Viral Video: ರೀಲ್‍ಗಾಗಿ 30 ಅಡಿ ಎತ್ತರದ ಹೋರ್ಡಿಂಗ್ ಹತ್ತಿದ ಯುವಕ; ಮುಂದೇನಾಯ್ತು? ವಿಡಿಯೊ ನೋಡಿ
ಇನ್‌ಸ್ಟಾಗ್ರಾಂ ರೀಲ್‍ಗಾಗಿ ಯುವಕನೊಬ್ಬ ಎನ್ಎಚ್ -344 ರಲ್ಲಿ 30 ಅಡಿ ಎತ್ತರದ ಹೆದ್ದಾರಿ ಹೋರ್ಡಿಂಗ್ ಅನ್ನು ಹತ್ತಿದ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
![Reel craze](https://cdn-vishwavani-prod.hindverse.com/media/images/Reel_craze.max-1280x720.jpg)
![Profile](https://vishwavani.news/static/img/user.png)
ಲಖನೌ: ಚಲಿಸುತ್ತಿರುವ ರೈಲಿನಲ್ಲಿ ಸ್ಟಂಟ್, ರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ಸ್ಟಂಟ್ ಮಾಡುವುದು ಹೀಗೆ ನಾನಾ ರೀತಿಯ ರೀಲ್ಸ್‌ಗಳನ್ನು ನೀವು ನೋಡಿರಬಹುದು. ಇದೀಗ ಇನ್‌ಸ್ಟಾಗ್ರಾಂ ರೀಲ್‍ಗಾಗಿ ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸ್ಟಂಟ್ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ. ಜೀವವನ್ನು ಅಪಾಯಕ್ಕೆ ತಳ‍್ಳುವ ಯುವಕನ ಸ್ಟಂಟ್ ವಿಡಿಯೊ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಯುವಕ ರೀಲ್ ಕ್ರೇಜ್‌ಗಾಗಿ ಎನ್ಎಚ್ -344 ರಲ್ಲಿ 30 ಅಡಿ ಎತ್ತರದ ಹೆದ್ದಾರಿ ಹೋರ್ಡಿಂಗ್ ಅನ್ನು ಹತ್ತಿದ್ದಾನಂತೆ. ಹೋರ್ಡಿಂಗ್ ಏರಿದ ಆತ ಎರಡೂ ಕೈಗಳನ್ನು ಎತ್ತಿದ್ದಾನೆ. ಅತನ ಸ್ನೇಹಿತರು ಕೆಳಗೆ ನಿಂತು ಗೆಳೆಯನ ಸಾಹಸವನ್ನು ಕಂಡು ಹರ್ಷೋದ್ಗಾರ ಮಾಡುತ್ತಾ ವೈರಲ್ ಹಾಡಿಗೆ ನೃತ್ಯ ಮಾಡಿದ್ದಾರೆ. ಈಗ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಜನರ ಆಕ್ರೋಶಕ್ಕೆ ಕಾರಣವಾಗಿದೆ.
सहारनपुर में युवाओं में रील बनाने का चढ़ा खुमार, NH 344 हाईवे के बोर्ड पर चढ़ कर युवक बना रहा रील
— भारत समाचार | Bharat Samachar (@bstvlive) February 5, 2025
पोल पर चढ़कर जान की परवाह किए बिना बनाई रील, रील बनाकर युवक ने की इंस्टाग्राम पर वीडियो वायरल#Saharanpur @saharanpurpol @Uppolice pic.twitter.com/XKbdRw7dYg
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಪೊಲೀಸರು ವೈರಲ್ ವಿಡಿಯೊ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ. ವೈರಲ್ ವಿಡಿಯೊಗೆ ಉತ್ತರಿಸಿದ ಪೊಲೀಸರು, "ಈ ವಿಷಯದಲ್ಲಿ, ಅಗತ್ಯ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ವ್ಯಕ್ತಿಗೆ ನಿರ್ದೇಶಿಸಲಾಗಿದೆ" ಎಂದು ಹೇಳಿದ್ದಾರೆ.
ಈ ವೈರಲ್ ವಿಡಿಯೊ ನೋಡಿ ನೆಟ್ಟಿಗರು ಯುವಕನ ಮೇಲೆ ಕಿಡಿಕಾರಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಲೈಕ್‍ಗಳು ಮತ್ತು ಶೇರ್‌ಗಳಿಗಾಗಿ ಪ್ರಾಣವನ್ನು ಪಣಕ್ಕಿಟ್ಟಿದ್ದಕ್ಕಾಗಿ ಯುವಕನನ್ನು ಟೀಕಿಸಿದ್ದಾರೆ. ಇಂತಹ ವಿಡಿಯೊಗಳಲ್ಲಿ ಭಾಗಿಯಾಗಿರುವ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ ಕಂಟೆಂಟ್ ಕ್ರಿಯೇಟರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮತ್ತು ಕಠಿಣ ಕಾನೂನುಗಳನ್ನು ತರಲು ಅವರು ಆಡಳಿತವನ್ನು ಒತ್ತಾಯಿಸಿದ್ದಾರೆ.
"ಸರ್ಕಾರವು ಈ ರೀಲ್ಸ್ ಬಗ್ಗೆ ಏನಾದರೂ ಯೋಚಿಸಬೇಕು" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. "ಅಂತಹ ಅಪರಾಧಿಗಳಿಗೆ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ನಿಲ್ಲಿಸಿದಾಗ ಮಾತ್ರ ಅವರಿಗೆ ಅರ್ಥವಾಗುತ್ತದೆ" ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ರೀಲ್‍ಗಾಗಿ ರೈಲ್ವೆ ಸೇತುವೆಯ ಮೇಲೆ ಟ್ರಿಪಲ್ ರೈಡ್ ಮಾಡಿದ ಯುವಕ; ನೆಟ್ಟಿಗರು ಕಿಡಿ!
ಇತ್ತೀಚೆಗೆ ಯುವಕನೊಬ್ಬ ರೀಲ್ ಮಾಡಲು ನದಿಯ ಮೇಲಿನ ರೈಲ್ವೆ ಸೇತುವೆಯ ಮೇಲೆ ಬೈಕ್‍ನಲ್ಲಿ ಇಬ್ಬರು ಹುಡುಗಿಯರನ್ನು ಕೂರಿಸಿಕೊಂಡು ಟ್ರಿಪಲ್ ರೈಡ್ ಮಾಡಿದ್ದಾನೆ. ಇಲ್ಲಿ ಆತ ತನ್ನ ಜೀವವನ್ನು ಮಾತ್ರವಲ್ಲ ಇತರರ ಜೀವವನ್ನು ಪಣಕ್ಕಿಟ್ಟಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಆಗಿತ್ತು.
ವೈರಲ್ ಆಗಿರುವ ವಿಡಿಯೊದಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಹುಡುಗಿಯರಲ್ಲಿ ಒಬ್ಬಳು ಅಪ್ರಾಪ್ತ ವಯಸ್ಕಳು ಎನ್ನಲಾಗಿದೆ. ಈ ಅಜಾಗರೂಕ ಬೈಕ್ ಸವಾರಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗೆ ಗುರಿಯಾಗಿತ್ತು. ಹಾಗೇ ಬೈಕ್ ಓಡಿಸುತ್ತಿದ್ದ ಯುವಕನ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.