Viral Video: ಸೆಹವಾಗ್ ಜತೆ ಕಾರಿನಲ್ಲೇ ಕಿತ್ತಾಡಿದ ಪತ್ನಿ ಆರತಿ
ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿರುವ ಸೆಹವಾಗ್ ಮತ್ತು ಆರತಿ ಪ್ರತೇಕವಾಗಿ ವಾಸಿಸುತ್ತಿದ್ದು, ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.

Virender Sehwag

ನವದೆಹಲಿ: ಮೂರು ದಿನಗಳ ಹಿಂದಷ್ಟೇ ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹವಾಗ್(Virender Sehwag) ಮತ್ತು ಅವರ ಪತ್ನಿಆರತಿ ಅಹ್ಲಾವತ್(Aarti Ahlawat) ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಎಲ್ಲಡೆ ಭಾರೀ ಸದ್ದು ಮಾಡಿತ್ತು. ಇದೀಗ ಈ ಜೋಡಿ ಕಾರಿನಲ್ಲಿ ಪ್ರಯಾಣಿಸುವ ವೇಳೆ ವಾಗ್ವಾದ ನಡೆಸಿದ ವಿಡಿಯೊವೊಂದು ವೈರಲ್(Viral Video) ಆಗಿದ್ದು ಇವರಿಬ್ಬರು ಬೇರೆಯಾಗುವುದು ಖಚಿತ ಎನ್ನುವಂತಿದೆ.
ವೈರಲ್ ಆಗುತ್ತಿರುವ ವಿಡಿಯೊ ಹಳೆಯದ್ದೋ? ಅಥವಾ ಇತ್ತೀಚಿಗಿನದ್ದೋ? ಎನ್ನುವುದು ತಿಳಿದುಬಂದಿಲ್ಲ. ಆದರೆ ಈ ವಿಡಿಯೊದಲ್ಲಿ ಇವರಿಬ್ಬರು ಸಿಟ್ಟಿನಲ್ಲಿ ಮಾತಿನ ಚಕಮಕಿ ನಡೆಸುತ್ತಿರುವುದು ಕಾಣಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿರುವ ಸೆಹವಾಗ್ ಮತ್ತು ಆರತಿ ಪ್ರತೇಕವಾಗಿ ವಾಸಿಸುತ್ತಿದ್ದು, ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದ್ದಾಗಿ ವರದಿಯಾಗಿದೆ. ಈ ಜೋಡಿಗೆ ಇಬ್ಬರು ಪುತ್ರರಿದ್ದು ಈಗಾಗಲೇ ಕಿರಿಯರ ಕ್ರಿಕೆಟ್‌ನಲ್ಲಿ ಇವರು ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಅನುಮಾನ?; ಬದಲಿ ಬೌಲರ್ ಸಿದ್ಧಪಡಿಸಿದ ಬಿಸಿಸಿಐ!
ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ಸೆಹವಾಗ್ 1999ರಿಂದ 2013ರವರೆಗೆ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಭಾರತದ ಪರ ಮೊದಲ ತ್ರಿಶತಕ ಬಾರಿಸಿದ ದಾಖಲೆ ಕೂಡ ಇವರ ಹೆಸರಿನಲ್ಲಿದೆ. 2004ರಲ್ಲಿ ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ 375 ಎಸೆತಗಳಲ್ಲಿ 309ರನ್ ಗಳಿಸಿದ್ದರು. 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈನಲ್ಲಿ 304 ಎಸೆತಗಳಲ್ಲಿ 319 ರನ್ಗಳೊಂದಿಗೆ ಬಿರುಸಿನ ತ್ರಿಶತಕ ಸಿಡಿಸಿದ್ದರು.
ಸೆಹವಾಗ್ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 104 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 23 ಶತಕ ಮತ್ತು 32 ಅರ್ಧಶತಕಗಳೊಂದಿಗೆ 8,586 ರನ್ ಗಳಿಸಿದ್ದಾರೆ. ಅಲ್ಲದೆ 40 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಏಕದಿನದಲ್ಲಿ, 251 ಪಂದ್ಯಗಳ ಮೂಲಕ 15 ಶತಕ ಮತ್ತು 38 ಅರ್ಧಶತಕಗಳೊಂದಿಗೆ 8,273 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 96 ವಿಕೆಟ್ ಉರುಳಿಸಿದ್ದಾರೆ.