ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿದ್ಯಾರ್ಥಿಗಳ ಕೈಗೆ ಪೊರಕೆ ಕೊಟ್ಟು ಟೀಚರ್ಸ್‌ ಭರ್ಜರಿ ಡ್ಯಾನ್ಸ್‌- ಏನಿದು ವೈರಲ್‌ ವಿಡಿಯೊ?

ಉತ್ತರ ಪ್ರದೇಶದ ಮೀರತ್‍ನ ಕೃಷ್ಣಪುರಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನೆಲ ಗುಡಿಸುವಾಗ ಮತ್ತು ಕಾರ್ಪೆಟ್‍ಗಳನ್ನು ತೊಳೆಯುವಾಗ ಶಿಕ್ಷಕರ ಗುಂಪು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಮತ್ತೊಂದು ವಿಡಿಯೊದಲ್ಲಿ ಶಿಕ್ಷಕಿ ಕ್ಲಾಸ್‍ನಲ್ಲಿ ನಿದ್ರೆ ಮಾಡಿದ್ದಾಳೆ. ಈ ವಿಡಿಯೊಗಳು ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ವಿದ್ಯಾರ್ಥಿಗಳ ಕೈಗೆ ಪೊರಕೆ ಕೊಟ್ಟು ಶಿಕ್ಷಕರು ಹೀಗಾ ಮಾಡೋದು?

Profile pavithra Apr 18, 2025 4:26 PM

ಲಖನೌ: ಈಗಂತೂ ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸುತ್ತಾರೆ. ಶಾಲೆ ಮಗುವಿನ ಭವಿಷ್ಯವನ್ನು ರೂಪಿಸುತ್ತದೆ. ಹಾಗೇ ಗುರು ಮಗುವಿನ ಬದುಕಿಗೊಂದು ದಾರಿ ತೋರಿಸುತ್ತಾನೆ ಎಂಬ ನಂಬಿಕೆ ಇದೆ. ಇತ್ತೀಚೆಗೆ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸೇರಿಸಕೊಂಡು ಕೇಕ್‌ ಕತ್ತರಿಸಿ ಆಲ್ಕೋಹಾಲ್‌ ಸೇವಿಸಿದ ಘಟನೆಯೊಂದು ವೈರಲ್‌ ಆಗಿತ್ತು. ಇದೀಗ ಉತ್ತರ ಪ್ರದೇಶದ ಮೀರತ್‍ನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರು ಕಲಿಯಲು ಬಂದ ವಿದ್ಯಾರ್ಥಿಗಳ ಹತ್ತಿರ ನೆಲ ಗುಡಿಸುವುದಕ್ಕೆ ಹಾಗೂ ಕಾರ್ಪೆಟ್‍ಗಳನ್ನು ತೊಳೆಯಲು ಹೇಳಿ ಅವರು ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ವೈರಲ್ ಆದ ವಿಡಿಯೊದಲ್ಲಿ 90 ರ ದಶಕದ ಜನಪ್ರಿಯ ಹಾಡಿಗೆ ಶಿಕ್ಷಕರು ಡ್ಯಾನ್ಸ್ ಮಾಡುವುದು ರೆಕಾರ್ಡ್ ಆಗಿದೆ. ಅದು ಅಲ್ಲದೇ, ಶಿಕ್ಷಕರೊಬ್ಬರು ಏಕವ್ಯಕ್ತಿ ಪ್ರದರ್ಶನವನ್ನು ಕೂಡ ನೀಡಿದ್ದಾರೆ.

ಶಿಕ್ಷಕರ ಗುಂಪು ವಿದ್ಯಾರ್ಥಿಗಳೊಂದಿಗೆ ಧೋಲ್ ಜಾಗೀರೋ ದಾಗೆ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇತ್ತ ವಿದ್ಯಾರ್ಥಿಗಳು ಕ್ಲಾಸ್‍ಗೆ ಹಾಜರಾಗುವ ಬದಲು ನೆಲ ಗುಡಿಸಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ನೆಲವನ್ನು ಗುಡಿಸಲು, ಕಾರ್ಪೆಟ್‍ಗಳನ್ನು ತೊಳೆಯಲು ಮತ್ತು ಬೋರ್ಡ್‌ ಸ್ವಚ್ಛಗೊಳಿಸಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ಈ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು, ಇದೇ ಶಾಲೆಯಲ್ಲಿ ತರಗತಿಯ ಸಮಯದಲ್ಲಿ ಶಿಕ್ಷಕಿಯೊಬ್ಬರು ಮಲಗಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ, ಶಿಕ್ಷಕರು ಕುರ್ಚಿಯಲ್ಲಿ ಕುಳಿತು ಗಾಢ ನಿದ್ರೆಯಲ್ಲಿದ್ದರೆ, ವಿದ್ಯಾರ್ಥಿಗಳು ತರಗತಿಯೊಳಗೆ ಕುಳಿತಿದ್ದಾರೆ. 21 ಸೆಕೆಂಡುಗಳ ಈ ವಿಡಿಯೊವನ್ನು ವಿದ್ಯಾರ್ಥಿಯೊಬ್ಬ ಚಿತ್ರೀಕರಿಸಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅನೇಕರು ಶಿಕ್ಷಕಿಯ ಈ ಕ್ರಮವನ್ನು ಖಂಡಿಸಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣದೊಂದಿಗೆ ರಾಜಿ ಮಾಡಿಕೊಂಡಿದ್ದಕ್ಕಾಗಿ ಅವರನ್ನು ಬೇಜವಾಬ್ದಾರಿಯುತ ಶಿಕ್ಷಕರು ಎಂದು ಅನೇಕರು ಕರೆದಿದ್ದಾರೆ.

ಇನ್ನು ಕೆಲವರು ಬಹುಶಃ ಶಿಕ್ಷಕಿಗೆ ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಬರಲಿಲ್ಲ, ಅದಕ್ಕಾಗಿಯೇ ಅವಳು ಶಾಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಇಂದಿನ ಸರ್ಕಾರಿ ಶಾಲೆಗಳಲ್ಲಿ, ಶಿಕ್ಷಕರಿಗೆ ಇದು ಸುಲಭವಾದ ಕೆಲಸವಾಗಿದೆ. ವಿದ್ಯಾರ್ಥಿಗಳು ಇಲ್ಲ, ಆದ್ದರಿಂದ ಅವರು ಹೇಗಾದರೂ ಸಮಯವನ್ನು ಕಳೆಯಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ " ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಶಿಕ್ಷಕಿಯ ಬಗ್ಗೆ ಸಹಾನುಭೂತಿ ಹೊಂದಿದ್ದು,"ಸರಿ, ಅವಳು ಸಹ ಮನುಷ್ಯಳು. ಬಹುಶಃ ಶಿಕ್ಷಕಿ ರಾತ್ರಿ ತಡವಾಗಿ ಮಲಗಿದ್ದಾಳೆ ಮತ್ತು ಬೆಳಿಗ್ಗೆ ಬೇಗ ಎದ್ದು ಮನೆಕೆಲಸಗಳನ್ನು ಮಾಡಿದ್ದಾಳೆ” ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral video: ಬೆಂಗಳೂರಿನ ನಡುರಸ್ತೆಯಲ್ಲಿ ಕುಳಿತು ಟೀ ಕುಡಿಯುತ್ತ ರೀಲ್ಸ್ ಮಾಡಿದವನು ಪೊಲೀಸರಿಂದ ಲಾಕ್‌
ಶಿಕ್ಷಣ ಅಧಿಕಾರಿ (ಬಿಎಸ್ಎ) ಆಶಾ ಚೌಧರಿ ಈ ವಿಷಯದ ಬಗ್ಗೆ ಗಮನಿಸಿ ಶಿಕ್ಷಕರ ವಿರುದ್ಧ ವಿಚಾರಣೆಯನ್ನು ಶುರುಮಾಡಲಾಗಿದೆ ಎಂದು ತಿಳಿಸಿದ್ದಾರೆ.