ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮದುವೆ ಮೆರವಣಿಗೆ ವೇಳೆ ಸಂಗೀತ ನುಡಿಸಿದ್ದಕ್ಕೆ ದಲಿತ ವರನ ಮೇಲೆ ಹಲ್ಲೆ

ಉತ್ತರ ಪ್ರದೇಶದ ಆಗ್ರಾದಲ್ಲಿ ದಲಿತ ವರನೊಬ್ಬನ ಮದುವೆ ಮೆರವಣಿಗೆಯಲ್ಲಿ ಜೋರಾಗಿ ಸಂಗೀತ ನುಡಿಸಿ ತಮ್ಮ ಮನೆಗಳ ಮುಂದೆ ಹಾದುಹೋಗಿದ್ದಕ್ಕಾಗಿ ಮೇಲೆ ಮೇಲ್ಜಾತಿಯ ಕೆಲವು ಸದಸ್ಯರು ವರನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಮದುವೆ ಮೆರವಣಿಗೆ ವೇಳೆ ವರನ ಮೇಲೆ ಭೀಕರ ಹಲ್ಲೆ; ಕಾರಣವೇನು?

Profile pavithra Apr 18, 2025 9:41 PM

ಲಖನೌ: ಇತ್ತೀಚೆಗೆ ಉತ್ತರ ಪ್ರದೇಶದ ಆಗ್ರಾದಲ್ಲಿ ಜಾತಿಗೆ ತಾರತಮ್ಯಕ್ಕೆ ಸಂಬಂಧಿಸಿದ ಘಟನೆ ನಡೆದಿದೆ. ದಲಿತ ವರನೊಬ್ಬನ ಮದುವೆ ಮೆರವಣಿಗೆಯಲ್ಲಿ ಜೋರಾಗಿ ಸಂಗೀತ ನುಡಿಸಿ ತಮ್ಮ ಮನೆಗಳ ಮುಂದೆ ಹಾದುಹೋಗಿದ್ದಕ್ಕಾಗಿ ಮೇಲ್ಜಾತಿಯ ಕೆಲವು ಸದಸ್ಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಇದೀಗ ವೈರಲ್‌ ಆಗಿದೆ. ವರದಿ ಪ್ರಕಾರ, ಈ
ಘಟನೆಯ ವೇಳೆ ಮೇಲ್ಜಾತಿಯ ಕೆಲವು ಜನರು 22 ವರ್ಷದ ವರ ರೋಹಿತ್ ಕುಮಾರ್‌ನನ್ನು ಕುದುರೆಯಿಂದ ಎಳೆದೊಯ್ದು, ನಿಂದಿಸಿ, ಥಳಿಸಿ, ಆತನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಕೋಲುಗಳು ಮತ್ತು ಚೂಪಾದ ವಸ್ತುಗಳೊಂದಿಗೆ ವರನ ಮನೆಗೆ ನುಗ್ಗಿದ್ದಾರೆ. ಇದರಿಂದ ಮನೆಯವರು ಸೇರಿದಂತೆ ಅತಿಥಿಗಳು ಭಯಭೀತರಾಗಿದ್ದಾರೆ. ಈ ಹಿಂಸಾಚಾರದಲ್ಲಿ ಕೆಲವು ಅತಿಥಿಗಳು ಗಾಯಗೊಂಡಿದ್ದಾರೆ ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಈ ಬಗ್ಗೆ ತನಿಖೆ ನಡೆಸಿದ್ದಾರೆ. ಈವರೆಗೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗ್ರಾ ಜಿಲ್ಲೆಯ ಖಂಡೌಲಿ ಪ್ರದೇಶದ ಗರ್ಹಿ ರಾಮಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂಬುದಾಗಿ ತಿಳಿದುಬಂದಿದೆ.

ಬಿಎನ್ಎಸ್ ಸೆಕ್ಷನ್ 191-3 (ಶಸ್ತ್ರಾಸ್ತ್ರಗಳೊಂದಿಗೆ ಗಲಭೆ), 190 (ಕಾನೂನುಬಾಹಿರ ಸಭೆ), 115-1 (ನೋವನ್ನುಂಟುಮಾಡುವುದು), 127 (ತಪ್ಪಾಗಿ ಬಂಧಿಸುವುದು), 74 (ಮಹಿಳೆಗೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 352 (ಉದ್ದೇಶಪೂರ್ವಕ ಅವಮಾನ), ಜೊತೆಗೆ ಎಸ್‌ಸಿ / ಎಸ್‌ಟಿ ಕಾಯ್ದೆಯಡಿ ಅಜಿತ್ ತೋಮರ್, ಅಜಯ್ ತೋಮರ್, ಸೌರಭ್ ತೋಮರ್ ಮತ್ತು ಪ್ರದೀಪ್ ತೋಮರ್ ಮತ್ತು ಅವರ ಸಹಾಯಕರು ಮತ್ತು ಅವರ ಸಹಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ವಿದ್ಯಾರ್ಥಿಗಳ ಕೈಗೆ ಪೊರಕೆ ಕೊಟ್ಟು ಟೀಚರ್ಸ್‌ ಭರ್ಜರಿ ಡ್ಯಾನ್ಸ್‌- ಏನಿದು ವೈರಲ್‌ ವಿಡಿಯೊ?

ಮಾರ್ಚ್ 11ರಂದು ಅದೇ ಗ್ರಾಮದಲ್ಲಿ ಇದೇ ರೀತಿಯ ಘಟನೆ ನಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇಲ್ಲಿಯೂ ದಲಿತ ವಿವಾಹ ಮೆರವಣಿಗೆಯ ಮೇಲೆ ಕೆಲವು ಮೇಲ್ಜಾತಿಯ ಪುರುಷರು ದಾಳಿ ನಡೆಸಿದ್ದಾರೆ. 22 ವರ್ಷದ ವರನನ್ನು ಕುದುರೆಯಿಂದ ಬಂದೂಕು ತೋರಿಸಿ ಎಳೆದ ಆರೋಪದ ಮೇಲೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.