನೇ ರದ್ದುಪಡಿಸಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ. ಕೊನೆಗೆ ಮಂಟಪದಲ್ಲಿ ನಡೆಯಬೇಕಿದ್ದ ಮದುವೆ ಪೊಲೀಸ್ ಠಾಣೆಯಲ್ಲಿ ನಡೆಯಿತು. ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ಭಾನುವಾರ(ಫೆಬ್ರವರಿ 2) ರಾತ್ರಿ ವರಾಚಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಧು ಮತ್ತು ವರ ಇಬ್ಬರೂ ಬಿಹಾರ ಮೂಲದವರು. ವರನ ಹೆಸರು ರಾಹುಲ್ ಪ್ರಮೋದ್ ಮಹತೋ ಮತ್ತು ವಧುವಿನ ಹೆಸರು ಅಂಜಲಿ ಕುಮಾರಿ. ಇವರಿಬ್ಬರ ಮದುವೆ ವರಾಚಾ ಪ್ರದೇಶದ ಲಕ್ಷ್ಮಿ ಹಾಲ್‍ನಲ್ಲಿ ನಡೆಯಬೇಕಿತ್ತು. ಆದರೆ ಅತಿಥಿಗಳಿಗೆ ಊಟದ ವ್ಯವಸ್ಥೆಯಲ್ಲಿ ತೊಂದರೆಯಾಯಿತು. ಸರಿಯಾಗಿ ಊಟದ ವ್ಯವಸ್ಥೆ ಮಾಡಿಲ್ಲ ಎಂಬ ಕಾರಣಕ್ಕೆ ವರನ ಕುಟುಂಬದವರು ಗಲಾಟೆ ಮಾಡಿದ್ದಾರೆ. ಮತ್ತು ಮದುವೆಯನ್ನು ರದ್ದುಪಡಿಸಲು ಮುಂದಾಗಿದ್ದಾರಂತೆ.
સામાન્ય વાતે મંડપ છોડીને ચાલ્યા ગયેલા વરરાજા પક્ષને સમજાવી સુરત શહેર વરાછા પોલીસ એક દિકરીની જીંદગીમાં ખુશીઓ લઇ આવી.@sanghaviharsh @GujaratPolice#સુરત_શહેર_પોલીસ_તમારી_સાથે_તમારા_માટે
— Surat City Police (@CP_SuratCity) February 3, 2025
.
.#surat #gujarat #suratpolice #happiness #help #happymoment #emotional #gujaratpolice pic.twitter.com/uKRwoG2rkt
ವರನ ಕುಟುಂಬದ ನಡವಳಿಕೆಯಿಂದ ವಧುವಿನ ಕುಟುಂಬವು ಅಸಮಾಧಾನಗೊಂಡು ಪೊಲೀಸರನ್ನು ಸಂಪರ್ಕಿಸಿದೆಯಂತೆ. "ಮದುವೆಯ ಹೆಚ್ಚಿನ ಆಚರಣೆಗಳು ಪೂರ್ಣಗೊಂಡಿವೆ. ವರಮಾಲೆ ಕ್ರಮವೊಂದು ಮಾತ್ರ ಬಾಕಿ ಉಳಿದಿತ್ತು. ಆಹಾರದ ಕೊರತೆಯ ಬಗ್ಗೆ ಎರಡು ಕುಟುಂಬಗಳು ವಾಗ್ವಾದ ನಡೆಸಿತ್ತು, ನಂತರ ವರನ ಕಡೆಯವರು ಮದುವೆ ಕಾರ್ಯ ಮುಂದುವರಿಸಲು ನಿರಾಕರಿಸಿದರು" ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಲೋಕ್ ಕುಮಾರ್ ಹೇಳಿದ್ದಾರೆ.
ಹುಡುಗನು ಮದುವೆಯಾಗಲು ಸಿದ್ಧನಿದ್ದಾನೆ ಆದರೆ ಆತನ ಕುಟುಂಬವು ಒಪ್ಪಲಿಲ್ಲ ಎಂದು ಕುಮಾರಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ. ವರನ ಕುಟುಂಬವನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು. ಪೊಲೀಸರ ಮಧ್ಯಪ್ರವೇಶದ ನಂತರ, ವರನ ಕುಟುಂಬವು ಮದುವೆಯನ್ನು ಮುಂದುವರಿಸಲು ಒಪ್ಪಿಕೊಂಡಿತು. ಆದರೆ ಪೊಲೀಸರು ತಿಳಿಸಿದ ಪ್ರಕಾರ, ಎರಡೂ ಕುಟುಂಬಗಳು ಮದುವೆ ಮಂಟಪಕ್ಕೆ ಮರಳಿದರೆ ಜಗಳದ ಸಾಧ್ಯತೆಯ ಬಗ್ಗೆ ವಧು ಕಳವಳ ವ್ಯಕ್ತಪಡಿಸಿದ ನಂತರ, ಪೊಲೀಸರು ಪೊಲೀಸ್ ಠಾಣೆಯಲ್ಲಿ ಮುಂದಿನ ಆಚರಣೆಗಳನ್ನು ಪೂರ್ಣಗೊಳಿಸಲು ಅವಕಾಶ ನೀಡಿದರು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral News: ರೋಟಿ ನೀಡುವುದು ತಡವಾಯಿತೆಂದು ಮದುವೆ ಮುರಿದುಕೊಂಡ ವರ; ಠಾಣೆ ಮೆಟ್ಟಿಲೇರಿದ ವಧು!
ಮದುವೆ ಸಮಾರಂಭಗಳಲ್ಲಿ ರಾದ್ದಾಂತ ನಡೆದಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಸ್ನೇಹಿತರ ಒತ್ತಾಯಕ್ಕೆ ಮಣಿದ ವರನೊಬ್ಬ, ಬಾಲಿವುಡ್ ಹಾಡು ‘ಚೋಲಿ ಕೆ ಪೀಚೆ ಕ್ಯಾ ಹೈ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾನೆ. ವರನ ಈ ಕೃತ್ಯಗಳು ವಧುವಿನ ತಂದೆಯ ಕೋಪಕ್ಕೆ ಕಾರಣವಾಗಿ ಆತ ಮದುವೆಯನ್ನೇ ರದ್ದುಗೊಳಿಸಿದ್ದಾನೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.