ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಕ್ಫ್ ತಿದ್ದುಪಡಿ ಕಾಯ್ದೆ: ವಲಸೆ ಹೋದ ಹಿಂದೂಗಳ ಬಗ್ಗೆ ಪಂಡಿತ ಧೀರೇಂದ್ರ ಶಾಸ್ತ್ರಿ ಕಳವಳ

ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದಿದ್ದು, ಈ ಹಿನ್ನೆಲೆಯಲ್ಲಿ ಮುರ್ಷಿದಾಬಾದ್‍ನಿಂದ ಹಿಂದೂಗಳು ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದಾರೆ. ಈ ಬಗ್ಗೆ ಬಾಗೇಶ್ವರ ಧಾಮ್ ಪಂಡಿತ ಧೀರೇಂದ್ರ ಶಾಸ್ತ್ರಿ ಕಳವಳ ವ್ಯಕ್ತಪಡಿಸಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆ (Waqf (Amendment) Bill) ಕುರಿತು ಹಿಂಸಾಚಾರ ಭುಗಿಲೆದ್ದ ನಂತರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನಿಂದ ಹಿಂದೂಗಳು ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದಾರೆ. ಈ ಬಗ್ಗೆ ಬಾಗೇಶ್ವರ ಧಾಮ್ ಪಂಡಿತ ಧೀರೇಂದ್ರ ಶಾಸ್ತ್ರಿ ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ವಲಸೆ ಹೋಗುವಂತೆ ಒತ್ತಾಯಿಸಲಾಗುತ್ತಿದೆ ಮತ್ತು ಅಂತಹ ಪರಿಸ್ಥಿತಿ ಮುಂದುವರಿದರೆ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‍ನಂತಹ ಇತರ ರಾಜ್ಯಗಳಲ್ಲಿಯೂ ಜನರು ವಲಸೆ ಹೋಗುವ ದಿನ ದೂರವಿಲ್ಲ ಎಂದು ಶಾಸ್ತ್ರಿ ಹೇಳಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಧೀರೇಂದ್ರ ಶಾಸ್ತ್ರಿ ಮಾತನಾಡಿ, “ಹಿಂದೂಗಳು ಮುರ್ಷಿದಾಬಾದ್ ವಲಸೆ ಹೋಗುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ. ಇದು ಮುಂದುವರಿದರೆ, ನೀವು ಹಿಂದೂಗಳು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‍ನಿಂದ ವಲಸೆ ಬಂದರೆ ಆಘಾತಕ್ಕೊಳಗಾಗಬೇಡಿ" ಎಂದು ಹೇಳಿದ್ದಾರೆ.

ಬಾಗೇಶ್ವರ ಧಾಮ್ ಪಂಡಿತ ಧೀರೇಂದ್ರ ಶಾಸ್ತ್ರಿ ಹೇಳಿಕೆಯ ವಿಡಿಯೊ ಇಲ್ಲಿದೆ ನೋಡಿ...



"ಹಿಂದೂಗಳು ಭಯಭೀತರಾಗಿದ್ದಾರೆ. ಇದೆಲ್ಲವನ್ನೂ ಪೂರ್ವ ಯೋಜನೆಯೊಂದಿಗೆ ಮಾಡಲಾಗುತ್ತಿದೆ. ಹಿಂದೂಗಳು ಒಗ್ಗಟ್ಟಾಗಿಲ್ಲದ ಕಾರಣ ಇದು ದೇಶಕ್ಕೆ ಮತ್ತು ವಿಶೇಷವಾಗಿ ಹಿಂದೂಗಳಿಗೆ ದುರದೃಷ್ಟಕರ. ಆದರೆ ಇದೆಲ್ಲವೂ ಶೀಘ್ರದಲ್ಲೇ ನಿಲ್ಲುತ್ತದೆ ಎಂದು ನಾನು ನಂಬುತ್ತೇನೆ” ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಮುರ್ಷಿದಾಬಾದ್ ಹಿಂಸಾಚಾರಕ್ಕೆ ಕಾರಣವೇನು?

ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನಲ್ಲಿ ವಕ್ಫ್ ತಿದ್ದುಪಡಿ ಕಾನೂನನ್ನು ಕಾನೂನುಬದ್ಧಗೊಳಿಸಿದ ನಂತರ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿತು. ಇದರಲ್ಲಿ ಮನೆಗಳು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಹಲ್ಲೆ ನಡೆಸಲಾಯಿತು ಮತ್ತು ನೀರಿಗೆ ವಿಷ ಹಾಕಲಾಯಿತು. ಈ ಘಟನೆಗಳಿಂದ ಭಯಗೊಂಡ ನೂರಾರು ಜನರು , ಅದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ತಮ್ಮ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಗಂಗಾ ನದಿಯನ್ನು ದಾಟಿ ಮಾಲ್ಡಾದ ವೈಷ್ಣಬ್‍ನಗರಕ್ಕೆ ಹೋಗಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ 200 ಜನರನ್ನು ಬಂಧಿಸಲಾಗಿದೆಯಂತೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸ್ಥಳದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಅಬ್ಬಾಬ್ಬಾ... ರಾಂಚಿಯ ಈ ಪ್ರದೇಶದಲ್ಲಿ ದೆವ್ವಗಳ ಮೆರವಣಿಗೆ; ಬೆಚ್ಚಿಬೀಳಿಸುವ ವಿಡಿಯೊ ವೈರಲ್

ಅಲ್ಲದೇ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನಲ್ಲಿ ತಂದೆ-ಮಗ ಇಬ್ಬರನ್ನು ಗುಂಪೊಂದು ಕೊಚ್ಚಿ ಕೊಂದಿದೆ ಮತ್ತು ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಪ್ರತಿಭಟನೆ ಭುಗಿಲೆದ್ದ ಹಿನ್ನೆಲೆಯಲ್ಲಿ ಶಾಂತಿಗಾಗಿ ಮನವಿ ಮಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರ್ಮದ ಹೆಸರಿನಲ್ಲಿ ಧಾರ್ಮಿಕೇತರ ಚಟುವಟಿಕೆಗಳನ್ನುಮಾಡದಂತೆ ಆಗ್ರಹಿಸಿದ್ದಾರೆ. ವಕ್ಫ್ ತಿದ್ದುಪಡಿ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ ಎಂದು ಹೇಳಿದ್ದಾರೆ.