ಹಾವುಗಳನ್ನು ನೋಡಿದರೆ ಸಾಕು ಜನರು ಭಯಭೀತರಾಗುತ್ತಾರೆ. ಅಂತಹದರಲ್ಲಿ ಹೆಬ್ಬಾವೆಂದರೆ ಕೇಳಬೇಕೆ...? ಹೆಸರು ಕೇಳಿದ್ರೆ ಜನ ಹೌಹಾರುತ್ತಾರೆ.ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಯಾರ ಸಹಾಯವಿಲ್ಲದೆ ಕಾಲುವೆಯೊಂದರಲ್ಲಿ ಇಳಿದು ಹೆಬ್ಬಾವನ್ನು ಹೊರತೆಗೆದಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿ ಲಕ್ಷಾಂತರ ಜನರ ಗಮನ ಸೆಳೆದಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ವ್ಯಕ್ತಿಯು ನೀರಿನಲ್ಲಿ ಹೋಗುತ್ತಿದ್ದ ಹೆಬ್ಬಾವಿನ ಬಳಿ ಹೋಗಿದ್ದಾನೆ. ಅದು ಕಚ್ಚುವುದಿಲ್ಲ ಎಂಬ ಧೈರ್ಯದ ಮೇಲೆ ಅದನ್ನು ಕಾಲಿನಲ್ಲಿ ಮೇಲೆತ್ತಿ ತನ್ನ ಕೈಯಲ್ಲಿ ಗಟ್ಟಿಯಾಗಿ ಅದರ ಬಾಲ ಎಳೆದು ನೀರಿನಿಂದ ಮೇಲೆ ತಂದಿದ್ದಾನೆ. ಹೆಬ್ಬಾವು ಅವನ ಮೇಲೆ ದಾಳಿ ಮಾಡುತ್ತಿದ್ದಂತೆ, ಆ ವ್ಯಕ್ತಿಯು ಅದರ ದಾಳಿಯನ್ನು ಚಾಣಾಕ್ಷತೆಯಿಂದ ತಪ್ಪಿಸಿಕೊಂಡು ಆ ಮೂಲಕ ತನ್ನ ಧೈರ್ಯ ಮತ್ತು ಸಾಹಸವನ್ನು ಪ್ರದರ್ಶಿಸಿದ್ದಾನೆ.
'ವಿಶಾಲ್ ಸ್ನೇಕ್ ಸೇವರ್' ಎಂಬ ನೆಟ್ಟಿಗರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ತ್ವರಿತವಾಗಿ ವೈರಲ್ ಆಗಿದೆ. ಇಲ್ಲಿಯವರೆಗೆ ಇದು 36 ಮಿಲಿಯನ್ ವ್ಯೂವ್ಸ್ ಗಳಿಸಿದೆ. ಅಪಾಯದ ಜೊತೆ ಈ ವ್ಯಕ್ತಿ ತೋರಿಸಿದ ಧೈರ್ಯ ಸಾಹಸವನ್ನು ಕಂಡು ಅನೇಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಒಬ್ಬ ನೆಟ್ಟಿಗರು, "ನಾನು ನನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ಓಡುತ್ತಿದ್ದೆ! ಆದರೆ ಈ ವ್ಯಕ್ತಿ ನಿಜವಾದ ಹೀರೋ” ಎಂದಿದ್ದಾರೆ. ಇತರರು ಆ ವ್ಯಕ್ತಿಯ ಕೌಶಲ್ಯವನ್ನು ಹೊಗಳಿದ್ದಾರೆ. ಒಬ್ಬರು, "ಈ ವ್ಯಕ್ತಿ ವೃತ್ತಿಪರನಾಗಿರಬೇಕು. ಅಂತಹ ಬೃಹತ್ ಹಾವನ್ನು ಸಾಮಾನ್ಯರಿಗೆ ಸಾಧ್ಯವಿಲ್ಲ” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಟ್ರಕ್ ಏರಿ ಯುಪಿಯಿಂದ ಬಿಹಾರಕ್ಕೆ ಬಂದ ಬೃಹತ್ ಹೆಬ್ಬಾವು! ವಿಡಿಯೊ ನೋಡಿ
ಇನ್ನೊಬ್ಬ ನೆಟ್ಟಿಗರು ಈ ಕ್ಷಣವನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾನೆ. "ಹಾವು ಬಹುಶಃ ಆ ವ್ಯಕ್ತಿಗಿಂತ ಹೆಚ್ಚು ಭಯಭೀತವಾಗಿತ್ತು! ಹಾಗಾಗಿ ಅದು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ." ಎಂದಿದ್ದಾನೆ. ಇತರರು ಮನುಷ್ಯನ ಮತ್ತು ಹಾವಿನ ಸುರಕ್ಷತೆಯ ಬಗ್ಗೆ ನಿಜವಾದ ಕಾಳಜಿಯನ್ನು ವ್ಯಕ್ತಪಡಿಸಿ,"ಇದು ಪ್ರಭಾವಶಾಲಿಯಾಗಿದ್ದರೂ, ಈ ರೀತಿ ನಿರ್ವಹಿಸುವುದು ಅಪಾಯಕಾರಿ ಎಂಬುದನ್ನು ನಾವು ನೆನಪಿನಲ್ಲಿಡಬೇಕು" ಎಂದು ಕಾಮೆಂಟ್ ಮಾಡಿದ್ದಾರೆ.