Viral Video: ಯಪ್ಪಾ... ಎದೆ ಝಲ್ ಅನಿಸುತ್ತೆ ಈ ವಿಡಿಯೊ! ರೂಂ ಬಾಗಿಲು ತೆರೆದ್ರೆ ಹುಲಿರಾಯ ಪ್ರತ್ಯಕ್ಷ
ಮಹಿಳೆಯೊಬ್ಬರು ತನ್ನ ರೂಮ್ ಒಳಗೆ ಹೋಗಲು ನಿಧಾನವಾಗಿ ಬಾಗಿಲು ತೆರೆಯುತ್ತಿದ್ದಂತೆ ಹುಲಿಯೊಂದು ಅವಳನ್ನೇ ದಿಟ್ಟಿಸಿ ನೋಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಮಹಿಳೆ ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದಂತೆ ಹುಲಿಯು ಆಕೆಯನ್ನೇ ದಿಟ್ಟಿಸಿ ನೋಡುತ್ತದೆ. ಮಹಿಳೆ ಬಾಗಿಲು ಮುಚ್ಚದೆ ಮತ್ತೆ ತೆರೆಯಲು ಪ್ರಯತ್ನಿಸಿದಾಗ ಹುಲಿ ಆಕೆ ಇದ್ದಲ್ಲಿ ಬರಲು ಪ್ರಯತ್ನಿಸುತ್ತದೆ. ಆಗ ಮತ್ತೆ ಮಹಿಳೆ ಬಾಗಿಲು ಹಾಕಿಕೊಳ್ಳುತ್ತಾಳೆ.
ನವದೆಹಲಿ: ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಲಗ್ಗೆ ಇಡುವುದು, ಕೆಲವೊಮ್ಮೆ ಜನರು, ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ. ಆದರೆ ಇಲ್ಲೊಂದು ಕಡೆ ಮಹಿಳೆಯೊಬ್ಬಳು ತನ್ನ ರೂಂ ಬಾಗಿಲು ತೆರೆದ ಕೂಡಲೇ ವ್ಯಾಘ್ರ ಪ್ರತ್ಯಕ್ಷಗೊಂಡಿದ್ದು ಬೆಚ್ಚಿ ಬೀಳುವಂತೆ ಮಾಡಿದೆ. ಸದ್ಯ ಇದೇ ರೀತಿಯ ಎದೆ ಝಲ್ ಎನಿಸುವ ದೃಶ್ಯ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್(Viral Video) ಆಗುತ್ತಿದೆ. ಮಹಿಳೆಯೊಬ್ಬರು ಬೆಡ್‌ರೂಮಿನ ಬಾಗಿಲು ತೆರೆದಾಗ ಹುಲಿಯೊಂದು ಕಾಣಿಸಿಕೊಂಡಿದ್ದು ಮಹಿಳೆ ದಿಗ್ಬ್ರಮೆಗೊಂಡಿದ್ದಾಳೆ.
ಮಹಿಳೆಯೊಬ್ಬರು ತನ್ನ ರೂಮ್ ಒಳಗೆ ಹೋಗಲು ನಿಧಾನವಾಗಿ ಬಾಗಿಲು ತೆರೆಯುತ್ತಿದ್ದಂತೆ ಹುಲಿಯೊಂದು ಅವಳನ್ನೇ ದಿಟ್ಟಿಸಿ ನೋಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಮಹಿಳೆ ಬಾಗಿಲು ತೆರೆಯಲು ಪ್ರಯತ್ನಿ ಸುತ್ತಿದ್ದಂತೆ ಹುಲಿಯು ಆಕೆಯನ್ನೇ ದಿಟ್ಟಿಸಿ ನೋಡುತ್ತದೆ. ಮಹಿಳೆ ಬಾಗಿಲು ಮುಚ್ಚದೆ ಮತ್ತೆ ತೆರೆಯಲು ಪ್ರಯತ್ನಿಸಿದಾಗ ಹುಲಿ ಆಕೆ ಇದ್ದಲ್ಲಿ ಬರಲು ಪ್ರಯತ್ನಿಸುತ್ತದೆ. ಆಗ ಮತ್ತೆ ಮಹಿಳೆ ಬಾಗಿಲು ಹಾಕಿಕೊಳ್ಳುತ್ತಾಳೆ. ಹುಲಿಯ ಭಯಂಕರ ಸ್ವರೂಪ ಮತ್ತು ನಡೆ ನೋಡುತ್ತಿದ್ದಂತೆ ಮುಂದೇನಾಗುತ್ತೋ ಎಂಬ ಆತಂಕ ಕಾಡಲಿದೆ.
Imagine you open your door and you see this... What would you do?😳 pic.twitter.com/Ymw14Ux4SR
— Nature is Amazing ☘️ (@AMAZlNGNATURE) January 30, 2025
ನೇಚರ್ ಇಸ್ ಅಮೇಜಿಂಗ್ ಎಂಬ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಈ ವಿಡಿಯೊ ಶೇರ್ ಮಾಡಲಾಗಿದ್ದು ನೀವು ಬಾಗಿಲು ತೆರೆದಾಗ ಹೀಗೆ ಕಂಡ್ರೆ ಏನ್ ಮಾಡ್ತೀರಿ?' ಎಂದು ವಿಡಿಯೊದ ಕ್ಯಾಪ್ಶನ್‌ನಲ್ಲಿ ಕೇಳಲಾಗಿದೆ ಮಿಲಿಯನ್ಗೂ ಅಧಿಕ ವೀವ್ಸ್ ಪಡೆದ ಈ ವಿಡಿಯೊಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: Viral Video: ಒಂದೇ ಕೈಯಲ್ಲಿ ಹೆಬ್ಬಾವನ್ನು ಹೊರಗೆಳೆದ ಭೂಪ! ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಬಾಗಿಲು ಅನ್ ಲಾಕ್ ಮಾಡುವ ಮೊದಲೇ ಆಕೆ ವಿಡಿಯೊ ಮಾಡುವುದು ಕಂಡರೆ ಇದು ಅವರ ಸಾಕು ಪ್ರಾಣಿ ಇರಬೇಕು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ಹುಲಿಯನ್ನು ಮಹಿಳೆಯ ಗಂಡನೇ ಬಿಟ್ಟಿ ರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಮಹಿಳೆಯ ಧೈರ್ಯ ಮೆಚ್ಚಲೇಬೇಕು ಎಂದು ಕಮೆಂಟ್ ಮಾಡಿದ್ದಾರೆ