ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚುನಾವಣೆಗೂ ಮೊದಲೇ ಭೇಟಿಯಾದ್ರು ಯಾದವ್‌ ಸಹೋದರರು;ಮಾತಿಲ್ಲ ಕತೆಯಿಲ್ಲ...... ವಿಡಿಯೋ ನೋಡಿ

ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಮಧ್ಯೆ ಇದೀಗ ಯಾದವ್ ಸಹೋದರರ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್ ಸಹೋದರರು ಅಂಗಡಿಯೊಂದರ ಒಳಗೆ ಭೇಟಿಯಾಗಿದ್ದಾರೆ. ಈ ವೇಳೆ ತೇಜ್ ಪ್ರತಾಪ್ ಅವರು ಮಾಧ್ಯಮದೊಂದಿಗೆ ಮಾತನಾಡಲು ಹಿಂದೇಟು ಹಾಕಿದ ಘಟನೆ ನಡೆದಿದೆ.

ತಮ್ಮನನ್ನು ನಿರ್ಲಕ್ಷ್ಯ ಮಾಡಿದ್ರಾ  ತೇಜಸ್ವಿ ಯಾದವ್?

ಪಾಟ್ನಾದ ವಿಮಾನ ನಿಲ್ದಾಣದ ಅಂಗಡಿಯೊಂದರಲ್ಲಿ ಮುಖಾಮುಖಿಯಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್. (ಸಂಗ್ರಹ ಚಿತ್ರ) -

ಪಾಟ್ನಾ: ಬಿಹಾರ ವಿಧಾನ ಸಭಾ ಚುನಾವಣೆ (Bihar Assembly Elections) ಸಿದ್ಧತೆಯಲ್ಲಿರುವ ರಾಷ್ಟ್ರೀಯ ಜನತಾದಳ ನಾಯಕ (Rashtriya Janata Dal) ಮತ್ತು ಅವರ ಕಿರಿಯ ಸಹೋದರ ತೇಜಸ್ವಿ ಯಾದವ್ (Tejashwi Yadav) ತಮ್ಮ ಸಹೋದರ ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರನ್ನು ಅಂಗಡಿಯೊಂದರಲ್ಲಿ ಭೇಟಿಯಾದ ಘಟನೆ ನಡೆದಿದೆ. ಈ ವೇಳೆ ಯಾದವ್ ಸಹೋದರರು ಪರಸ್ಪರ ಮಾತನಾಡಲು ಹಿಂದೇಟು ಹಾಕಿದರು. ತೇಜಸ್ವಿ ಯಾದವ್ ಅವರು ಸಹೋದರನನ್ನು ಕೂಗಿ ಕರೆದು ಮಾತನಾಡಿದರು. ಅವರಿಗೆ ಪ್ರತಿಕ್ರಿಯೆ ನೀಡಲು ತೇಜ್ ಪ್ರತಾಪ್ ಯಾದವ್ ಹಿಂಜರಿದ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ.

ಜನಶಕ್ತಿ ಜನತಾದಳ ನಾಯಕ ಲಾಲು ಪ್ರಸಾದ್ ಯಾದವ್ ಅವರಿಂದ ದೂರವಾಗಿರುವ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಪಾಟ್ನಾದಲ್ಲಿ ರಾಷ್ಟ್ರೀಯ ಜನತಾದಳ ನಾಯಕ ಮತ್ತು ಅವರ ಕಿರಿಯ ಸಹೋದರ ತೇಜಸ್ವಿ ಯಾದವ್ ಅವರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: Belagavi Farmers Protest: ಕಬ್ಬು ಬೆಳೆಗಾರರ ಪ್ರತಿಭಟನೆ; ನಾಳೆ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಜತೆ ಸಿಎಂ ಸಭೆ

ಬಿಹಾರ ವಿಧಾನ ಸಭಾ ಚುನಾವಣೆಗೂ ಮುಂಚಿತವಾಗಿ ಪಾಟ್ನಾ ವಿಮಾನ ನಿಲ್ದಾಣದ ಹೊರಗೆ ಅಂಗಡಿಯಲ್ಲಿ ಯಾದವ್ ಸಹೋದರರು ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರೂ ಮಾತನಾಡದೆ ವಿಚಿತ್ರವಾಗಿ ನಡೆದುಕೊಂಡ ದೃಶ್ಯವು ಪಾಡ್‌ಕ್ಯಾಸ್ಟ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಯೂಟ್ಯೂಬರ್ ಸಮದೀಶ್ ಭಾಟಿಯಾ ಮತ್ತು ತೇಜ್ ಪ್ರತಾಪ್ ಅವರು ಪಾಟ್ನಾದ ವಿಮಾನ ನಿಲ್ದಾಣದಲ್ಲಿ ಬಟ್ಟೆ ಅಂಗಡಿಯೊಂದರ ಒಳಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ವಿಐಪಿ ಪಕ್ಷದ ಮುಖ್ಯಸ್ಥ ಮತ್ತು ವಿರೋಧ ಪಕ್ಷದ ಉಪಮುಖ್ಯಮಂತ್ರಿ ಅಭ್ಯರ್ಥಿ ಮುಖೇಶ್ ಸಹಾನಿ ಅವರೊಂದಿಗೆ ತೇಜಸ್ವಿ ಯಾದವ್ ಅವರು ಕೂಡ ಅಂಗಡಿಯೊಳಗೆ ಪ್ರವೇಶಿಸಿದ್ದಾರೆ.



ತೇಜ್ ಪ್ರತಾಪ್ ಅವರನ್ನು ನೋಡಿದ ತೇಜಸ್ವಿ ಯಾದವ್, ಶಾಪಿಂಗ್ ಕರಾ ರಹೇ ಹೈ ಕ್ಯಾ ಭಯ್ಯಾ? (ಸಹೋದರ ಶಾಪಿಂಗ್ ಮಾಡುತ್ತಿದ್ದೀಯಾ ?) ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಮದೀಶ್ ಅವರು ಉಡುಗೊರೆ ನೀಡುತ್ತಿದ್ದಾರೆ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ.

ತೇಜಸ್ವಿ ಯಾದವ್ ಅವರನ್ನು ಅಚಾನಕ್ ಆಗಿ ಭೇಟಿಯಾದ ತೇಜ್ ಪ್ರತಾಪ್ ಇದರಿಂದ ಕೊಂಚ ಮುಜುಗರಕ್ಕೆ ಒಳಗಾದಂತೆ ಕಂಡು ಬಂದಿದ್ದಾರೆ. ಈ ವೇಳೆ ಸಮದೀಶ್ ಸಹಾನಿ ಅವರು ತೇಜಸ್ವಿಯವರನ್ನು ಭೇಟಿಯಾಗಲು ಹೋಗುತ್ತಾರೆ. ಆಗ ಅವರು ತೇಜ್ ಪ್ರತಾಪ್ ಬಳಿ ನೀವು ಸಹೋದರನೊಂದಿಗೆ ಮಾತನಾಡುತ್ತಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಆದರೆ ಇದಕ್ಕೆ ಉತ್ತರಿಸಲು ತೇಜ್ ಪ್ರತಾಪ್ ಹಿಂದೇಟು ಹಾಕಿದರು.

ಇದನ್ನೂ ಓದಿ: DK Shivakumar: ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ರೇಖೆ ದಾಟುವುದಿಲ್ಲ- ಡಿ.ಕೆ. ಶಿವಕುಮಾರ್‌ ಹೀಗ್ಯಾಕೆ ಅಂದ್ರು?

ಜನಶಕ್ತಿ ಜನತಾದಳ (ಜೆಜೆಡಿ)ದಿಂದ ತೇಜ್ ಪ್ರತಾಪ್ ಯಾದವ್ ಅವರು ಮಹುವಾ ಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ. ಆರ್‌ಜೆಡಿ ಶಾಸಕ ಮುಖೇಶ್ ರೌಶನ್ ವಿರುದ್ಧ ತೇಜ್ ಪ್ರತಾಪ್ ಯಾದವ್ ಕಣಕ್ಕೆ ಇಳಿದಿದ್ದಾರೆ.