ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸಿಗರೇಟ್ ನೀಡಲು ನಿರಾಕರಿಸಿದ ವ್ಯಕ್ತಿಗೆ ಭಿಕ್ಷುಕಿ ಮಾಡಿದ್ದೇನು? ಬೆಚ್ಚಿ ಬೀಳಿಸುವ ವಿಡಿಯೊ ವೈರಲ್

ರೆಸ್ಟೋರೆಂಟ್‍ವೊಂದರಲ್ಲಿ ಗೆಳೆಯರ ಜತೆ ಊಟ ಮಾಡುತ್ತಿದ್ದ ವ್ಯಕ್ತಿಯ ಬಳಿ ವೃದ್ಧ ಭಿಕ್ಷುಕಿಯೊಬ್ಬಳು ಸಿಗರೇಟು ಕೇಳಿದ್ದು, ಆತ ಅದನ್ನು ನೀಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನ ಬೆನ್ನಿಗೆ ಗುದ್ದಿದ್ದಾಳೆ. ಈ ಘಟನೆ ಮಲೇಷಿಯಾದಲ್ಲಿ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಸಿಗರೇಟ್ ನೀಡಲು ನಿರಾಕರಿಸಿದ ವ್ಯಕ್ತಿಗೆ ಭಿಕ್ಷುಕಿ ಹೀಗಾ ಮಾಡೋದು?!

Profile pavithra Apr 16, 2025 7:25 PM

ರೆಸ್ಟೋರೆಂಟ್‍ವೊಂದರಲ್ಲಿ ಗೆಳೆಯರ ಜತೆ ಊಟ ಮಾಡುತ್ತಿದ್ದ ವ್ಯಕ್ತಿಯ ಬಳಿ ವೃದ್ಧ ಭಿಕ್ಷುಕಿಯೊಬ್ಬಳು ಸಿಗರೇಟು ಕೇಳಿದ್ದು, ಆತ ಅದನ್ನು ನೀಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನ ಬೆನ್ನಿಗೆ ಗುದ್ದಿದ ಘಟನೆ ಮಲೇಷಿಯಾದಲ್ಲಿ ನಡೆದಿದೆ. ಆ ವ್ಯಕ್ತಿ ಮತ್ತು ವೃದ್ಧೆಯ ನಡುವಿನ ಈ ಗುದ್ದಾಟದ ದೃಶ್ಯದ ವಿಡಿಯೊ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ ಭಿಕ್ಷುಕಿಯೊಬ್ಬಳು ಸಿಗರೇಟು ನೀಡಲು ನಿರಾಕರಿಸಿದ ವ್ಯಕ್ತಿಯ ಬೆನ್ನಿಗೆ ಹೊಡೆದಿರುವುದು ಸೆರೆಯಾಗಿದೆ. ರೆಸ್ಟೋರೆಂಟ್‍ನಲ್ಲಿ ವ್ಯಕ್ತಿಯೊಬ್ಬ ಸ್ನೇಹಿತರೊಂದಿಗೆ ಊಟ ಮಾಡುತ್ತಿದ್ದನಂತೆ. ಆಗ ಭಿಕ್ಷುಕಿಯೊಬ್ಬಳು ಬಂದು ಸಿಗರೇಟು ಕೊಡುವಂತೆ ಅವನ ಬಳಿ ಒತ್ತಾಯಿಸಿದ್ದಾಳೆ. ಅವನು ನಿರಾಕರಿಸಿದಾಗ ಅವಳು ಕೋಪಗೊಂಡು ಅವನಿಗೆ ಹೊಡೆದಿದ್ದಾಳೆ. ಭಿಕ್ಷುಕಿ ಎಷ್ಟೇ ಹೊಡೆದ್ರೂ ಆತ ಮಾತ್ರ ಏನೂ ಮಾಡದೇ ಸುಮ್ಮನೆ ಕುಳಿತಿದ್ದ.

ಸಿಗರೇಟ್‌ ನೀಡದ ವ್ಯಕ್ತಿಗೆ ಭಿಕ್ಷುಕಿ ಹೊಡೆದ ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಮಹಿಳೆಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಆತ ಆಕೆಗೆ ಸಿಗರೇಟು ನೀಡಲಿಲ್ಲ ಎಂದು ಪೋಸ್ಟ್ ಮಾಡಿದವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಡಿಯೊದಲ್ಲಿ ಮಹಿಳೆಯನ್ನು ಅಗೌರವಿಸುವುದು ಅಥವಾ ಪ್ರಚೋದಿಸುವ ಉದ್ದೇಶವಿಲ್ಲ. ಹಾನಿಕಾರಕ ಅಭ್ಯಾಸವನ್ನು ತಪ್ಪಿಸುವುದೇ ಆತನ ಉದ್ದೇಶವಾಗಿತ್ತು ಎಂದು ಆ ವ್ಯಕ್ತಿ ಹೇಳಿದ್ದಾನೆ. ಮಹಿಳೆ ಅಷ್ಟೊಂದು ಬಾರಿ ಹೊಡೆದರೂ ವ್ಯಕ್ತಿ ಶಾಂತಚಿತ್ತದಲ್ಲಿ ಕುಳಿತಿರುವುದನ್ನು ಕಂಡು ನೆಟ್ಟಿಗರು ಆ ವ್ಯಕ್ತಿಯ ನಡವಳಿಕೆಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕ ನೆಟ್ಟಿಗರು ಅವನ ತಾಳ್ಮೆ ಮತ್ತು ಸಂಯಮವನ್ನು ಕಂಡು ಹೊಗಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕುಡಿದ ಮತ್ತಿನಲ್ಲಿ ಮಹಿಳೆ ಬಳಿ ಅನುಚಿತವಾಗಿ ವರ್ತಿಸಿದ ವ್ಯಕ್ತಿ; ಕೃತ್ಯ ವಿಡಿಯೊದಲ್ಲಿ ಸೆರೆ

ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ ಭಿಕ್ಷುಕ

ಭಿಕ್ಷುಕರು ಈ ರೀತಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ 21 ವರ್ಷದ ವಿದ್ಯಾರ್ಥಿನಿಯ ಮೇಲೆ ಭಿಕ್ಷುಕನೊಬ್ಬ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಪರಿಣಾಮ ಆಕೆ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನೆರೂಲ್‍ನ ಬಸ್ ನಿಲ್ದಾಣದಲ್ಲಿ ನಡೆದಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮತ್ತು ಸ್ಥಳೀಯ ಜನರ ಸಹಾಯದಿಂದ, ಆರೋಪಿಯನ್ನು ಸೀವುಡ್ಸ್‌ನ ಫುಟ್‌ಪಾತ್‌ನಲ್ಲಿ ಪತ್ತೆಹಚ್ಚಲಾಯಿತು. ಹಲ್ಲೆಗೊಳಗಾದ ವಿದ್ಯಾರ್ಥಿನಿಯನ್ನು ಐರೋಲಿಯ ನಿಶಾ ಕುಂಬಾರ್ ಎಂದು ಗುರುತಿಸಲಾಗಿದ್ದು, ಈಕೆ ಮೂರನೇ ವರ್ಷದ ಬ್ಯಾಚುಲರ್ ಆಫ್ ಅಕೌಂಟಿಂಗ್ ಮತ್ತು ಫೈನಾನ್ಸ್ ಕೋರ್ಸ್ ಓದುತ್ತಿದ್ದಳು.