ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮದ್ವೆಗೆ ರೆಡಿಯಾಗಿರೋ ಹುಡುಗರೇ...ಹುಷಾರು! ಈ ವಿಡಿಯೊ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ

ವಧುವಿನ ಹಣೆಗೆ ಸಿಂಧೂರ ಹಚ್ಚುವ ಸಮಯದಲ್ಲಿ ವರನ ಕೈ ನಡುಗಿದೆಯಂತೆ. ಇದರಿಂದ ಕೋಪಗೊಂಡ ವಧು ಅವನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವರನ ಕೈ ನಡುಗಿದ್ದಕ್ಕೆ ಮದ್ವೆ ಕ್ಯಾನ್ಸಲ್‌! ಏನಿದು ವೈರಲ್‌ ಸುದ್ದಿ?

Profile pavithra Jun 10, 2025 1:45 PM

ಪಾಟ್ನಾ: ವರನ ಡ್ಯಾನ್ಸ್‌ ಮಾಡಿದ ಎಂಬ ಕಾರಣಕ್ಕೆ, ವರನು ಕುಡಿದಿದ್ದ ಎಂಬ ಕಾರಣಕ್ಕೆ ಮದುವೆ ಕ್ಯಾನ್ಸಲ್‌ ಆದ ಎಷ್ಟೋ ಪ್ರಕರಣಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಸಿಂದೂರ(Sindoor)ದ ವಿಷಯಕ್ಕೆ ಮದುವೆಯೊಂದು ಕ್ಯಾನ್ಸಲ್‌ ಆಗಿದೆ. ಹೌದು ವರನು ವಧುವಿನ ಹಣೆಗೆ ಸಿಂದೂರ ಹಚ್ಚುವಾಗ ಅವನ ಕೈ ನಡುಗಿತ್ತಂತೆ.ಇದರಿಂದ ಕೋಪಗೊಂಡ ವಧು ಆತನನ್ನು ಮದುವೆ(Marriage)ಯಾಗಲು ನಿರಾಕರಿಸಿದ್ದಾಳೆ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

ವರದಿಗಳ ಪ್ರಕಾರ, ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಧುವಿನ ಹಣೆಗೆ ವರ ಸಿಂದೂರ ಹಚ್ಚುವ ಸಮಯದಲ್ಲಿ ಆತನ ಕೈಗಳು ನಡುಗಿದೆಯಂತೆ. ಇದನ್ನು ಗಮನಿಸಿದ ವಧು ಆತ ಹುಚ್ಚ, ತಾನು ಅವನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ವರ ಮತ್ತು ಅವನ ಕುಟುಂಬದವರು ಮದುವೆಗೆ ಅವಳನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವಳು ಈ ಮದುವೆ ಬೇಡವೇ ಬೇಡ ಎಂದು ನಿರಾಕರಿಸಿದ್ದಾಳಂತೆ.

ವಿಡಿಯೊ ಇಲ್ಲಿದೆ ನೋಡಿ...



ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕುಟುಂಬಗಳನ್ನು ಭಭುವಾ ಪೊಲೀಸ್ ಠಾಣೆಗೆ ಕರೆದು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ವಧು ಮದುವೆಗೆ ನಿರಾಕರಿಸಿದ ಕಾರಣಕ್ಕೆ ವರನು ಬಂದ ದಾರಿಗೆ ಸುಂಕವಿಲ್ಲ ಎನ್ನುವ ಹಾಗೇ ಮನೆಗೆ ವಾಪಾಸ್‌ ಹೋಗಬೇಕಾಯಿತು!

ಈ ಸುದ್ದಿಯನ್ನೂ ಓದಿ:Viral Video: ಒಳಗೆ ಸೇರಿದರೆ ಗುಂಡು... ಹುಡುಗಿಯಾಗುವಳು ಗಂಡು... ನಡುರೋಡಲ್ಲಿ ಯುವತಿಯ ಡೊಂಬರಾಟ!

ಇದೇ ರೀತಿಯ ಪ್ರಕರಣವೊಂದು ಜಾರ್ಖಂಡ್‌ನ ದಿಯೋಘರ್‌ನಲ್ಲಿ ನಡೆದಿದ್ದು, ಮದುವೆ ಸಮಾರಂಭದಲ್ಲಿ, ಮದುವೆಯ ಆಚರಣೆಗಳನ್ನು ಮಾಡುವಾಗ ಇದ್ದಕ್ಕಿದ್ದಂತೆ ವರನು ಚಳಿಯಿಂದ ಮೂರ್ಛೆ ಹೋಗಿದ್ದಾನೆ. ಇದರಿಂದಾಗಿ ನಂತರ ವಧು ವರನಿಗೆ ಯಾವುದೋ ಕಾಯಿಲೆ ಇದೆ ಎಂದು ಮದುವೆಯನ್ನು ರದ್ದುಗೊಳಿಸಿದ್ದಾಳೆ.