ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

1BHK ಮನೆಗೆ ಬೆಂಗಳೂರಿನಲ್ಲಿ 45,000 ರೂ ಬಾಡಿಗೆ! ಟೆಕ್ಕಿ ಹಂಚಿಕೊಂಡ ವಿಶೇಷತೆ ಏನು?

Viral News: ಸಿಲಿಕಾನ್ ಸಿಟಿಯ ಗಗನಕ್ಕೇರುತ್ತಿರುವ ಮನೆ ಬಾಡಿಗೆ ಬಗ್ಗೆ ಹೆಚ್ಚಿನ ಜನರು ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ. ದುಡಿಯುವ ವರ್ಗಕ್ಕೆ ಇಲ್ಲಿ ಬಾಡಿಗೆ ಹಣ ಪಾವತಿಸುವುದೇ ಒಂದು ತಲೆ ನೋವಾಗಿ ಬಿಟ್ಟಿದೆ. ಉದ್ಯೋಗಿಗಳ ನೆಚ್ಚಿನ ತಾಣ ಹಾಗೂ ಕಚೇರಿಗಳಿಗೆ ಸುಲಭ ಮಾರ್ಗವಾದ ಎಚ್‌ಎಸ್‌ಆರ್ ಲೇಔಟ್ ನಲ್ಲೂ ಬಾಡಿಗೆ ದರ ದುಪ್ಪಟ್ಟು ಆಗಿದೆ ಎಂದು ಕೆಲವರು ದೂರಿದ್ದಾರೆ...

ಇಂಟರ್ ನೆಟ್ ಚಿತ್ರ

ಬೆಂಗಳೂರು, ಜೂ.4: ಸಿಲಿಕಾನ್ ಸಿಟಿಯಲ್ಲಿ ಇಂದು ಮಧ್ಯಮ ವರ್ಗದ ಜನರು ಬದುಕು ಕಟ್ಟಿಕೊಳ್ಳುವುದು ದೊಡ್ಡ ಸಾಹಸವೇ ಸರಿ..ಇಲ್ಲಿನ ಜೀವನ ಶೈಲಿ ದಿನದಿಂದ ದಿನಕ್ಕೆ ದುಬಾರಿ ಯಾಗುತ್ತಿದ್ದು ದುಡಿದ ಅರ್ಧದಷ್ಟು ಮೊತ್ತ ಜೀವನ ನಿರ್ವಹಣೆಗೆ ಮೀಸಲಿಡುವಂತೆ ಆಗಿದೆ. ಅದರಲ್ಲೂ ಅಲ್ಲಿನ ಬಾಡಿಗೆ ದರ ದುಪ್ಪಟ್ಟು ಆಗಿದೆ. ಇದೀಗ ಬೆಂಗಳೂರು ಮೂಲದ ಉದ್ಯೋಗಿ ಯೊಬ್ಬರು 1BHK ಗೆ 45,000 ರೂ. ಬಾಡಿಗೆ ಪಾವತಿಸಿದ ನಂತರ HSR ಲೇಔಟ್ ತೊರೆಯಲು ನಿರ್ಧಾರ ಮಾಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ.

ಸಿಲಿಕಾನ್ ಸಿಟಿಯ ಗಗನಕ್ಕೇರುತ್ತಿರುವ ಮನೆ ಬಾಡಿಗೆ ಬಗ್ಗೆ ಹೆಚ್ಚಿನ ಜನರು ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ. ದುಡಿಯುವ ವರ್ಗಕ್ಕೆ ಇಲ್ಲಿ ಬಾಡಿಗೆ ಹಣ ಪಾವತಿಸುವುದೇ ಒಂದು ತಲೆ ನೋವಾಗಿ ಬಿಟ್ಟಿದೆ. ಉದ್ಯೋಗಿಗಳ ನೆಚ್ಚಿನ ತಾಣ ಹಾಗೂ ಕಚೇರಿಗಳಿಗೆ ಸುಲಭ ಮಾರ್ಗವಾದ ಎಚ್‌ಎಸ್‌ಆರ್ ಲೇಔಟ್ ನಲ್ಲೂ ಬಾಡಿಗೆ ದರ ದುಪ್ಪಟ್ಟು ಆಗಿದೆ ಎಂದು ಕೆಲವರು ದೂರಿದ್ದಾರೆ.

ಬೆಂಗಳೂರು ಮೂಲದ ಪೇಪಾಲ್ ಉದ್ಯೋಗಿಯೊಬ್ಬರು ಬೆಂಗಳೂರು ಬಾಡಿಗೆ ದರದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. "ಗುಡ್‌ಬೈ ಎಚ್‌ಎಸ್‌ಆರ್ ಲೇಔಟ್! 1BHK ಮನೆಗೆ 45 ಸಾವಿರ ಬಾಡಿಗೆ ನೀಡುವುದು ಸಂಪೂರ್ಣವಾಗಿ ಹುಚ್ಚು" ಎಂಬ ಶೀರ್ಷಿಕೆ ಮೂಲಕ ಈ ಪೋಸ್ಟ್ ಶೇರ್ ಮಾಡಿದ್ದಾರೆ. ತಮ್ಮ ವಾರ್ಷಿಕ 24 ಲಕ್ಷ ರೂಪಾಯಿ ಆದಾಯಕ್ಕೂ ಈ ಬಾಡಿಗೆ ಹೊರೆಯಾಗುತ್ತಿರುವುದನ್ನು ವಿವರಿಸಿದ್ದಾರೆ.

Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ನಾನು ಅಂತಿಮವಾಗಿ ಎಚ್‌ಎಸ್‌ಆರ್ ಅನ್ನು ಖಾಲಿ ಮಾಡುತ್ತಿದ್ದೇನೆ ಎಂದು ಘೋಷಿಸಲು ನನಗೆ ಇಂದು ತುಂಬಾ ನಿರಾಳವಾಗಿದೆ. ಇದು ನನ್ನ ಹೆಗಲ ಮೇಲಿನ ದೊಡ್ಡ ಭಾರವನ್ನು ಇಳಿಸಿದಂತೆ ಭಾಸವಾಗುತ್ತದೆ. ಈ ನಿರ್ಧಾರದಿಂದ ನನಗೆ ನಿಜಕ್ಕೂ ಸಂತೋಷವಾಗಿದೆ ಎಂದು ಅವರು ಬರೆದು ಕೊಂಡಿದ್ದಾರೆ. ಆರಂಭದಲ್ಲಿ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಅದೇ ಪ್ರದೇಶದಲ್ಲಿದ್ದಾರೆ ಎಂಬ ಕಾರಣಕ್ಕೆ ಹಾಗೂ ಸಾಮಾಜಿಕ ಒತ್ತಡಕ್ಕೆ ಮಣಿದು ಇಲ್ಲಿ ಇದ್ದೆ. ಹಲವಾರು ಅಪಾರ್ಟ್‌ ಮೆಂಟ್‌ಗಳಿಗೆ ಭೇಟಿ ನೀಡಿದ ನಂತರ, HSR ಲೇಔಟ್‌ನ ಹೊರಗೆ ಉತ್ತಮ ಮತ್ತು ಹೆಚ್ಚು ಕೈಗೆಟುಕುವ ಆಯ್ಕೆಗಳಿವೆ ಎಂದು ಅವರು ಸಲಹೆ ನೀಡಿದ್ದಾರೆ.