Viral Video: ಬೆಂಗಳೂರನ್ನು ಐಜ್ವಾಲ್‌ನೊಂದಿಗೆ ಹೋಲಿಸಿದ ವಿದೇಶಿ ಕಂಟೆಂಟ್ ಕ್ರಿಯೇಟರ್; ಕಾರಣವೇನು?
ಪ್ರಸ್ತುತ ಮಿಜೋರಾಮ್‌ನ ಐಜ್ವಾಲ್‌ನಲ್ಲಿ ವಾಸಿಸುವ ಕೆನಡಾದ ಕಂಟೆಂಟ್ ಕ್ರಿಯೇಟರ್ ಕ್ಯಾಲೆಬ್ ಫ್ರೈಸೆನ್ ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಹೆಚ್ಚು ಹಾರ್ನ್ ಮಾಡುವ ಅವ್ಯವಸ್ಥೆಯನ್ನು ಐಜ್ವಾಲ್ ನಗರಕ್ಕೆ ಹೋಲಿಕೆ ಮಾಡಿ ವಿಡಿಯೊ ಪೋಸ್ಟ್ ಮಾಡಿದ್ದಾನೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಬೆಂಗಳೂರು: ಈಗಾಗಲೇ ಅತಿಯಾದ ಟ್ರಾಫಿಕ್ ಜಾಮ್‌ಗೆ ಕುಖ್ಯಾತವಾಗಿರುವ ಬೆಂಗಳೂರು ಈಗ ಮತ್ತೊಂದು ಸಮಸ್ಯೆಯನ್ನು ಎದುರಿಸುತ್ತಿದೆ. ಅದೇನೆಂದರೆ ಶಬ್ದ ಮಾಲಿನ್ಯ. ಹೌದು, ಬೆಂಗಳೂರು ಈಗ ಶಬ್ದ ಮಾಲಿನ್ಯ ವಿಚಾರಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದೆ. ಪ್ರಸ್ತುತ ಮಿಜೋರಾಮ್‌ನ ಐಜ್ವಾಲ್‌ನಲ್ಲಿ ವಾಸಿಸುವ ಕೆನಡಾದ ಕಂಟೆಂಟ್ ಕ್ರಿಯೇಟರ್ ಕ್ಯಾಲೆಬ್ ಫ್ರೈಸೆನ್ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ನಗರದಲ್ಲಿ ಹೆಚ್ಚು ಹಾರ್ನ್ ಮಾಡುವ ಅವ್ಯವಸ್ಥೆಯನ್ನು ಐಜ್ವಾಲ್ ನಗರಕ್ಕೆ ಹೋಲಿಕೆ ಮಾಡಿ ಅದನ್ನು ಎತ್ತಿ ತೋರಿಸಿದ್ದಾನೆ. ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಬೆಂಗಳೂರಿನ ಗದ್ದಲದ ರಸ್ತೆಗಳು ಮತ್ತು ಐಜ್ವಾಲ್‌ನ ಸೈಲೆಂಟ್ ಆಗಿರುವ ರಸ್ತೆಗಳ ನಡುವಿನ ವ್ಯತ್ಯಾಸವನ್ನು ತೋರಿಸಲು ಫ್ರೈಸೆನ್ ಪ್ರತಿ ನಗರದಿಂದ ಒಂದರಂತೆ ಎರಡು ವಿಡಿಯೊಗಳನ್ನು ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾನೆ. ಮೊದಲನೆಯದರಲ್ಲಿ ಸಂಜೆ 7 ಗಂಟೆಯ ಸುಮಾರಿಗೆ ಬೆಂಗಳೂರಿನ ಪಾದಚಾರಿ ಸೇತುವೆಯಿಂದ ರೆಕಾರ್ಡ್ ಮಾಡಲಾಗಿದ್ದು, ಅದರಲ್ಲಿ ವಾಹನಗಳು ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಚಲಿಸುವಾಗ ಜೋರಾಗಿ ಹಾರ್ನ್ ಮಾಡುತ್ತಿರುವುದು ಕಂಡು ಬಂದಿದೆ. ಅದೇ ಸಮಯದಲ್ಲಿ ಐಜ್ವಾಲ್‌ನ ಜನನಿಬಿಡ ರಸ್ತೆಯಲ್ಲಿ ವಾಹನಗಳು ದಟ್ಟವಾಗಿ ಚಲಿಸುತ್ತಿದ್ದರೂ ಹಾರ್ನ್ ಸೌಂಡ್ ಕೇಳುತ್ತಿಲ್ಲ. ಏಕೆಂದರೆ ಈ ನಗರದಲ್ಲಿ ಹಾರ್ನ್ ಸದ್ದು ಮಾಡಬಾರದೆಂಬ ನೀತಿಯನ್ನು ಜಾರಿಗೆ ತರಲಾಗಿದೆ ಎಂಬುದಾಗಿ ಆತ ತಿಳಿಸಿದ್ದಾನೆ. ಒಂದುವೇಳೆ ಹಾರ್ನ್ ಮಾಡಿ ಶಾಂತಿಯನ್ನು ಕದಡುವ ಜನರಿಗೆ ಪೊಲೀಸರು ದಂಡ ವಿಧಿಸುತ್ತಾರೆ ಎಂದಿದ್ದಾನೆ. ಈ ವಿಡಿಯೊ ವೈರಲ್ ಆಗಿದ್ದು, ನಗರಗಳ ಶಿಸ್ತು ಮತ್ತು ಗದ್ದಲದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.
ವಿಡಿಯೊ ಇಲ್ಲಿದೆ ನೋಡಿ...
ವಿಡಿಯೊದಲ್ಲಿ ಆತ ಐಜ್ವಾಲ್‌ನ ರಸ್ತೆಗಳು ಹೆಚ್ಚಾಗಿ ಕಿರಿದಾದ ಮತ್ತು ಕಡಿದಾಗಿರುತ್ತವೆ. ಆದರೆ ನಿವಾಸಿಗಳು ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಓವರ್‌ಟೇಕ್ ಮಾಡುವುದನ್ನು ತಪ್ಪಿಸುತ್ತಾರೆ ಮತ್ತು ಹಾರ್ನ್ ಮಾಡುವುದನ್ನು ತಡೆಯುತ್ತಾರೆ ಎಂದು ಫ್ರೈಸೆನ್ ತಿಳಿಸಿದ್ದಾನೆ. ಹಾರ್ನ್ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ - ಅದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಐಜ್ವಾಲ್‍ನ ಜನರು ಅರ್ಥಮಾಡಿಕೊಳ್ಳುತ್ತಾರೆ. ಭಾರತದ ಉಳಿದ ಭಾಗವೂ ಸಹ ಇದನ್ನು ಅರ್ಥಮಾಡಿಕೊಳ್ಳುವ ಸಮಯ ಬಂದಿದೆ ಎಂದು ಆತ ಹೇಳಿದ್ದಾನೆ.
ಒಂದೇ ಲೇನ್‌ನಲ್ಲಿ ಎರಡು ಕಾರುಗಳು ಏಕಕಾಲದಲ್ಲಿ ಹಾದುಹೋಗಲು ಅವಕಾಶ ನೀಡದ ಕಿರಿದಾದ, ಕಡಿದಾದ ರಸ್ತೆಗಳಿದ್ದರೂ ಐಜ್ವಾಲ್ ಜನರು ಸಂಚಾರ ಶಿಸ್ತನ್ನು ಹೇಗೆ ಕಾಯ್ದುಕೊಳ್ಳುತ್ತಾರೆ ಎಂಬುದನ್ನು ಫ್ರೈಸೆನ್ ಮತ್ತಷ್ಟು ಒತ್ತಿ ಹೇಳಿದ್ದಾನೆ. ಅವನ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ನಂತರ, ಅನೇಕರು ಅವನ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಅವರಲ್ಲಿ ಒಬ್ಬರು, "ಬೆಂಗಳೂರಿನಲ್ಲಿ ಕಾರಿನ ಹಿಂಭಾಗವನ್ನು ನೋಡಿ 'ನಿಮ್ಮ ಹಾರ್ನ್ ಕೆಲಸ ಮಾಡುತ್ತದೆ, ಈಗ ನಿಮ್ಮ ಮೆದುಳನ್ನು ಬಳಸಿ' ಎಂದು ಹೇಳುತ್ತಿದ್ದಾರೆ" ಎಂದು ಹಂಚಿಕೊಂಡಿದ್ದಾರೆ. "ಭಾರತದ ಯಾವುದೇ ಭಾಗಕ್ಕೆ ಹೋಲಿಸಿದರೆ ಈಶಾನ್ಯ ರಾಜ್ಯಗಳ ಜನರು ಉತ್ತಮವಾಗಿದ್ದಾರೆ" ಎಂದು ಮತ್ತೊಬ್ಬರು ಒಪ್ಪಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕಿಟಿಕಿಯ ಮೂಲಕ ಬಸ್ ಹತ್ತಲು ಪ್ರಯತ್ನಿಸಿ ನಗೆಪಾಟಲಿಗೀಡಾದ ವ್ಯಕ್ತಿ; ವಿಡಿಯೊ ನೋಡಿದ್ರೆ ನೀವೂ ಬಿದ್ದು ಬಿದ್ದು ನಗ್ತೀರಿ!
ಕೆಲವು ನೆಟ್ಟಿಗರು ಮೆಟ್ರೋ ನಗರ ಬೆಂಗಳೂರನ್ನು ಐಜ್ವಾಲ್‌ನೊಂದಿಗೆ ಹೋಲಿಸುವ ಕಲ್ಪನೆಯನ್ನು ಇಷ್ಟಪಡಲಿಲ್ಲ. ಫ್ರೈಸೆನ್ ವಿಡಿಯೊ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ 6 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು ಸುಮಾರು 40,000 ಲೈಕ್‌ಗಳನ್ನು ಗಳಿಸಿದೆ.