Viral Video: ನೆಚ್ಚಿನ ಶಿಕ್ಷಕನಿಗೆ ವಿದಾಯ ಹೇಳಲು ಈ ವಿದ್ಯಾರ್ಥಿಗಳು ಮಾಡಿದ್ದೇನು? ಹೃದಯಸ್ಪರ್ಶಿ ವಿಡಿಯೊ ವೈರಲ್
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪು ತಮ್ಮ ತರಗತಿಯ ಶಿಕ್ಷಕರಿಗೆ ತಮಾಷೆಯ ಮೂಲಕ ವಿದಾಯ ಹೇಳಿದ್ದಾರೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಇದನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೊವನ್ನು ನೀವು ಕೂಡ ತಪ್ಪದೇ ನೋಡಿ...


ಬೆಂಗಳೂರು: ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ತುಂಬಾ ಅನ್ಯೋನ್ಯವಾದುದು.ಜೀವನದಲ್ಲಿ ಯಶಸ್ಸು ಸಾಧಿಸಲು ಮುಂದೆ ಗುರಿ, ಹಿಂದೆ ಗುರು ಇರಬೇಕು ಎಂಬ ಮಾತಿದೆ. ಒಬ್ಬ ಯೋಗ್ಯ ಗುರು ವಿದ್ಯಾರ್ಥಿಯ ಬದುಕಿನ ಪಥವನ್ನೇ ಬದಲಾಯಿಸಿ ಬಿಡುತ್ತಾನೆ. ಇದೀಗ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪು ತಮ್ಮ ತರಗತಿಯ ಶಿಕ್ಷಕರಿಗೆ ತಮಾಷೆಯ ಮೂಲಕ ವಿದಾಯ ಹೇಳಿದ್ದಾರೆ. ಇದು ಸೋಶಿಯಲ್ ಮೀಡಿಯಾ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
ವಿದ್ಯಾರ್ಥಿನಿಯೊಬ್ಬಳು ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿ ನಾಲ್ಕು ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ವಿಡಿಯೊ ಶುರುವಿಗೆ ತರಗತಿಯೊಳಗೆ ವಿದ್ಯಾರ್ಥಿಗಳು ಜಗಳವಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಆಗ ಶಿಕ್ಷಕರು ತರಗತಿಯ ಒಳಗೆ ಬಂದು ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಮುಂದಾದಾಗ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದ್ದಾರೆ. ಹಾಗೇ ಕೈಯಲ್ಲಿ ಕೇಕ್ ಹಿಡಿದು ಅದನ್ನು ಕತ್ತರಿಸಿ ತಮ್ಮ ನೆಚ್ಚಿನ ಶಿಕ್ಷಕನಿಗೆ ತಿನ್ನಿಸುವ ಮೂಲಕ ಅವರಿಗೆ ಹೃದಯಪೂರ್ವಕವಾಗಿ ವಿದಾಯ ಹೇಳಿದ್ದಾರೆ.
ಶಿಕ್ಷಕನ ವಿದಾಯ ಸಮಾರಂಭದ ಅದ್ಭುತ ದೃಶ್ಯ ಇಲ್ಲಿದೆ ನೋಡಿ...
ಈ ವಿಡಿಯೊದಲ್ಲಿನ ಭಾವನಾತ್ಮಕ ಕ್ಷಣವನ್ನು ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಅನೇಕರು ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ. "ಇದು ತುಂಬಾ ಉತ್ತಮವಾಗಿದೆ! ಶಿಕ್ಷಕರ ಪ್ರತಿಕ್ರಿಯೆ ಕಂಡು ನನ್ನ ಕಣ್ಣಲ್ಲಿ ನೀರು ಬಂದಿದೆ " ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, "ನಾವು ನಮ್ಮ ಪ್ರಾಧ್ಯಾಪಕರಿಗಾಗಿ ಈ ರೀತಿಯದ್ದನ್ನು ಮಾಡಿದ್ದರೆ ಚೆನ್ನಾಗಿತ್ತು” ಎಂದು ಹೇಳಿದ್ದಾರೆ. ಮೂರನೆಯವನು, "ಇದು ಅತ್ಯುತ್ತಮ ರೀತಿಯ ತಮಾಷೆ- ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿದೆ. ಈ ವಿದ್ಯಾರ್ಥಿಗಳಿಗೆ ಹ್ಯಾಟ್ಸ್ ಆಫ್!" ಎಂದು ಬರೆದಿದ್ದಾರೆ.
"ನನ್ನ ಕಾಲೇಜು ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ! ಶಿಕ್ಷಕರೊಂದಿಗಿನ ನನ್ನ ಬಂಧವು ವಿಶೇಷವಾಗಿತ್ತು" ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು, "ಈ ಪೀಳಿಗೆಯು ಇಷ್ಟು ಚಿಂತನಶೀಲವಾಗಿದೆ ಎಂದು ನನಗೆ ನಂಬಲು ಸಾಧ್ಯವಿಲ್ಲ. ಇದು ಸುಂದರವಾಗಿದೆ." ಎಂದಿದ್ದಾರೆ. ಅನೇಕರು ಶಿಕ್ಷಕರ ಪ್ರತಿಕ್ರಿಯೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಅವರು ಮುಗುಳ್ನಕ್ಕು ಎಲ್ಲವನ್ನೂ ಇಷ್ಟಪಡುವ ರೀತಿ ನೋಡಿದರೆ ಅವರು ತನ್ನ ವಿದ್ಯಾರ್ಥಿಗಳನ್ನು ಪ್ರೀತಿಸುವ ಮಹಾನ್ ಶಿಕ್ಷಕ ಎಂಬುದು ತಿಳಿಯುತ್ತದೆ " ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡು, "ನಾವು ಇದನ್ನು ನಮ್ಮ ಕಾಲೇಜಿನಲ್ಲಿ ಮಾಡಿದ್ದರೆ, ನಾವು ಕೇಕ್ ಕಟ್ಟಿಂಗ್ ಬದಲಿಗೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ!" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಿದ್ಯಾರ್ಥಿನಿಯ ಜುಟ್ಟು ಹಿಡಿದು ಎಳೆದ ಬಾಸ್ಕೆಟ್‌ಬಾಲ್ ಕೋಚ್; ಮುಂದೇನಾಯ್ತು ವಿಡಿಯೊ ನೋಡಿ
ಕ್ಲಾಸ್‌ರೂಂನಲ್ಲಿ ಕೇಕ್ ಕಟ್ ಮಾಡಿ ಬಿಯರ್ ಕುಡಿದ ವಿದ್ಯಾರ್ಥಿಗಳು!
ಇತ್ತೀಚೆಗೆ ಮಧ್ಯಪ್ರದೇಶದ ಮೌಗಂಜ್‍ನ ಸರ್ಕಾರಿ ಕಾಲೇಜಿನ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಕೇಕ್ ಕಟ್ ಮಾಡಿ ಹಾಗೂ ಬಿಯರ್ ಕುಡಿದು ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಒಬ್ಬ ವಿದ್ಯಾರ್ಥಿ ಕೇಕ್ ಕತ್ತರಿಸುತ್ತಿದ್ದರೆ, ಇನ್ನೊಬ್ಬ ಬಿಯರ್ ಬಾಟಲಿಯನ್ನು ತೆರೆಯುವುದು ಸೆರೆಯಾಗಿತ್ತು. ಆಶ್ಚರ್ಯವೆಂದರೆ ಈ ಪಾರ್ಟಿಯಲ್ಲಿ ಶಿಕ್ಷಕರು ಕೂಡ ವಿದ್ಯಾರ್ಥಿಗಳಿಗೆ ಸಾಥ್ ನೀಡಿದ್ದಾರೆ.