ರಣಥಂಬೋರ್ ಹುಲಿ ಮೀಸಲು ಪ್ರದೇಶದಲ್ಲಿರುವ 'ರಿದ್ಧಿ' ಎಂಬ ಹುಲಿಯ ವಿಡಿಯೊ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ. ಅದೂ ಅಲ್ಲದೇ, ಸಫಾರಿಯಲ್ಲಿ ಈ ಹುಲಿಯು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇತ್ತೀಚೆಗಷ್ಟೇ ಈ ಹೆಣ್ಣು ಹುಲಿ ತನ್ನ ಮರಿಗಳೊಂದಿಗೆ ರಾಜ್‌ಬಾಗ್ ಸರೋವರವನ್ನು ದಾಟುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ರಿದ್ಧಿ ಮತ್ತೊಮ್ಮೆ ಸುದ್ದಿಯಲ್ಲಿದೆ.ಈ ವಿಡಿಯೊದಲ್ಲಿ ರಿದ್ಧಿ ಹುಲಿಯು ಆಮೆಯನ್ನು ಬೇಟೆಯಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಸಫಾರಿ ಪ್ರವಾಸಿಗರು ಹುಲಿಯ ಈ ಕೃತ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ಹುಲಿ ಆಮೆಯನ್ನು ಬೇಟೆಯಾಡುವುದು ಸೆರೆಯಾಗಿದೆ. ರಿದ್ಧಿಯು ಆಮೆಯ ಮೇಲೆ ದಾಳಿ ಮಾಡಿ ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡಿದೆ. ಈ ದೃಶ್ಯವು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಆಮೆ ಅಪಾಯ ಬಂದಾಗ ಅದರ ಚಿಪ್ಪಿನೊಳಗೆ ಅವಿತುಕುಳಿತುಕೊಳ್ಳುತ್ತದೆ. ಆದರೆ ಹುಲಿ ಆಮೆಯ ಹಿಂದಿನ ಕಾಲನ್ನು ಕಚ್ಚಿ ಹಿಡಿದಿದ್ದರಿಂದ ಅದಕ್ಕೆ ಚಿಪ್ಪಿನೊಳಗೆ ಅಡಗಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಹುಲಿಯ ಬಾಯಿಯಲ್ಲಿ ಅದು ಸಿಕ್ಕಿಹಾಕಿಕೊಂಡಿತು. ರಿದ್ಧಿಯು ಆಮೆಯನ್ನು ಕಚ್ಚಿಕೊಂಡು ಪೊದೆಯೊಳಗೆ ಓಡಿ ಹೋಯಿತಂತೆ. ವರದಿ ಪ್ರಕಾರ, ರಾಜಸ್ಥಾನದ ರಣಥಂಬೋರ್ ಹುಲಿ ಮೀಸಲು ಪ್ರದೇಶದಲ್ಲಿ ಸಂಜೆ ಈ ಘಟನೆ ನಡೆಯಿತಂತೆ.ರಿದ್ಧಿ ಹುಲಿ ಆಮೆಯನ್ನು ಬೇಟೆಯಾಡಿದ ಕ್ಷಣದ ದೃಶ್ಯವನ್ನು ಸಫಾರಿ ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಯಪ್ಪಾ! ಎದೆ ಝಲ್ ಅನಿಸುತ್ತೆ ಈ ವಿಡಿಯೊ! ಏಕಾಏಕಿ ಮನೆಯೊಳಗೆ ಸೇರಿಕೊಂಡ ಹುಲಿ!
ಇತ್ತೀಚೆಗೆ ಮರಿಗಳಿಗೆ ಜನ್ಮ ನೀಡಿರುವ ರಿದ್ಧಿ, ರಣಥಂಬೋರ್‌ನ ಸರೋವರದ ಬಳಿ ಹೆಚ್ಚಾಗಿ ಕಂಡುಬರುತ್ತದೆ. ಈ ಹಿಂದೆ ಮೊಸಳೆ ಮತ್ತು ಕಾಡುಹಂದಿ ಮುಂತಾದ ಹಲವು ಪ್ರಾಣಿಗಳನ್ನು ಇದು ಬೇಟೆಯಾಡಿದೆ. ರಿದ್ಧಿ ಹುಲಿ ತನ್ನ ಮೂರು ಮರಿಗಳೊಂದಿಗೆ ಮೊಸಳೆಯನ್ನು ಬೇಟೆಯಾಡಿದ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ಈ ಹಿಂದೆ ವೈರಲ್ ಆಗಿತ್ತು.