Viral Video: ರೀಲ್‍ಗಾಗಿ ರೈಲ್ವೆ ಸೇತುವೆಯ ಮೇಲೆ ಟ್ರಿಪಲ್ ರೈಡ್ ಮಾಡಿದ ಯುವಕ; ನೆಟ್ಟಿಗರು ಕಿಡಿ!
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹಾಗೂ ಲೈಕ್ಸ್, ವ್ಯೂವ್ಸ್ ಗಳಿಸಲು ಜನರು ತುಂಬಾ ಅಪಾಯಕಾರಿ ಸ್ಟಂಟ್‍ಗಳನ್ನು ಮಾಡುತ್ತಾರೆ. ಇದರಿಂದ ಎಷ್ಟೋ ಜನರ ಜೀವ ಬಲಿಯಾಗಿದೆ. ಆದರೂ ಜನರಿಗೆ ರೀಲ್ಸ್ ಹುಚ್ಚು ಬಿಟ್ಟಿಲ್ಲ! ಇದೀಗ ಯುವಕನೊಬ್ಬ ಬೈಕ್‍ನಲ್ಲಿ ರೈಲ್ವೆ ಸೇತುವೆಯ ಮೇಲೆ ಅಪಾಯಕಾರಿ ಟ್ರಿಪಲ್ ರೈಡ್ ಮಾಡಿದ್ದಾನೆ. ಈ ವಿಡಿಯೊ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ. ಇದೀಗ ಸಿಕ್ಕಾಪಟ್ಟೆ ವೈರಲ್ (Viral Video )ಆಗಿದೆ.
ರಾಂಚಿ: ಇತ್ತೀಚೆಗೆ ಯುವಕನೊಬ್ಬ ರೀಲ್ ಮಾಡಲು ನದಿಯ ಮೇಲಿನ ರೈಲ್ವೆ ಸೇತುವೆಯ ಮೇಲೆ ಬೈಕ್‍ನಲ್ಲಿ ಇಬ್ಬರು ಹುಡುಗಿಯರನ್ನು ಕೂರಿಸಿಕೊಂಡು ಟ್ರಿಪಲ್ ರೈಡ್ ಮಾಡಿದ್ದಾನೆ. ಇಲ್ಲಿ ಆತ ತನ್ನ ಜೀವವನ್ನು ಮಾತ್ರವಲ್ಲ ಇತರರ ಜೀವವನ್ನು ಪಣಕ್ಕಿಟ್ಟಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್
(Viral Video )ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಹುಡುಗಿಯರಲ್ಲಿ ಒಬ್ಬಳು ಅಪ್ರಾಪ್ತ ವಯಸ್ಕಳು ಎನ್ನಲಾಗಿದೆ. ಈ ಅಜಾಗರೂಕ ಬೈಕ್ ಸವಾರಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗೆ ಗುರಿಯಾಗಿತ್ತು. ಹಾಗೇ ಬೈಕ್ ಓಡಿಸುತ್ತಿದ್ದ ಯುವಕನ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
A Guy riding a motorcycle on a railway bridge over a river while making a reel, endangering not only their own life but also the lives of two others. The video appears to be from Jharkhand
— Ghar Ke Kalesh (@gharkekalesh) January 17, 2025
pic.twitter.com/7jl6v4Xxv5
ರೈಲ್ವೆ ಸೇತುವೆಯ ಮೇಲೆ ಬೈಕ್ ಓಡಿಸುವ ಮೂಲಕ, ಅವನು ತನ್ನ ಜೀವ ಮಾತ್ರವಲ್ಲದೆ ಅವನದೊಂದಿಗೆ ಇದ್ದ ಇಬ್ಬರು ಹುಡುಗಿಯರ ಜೀವಕ್ಕೂ ಅಪಾಯವನ್ನುಂಟುಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಂಟ್ ಸಮಯದಲ್ಲಿ ರೈಲು ಬಂದಿದ್ದರೆ ಅಲ್ಲಿ ದೊಡ್ಡ ಅಪಘಾತ ಸಂಭವಿಸುತ್ತಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 1 ಮಿಲಿಯನ್ ವ್ಯೂವ್ಸ್ ಮತ್ತು 28,000 ಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ.
ಇದಕ್ಕೆ ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವರು ಅವರು "ಮೌಂಟೇನ್ ಡ್ಯೂ ಮೋಡ್" ನಲ್ಲಿದ್ದಾರೆ ಎಂದು ಗೇಲಿ ಮಾಡಿದರೆ, ಇತರರು ಅವರನ್ನು ತಕ್ಷಣ ಬಂಧಿಸುವಂತೆ ಕರೆ ನೀಡಿದ್ದಾರೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‍ಪಿಎಫ್) ಅಥವಾ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕಾರಿನ ಬಾನೆಟ್‌ನಲ್ಲಿ ಬಾಲಕನನ್ನು ಕೂರಿಸಿ ರೀಲ್ಸ್... ವಿಡಿಯೊ ನೋಡಿ ಹೌಹಾರಿದ ನೆಟ್ಟಿಗರು!
ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ @JharkhandRail ಹಂಚಿಕೊಂಡ ಮತ್ತೊಂದು ವಿಡಿಯೊದಲ್ಲಿ, ಅವರು ಮತ್ತೆ ರೈಲ್ವೆ ಹಳಿಗಳ ಮೇಲೆ ಬೈಕ್‍ನಲ್ಲಿ ಹೋಗುವುದು ಕಂಡುಬಂದಿದೆ. ಅವರು ಪದೇ ಪದೇ ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಈ ಹ್ಯಾಂಡಲ್‍ನಲ್ಲಿ ಆರೋಪಿಸಲಾಗಿದೆ ಮತ್ತು ಅವರನ್ನು ಬಂಧಿಸಲು ಕರೆ ನೀಡಲಾಗಿದೆ.