ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಮಹಿಳೆಯ ಮೇಲೆ ಬೀದಿನಾಯಿಗಳ ಏಕಾಏಕಿ ದಾಳಿ; ಭಯಾನಕ ವಿಡಿಯೊ ವೈರಲ್!
Viral Video: ಬೀದಿನಾಯಿ ದಾಳಿ ಮಾಡಿರುವ ಮತ್ತೊಂದು ಘಟನೆ ನಡೆದಿದ್ದು ವಸತಿ ಪ್ರದೇಶವೊಂದ ರಲ್ಲಿ ತನ್ನಷ್ಟಕ್ಕೆ ಮೊಬೈಲ್‌ನಲ್ಲಿ ಮಾತಾನಾಡುತ್ತ ಹೋಗುತ್ತಿದ್ದ ಮಹಿಳೆಯ ಮೇಲೆ ಬೀದಿ ನಾಯಿ ಯೊಂದು ಏಕಾ ಏಕಿ ದಾಳಿ ಮಾಡಿದೆ. ಸದ್ಯ ಈ ಭಯಾನಕ ವಿಡಿಯೊ ಭಾರೀ ವೈರಲ್ ಆಗಿದೆ.
ಮಹಿಳೆಯ ಮೇಲೆ ಬೀದಿನಾಯಿಗಳ ಏಕಾಏಕಿ ದಾಳಿ -
ನವದೆಹಲಿ, ಫೆ.18: ಇಂದು ಬೀದಿನಾಯಿಗಳ ಹಾವಳಿ ಎಲ್ಲೆಡೆ ಜಾಸ್ತಿಯಾಗಿದೆ. ಇದರಿಂದಾಗಿ ಶಾಲಾ ಮಕ್ಕಳು, ದಿನ ನಿತ್ಯ ಕೆಲಸಕ್ಕೆ ತೆರಳುವ ಮಹಿಳೆಯರು, ಹಿರಿಯರು ಭಯದ ವಾತಾವರಣದಲ್ಲಿಯೇ ರಸ್ತೆಗಳಲ್ಲಿ ಚಲಿಸಬೇಕಾಗುತ್ತದೆ. ಇದೀಗ ಬೀದಿನಾಯಿ ದಾಳಿ ಮಾಡಿರುವ ಮತ್ತೊಂದು ಘಟನೆ ನಡೆದಿದ್ದು ವಸತಿ ಪ್ರದೇಶವೊಂದರಲ್ಲಿ ತನ್ನಷ್ಟಕ್ಕೆ ಮೊಬೈಲ್‌ನಲ್ಲಿ ಮಾತಾನಾಡುತ್ತ ಹೋಗುತ್ತಿದ್ದ ಮಹಿಳೆಯ ಮೇಲೆ ಬೀದಿ ನಾಯಿಯೊಂದು ಏಕಾ ಏಕಿ ದಾಳಿ ಮಾಡಿದೆ. ಸದ್ಯ ಈ ಭಯಾನಕ ವಿಡಿಯೊ ಭಾರೀ ವೈರಲ್ (Viral Video) ಆಗಿದೆ.
ವಸತಿ ಪ್ರದೇಶವೊಂದರಲ್ಲಿ ಮಹಿಳೆಯೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಇದ್ದಕ್ಕಿದ್ದಂತೆ, ಬೀದಿ ನಾಯಿ ಮಹಿಳೆಯ ಮೈಮೇಲೆ ದಾಳಿ ಮಾಡುತ್ತದೆ. ನಾಯಿ ಕಚ್ಚುತ್ತಿದ್ದಂತೆ ಮಹಿಳೆ ನೋವಿನಿಂದ ಕಿರುಚಾಡಿದ್ದಾರೆ. ಕೊನೆಗೆ ಸ್ಥಳೀಯರು ಓಡಿ ಬಂದು ನಾಯಿ ಯನ್ನು ಬೆನ್ನಟ್ಟಿದ್ದು ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಕಂಡು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ:
A Woman walking casually, suddenly ambushed & dragged down by a stray dog.
— Being Political (@BeingPolitical1) February 16, 2026
High-risk bite, rabies exposure. Symptoms delayed weeks, then hydrophobia, terror, 100% fatal once clinical.
India loses thousands yearly to preventable rabies from strays. pic.twitter.com/iBRJ8HCu5X
ವೈರಲ್ ಆಗಿರುವ ವಿಡಿಯೋದಲ್ಲಿ ಬೀದಿ ನಾಯಿ ಭಯಾನಕವಾಗಿ ದಾಳಿ ಮಾಡುವ ದೃಶ್ಯ ನೋಡಬಹುದು. ಈ ಘಟನೆಯ ಬಗ್ಗೆ ನಿಖರವಾದ ಸ್ಥಳ ಮತ್ತು ದಿನಾಂಕ ವರದಿಯಾಗಿಲ್ಲ. ನಾಯಿ ಕಚ್ಚುತ್ತಿದ್ದಂತೆ ಮಹಿಳೆ ನೋವಿನಿಂದ ಬೊಬ್ಬೆ ಹಾಕಿದರೂ ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ನಾಯಿ ಆಕೆಯನ್ನು ಬಿಡದೆ ಕಚ್ಚುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ವೈರಲ್ ಆಗಿದ್ದು ಹೆಚ್ಚಿನವರಲ್ಲಿ ಆತಂಕ ಮೂಡಿಸಿದೆ.
Viral Video: ಚುನಾವಣೆಗೂ ಮೊದಲೇ ಭೇಟಿಯಾದ್ರು ಯಾದವ್ ಸಹೋದರರು;ಮಾತಿಲ್ಲ ಕತೆಯಿಲ್ಲ...... ವಿಡಿಯೋ ನೋಡಿ
ಕೇವಲ 24 ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿರುವ ಈ ವಿಡಿಯೋ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರೊಬ್ಬರು ಇದಕ್ಕಾಗಿಯೇ ಬೀದಿ ನಾಯಿಗಳಿಗೆ ಸರಿಯಾದ ವ್ಯಾಕ್ಸಿನೇಷನ್ ಅಗತ್ಯ ಎಂದಿದ್ದಾರೆ. ಮತ್ತೊಬ್ಬರು ಇದು ಭಯಾನಕ ದೃಶ್ಯ ಬೀದಿ ನಾಯಿಗಳನ್ನು ಬೆಂಬಲಿಸುವ ಜನರು ಈ ಬಗ್ಗೆಯೂ ಎಚ್ಚೆತ್ತುಕೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ.