ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿಮಾನ ನಿಲ್ದಾಣದ ಸಿಬ್ಬಂದಿ ಮೇಲೆ ಸ್ಯಾನಿಟರಿ ಪ್ಯಾಡ್ ಎಸೆದ ಮಹಿಳೆ; ಆಗಿದ್ದೇನು?

ಗ್ಲೋರಿಯಾ ಒಮಿಸೋರ್ ಎಂಬ ನೈಜೀರಿಯಾ ಮಹಿಳೆಗೆ ಪ್ರಯಾಣಿಸಲು ಅಗತ್ಯವಾದ ವೀಸಾ ಇಲ್ಲ ಎಂದಿದ್ದಕ್ಕೆ ನೈರೋಬಿಯ ವಿಮಾನ ನಿಲ್ದಾಣದ ಸಿಬ್ಬಂದಿ ಮೇಲೆ ತಾನು ಬಳಸಿದ್ದ ಮೂರು ಸ್ಯಾನಿಟರಿ ಪ್ಯಾಡ್‍ಗಳನ್ನು ಎಸೆದಿದ್ದಾಳೆ. ಇದು ಸಿಬ್ಬಂದಿ ಮತ್ತು ಆಕೆಯ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ವಿಮಾನ ನಿಲ್ದಾಣದ ಸಿಬ್ಬಂದಿ ಮೇಲೆ ಸ್ಯಾನಿಟರಿ ಪ್ಯಾಡ್ ಎಸೆದ ಮಹಿಳೆ

kinya airways

Profile pavithra Feb 5, 2025 4:45 PM

ನೈಜೀರಿಯಾ: ನೈರೋಬಿಯ ಜೊಮೊ ಕೆನ್ಯಟ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೈಜೀರಿಯಾದ ಪ್ರಯಾಣಿಕಳೊಬ್ಬಳು ವೀಸಾ ಸಮಸ್ಯೆಯಿಂದಾಗಿ ವಿಮಾನ ಹತ್ತಲು ಸಾಧ್ಯವಾಗದ ಕಾರಣ ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿಯ ಮೇಲೆ ಕೋಪಗೊಂಡು ಆಕೆ ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಎಸೆದ ಘಟನೆ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

ಗ್ಲೋರಿಯಾ ಒಮಿಸೋರ್ ಎಂಬ ಮಹಿಳೆ ಫೆಬ್ರವರಿ 3 ರಂದು ನೈಜೀರಿಯಾದ ಲಾಗೋಸ್‍ನಿಂದ ಕೀನ್ಯಾದ ನೈರೋಬಿಗೆ ಹೋಗಿದ್ದಾಳೆ.ಅಲ್ಲಿಂದ ಆಕೆ ಇಂಗ್ಲೆಂಡ್‌ಗೆ ಹೋಗುವ ಯೋಜನೆ ಇತ್ತು. ಆದರೆ ಚೆಕ್-ಇನ್ ಸಮಯದಲ್ಲಿ, ವಿಮಾನಯಾನ ಸಿಬ್ಬಂದಿ ಫ್ರಾನ್ಸ್‍ಗೆ ಹೋಗಲು ಅಗತ್ಯವಾದ ವೀಸಾ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಮತ್ತು ಅದಕ್ಕೆ ಪರ್ಯಾಯವಾಗಿ, ಅವಳಿಗೆ ಲಂಡನ್‍ಗೆ ಹೋಗಲು ವಿಮಾನ ಸೌಲಭ್ಯವನ್ನು ನೀಡಲಾಯಿತು. ಇದರಿಂದ ಕೋಪಗೊಂಡ ಆಕೆ ಚೆಕ್-ಇನ್ ಏಜೆಂಟರ ಜೊತೆ ಕೆಟ್ಟದ್ದಾಗಿ ವರ್ತಿಸಿದ್ದಾಳೆ. ಅವರು ನೀಡಿದ ಪ್ರಯಾಣ ಸೌಲಭ್ಯವನ್ನು ನಿರಾಕರಿಸಿ ಅವರಿಂದ ಅಡ್ಡಿಯಾದ ಪ್ರಯಾಣಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾಳೆ.



ಅದೂ ಅಲ್ಲದೇ, ಸಿಬ್ಬಂದಿಯ ಮೇಲೆ ತಾನು ಬಳಸಿದ್ದ ಮೂರು ಸ್ಯಾನಿಟರಿ ಪ್ಯಾಡ್‍ಗಳನ್ನು ತೆಗೆದು ಎಸೆದಿದ್ದಾಳೆ. ಇದರಿಂದ ಅಲ್ಲಿನ ಸಿಬ್ಬಂದಿ ಕೋಪಗೊಂಡು ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಘಟನೆಯ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮಹಿಳೆಯ ವರ್ತನೆಯಿಂದ ಸಿಬ್ಬಂದಿಗಳು ಸಿಕ್ಕಾಪಟ್ಟೆ ಸಿಟ್ಟಾಗಿ ಆಕೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. ವೀಸಾ ಸಮಸ್ಯೆಗಳಿಂದಾಗಿ ಬೋರ್ಡಿಂಗ್ ನಿರಾಕರಿಸಿದ ಪ್ರಯಾಣಿಕರಿಗೆ ವಿಮಾನಯಾನ ವೆಚ್ಚವನ್ನು ಭರಿಸುವುದಿಲ್ಲ ಎಂದು ಕೀನ್ಯಾ ಏರ್‌ವೇಸ್‌ ಸ್ಪಷ್ಟಪಡಿಸಿದೆ. ಮತ್ತು ತಮ್ಮ ಉದ್ಯೋಗಿಗಳ ಜೊತೆ ಮಹಿಳೆ ಅನುಚಿತ ವರ್ತನೆಯನ್ನು ತೋರಿಸಿದ್ದನ್ನು ಖಂಡಿಸಿದೆ. “ನಮ್ಮ ಸಿಬ್ಬಂದಿ ಸುರಕ್ಷಿತ ಮತ್ತು ಒಳ್ಳೆಯ ವಾತಾವರಣದಲ್ಲಿ ಕೆಲಸ ಮಾಡಲು ಅರ್ಹರು. ನಮ್ಮ ಸಿಬ್ಬಂದಿಗಳು ಅಥವಾ ಅತಿಥಿಗಳಿಂದ ಯಾವುದೇ ಅನುಚಿತ ವರ್ತನೆಯನ್ನು ನಾವು ಸಹಿಸುವುದಿಲ್ಲ” ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಚಲಿಸುತ್ತಿರುವ ವಿಮಾನದಲ್ಲಿ ಬಾಡಿಬಿಲ್ಡರ್ ಸ್ಟಂಟ್‌; ಮುಂದೇನಾಯ್ತು? ವಿಡಿಯೊ ನೋಡಿ

ನೈಜೀರಿಯನ್ ನಾಗರಿಕ ವಿಮಾನಯಾನ ಪ್ರಾಧಿಕಾರ ಮತ್ತು ಕೀನ್ಯಾ ಏರ್‌ವೇಸ್‌ ನಡುವಿನ ಚರ್ಚೆಯ ನಂತರ, ಅಧಿಕಾರಿಗಳು ಒಮಿಸೋರ್ ಅನ್ನು ಅದೇ ದಿನ ನೈಜೀರಿಯಾಕ್ಕೆ ಗಡಿಪಾರು ಮಾಡಲು ಒಪ್ಪಿಕೊಂಡರು ಎನ್ನಲಾಗಿದೆ.