ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಯಸ್ಸಾಯ್ತು ಬಿಟ್‌ ಬಿಡಮ್ಮ ಅಂದ್ರೂ ಬಿಡಲಿಲ್ಲ ಈ ಮಹಾತಾಯಿ! ಈಕೆ ಮಾಡಿದ ಕೃತ್ಯ ಏನ್‌ ಗೊತ್ತಾ?

Woman Assaults Elderly Man in Public: ಸಾರ್ವಜನಿಕ ಸ್ಥಳದಲ್ಲಿ ನಡೆದ ವಿಚಿತ್ರ ಘಟನೆಯಲ್ಲಿ, ಒಬ್ಬ ಮಹಿಳೆ ವೃದ್ಧ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದಲ್ಲದೆ, ಮೈಮೇಲೆ ಎಣ್ಣೆ ಸುರಿದಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಮಹಿಳೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

ವೃದ್ಧನ ಮೇಲೆ ಎಣ್ಣೆ ಎರಚಿ ಹಲ್ಲೆ ನಡೆಸಿದ ಮಹಿಳೆ

ಶಿಮ್ಲಾ: ಸರ್ಕಾರಿ ಕಚೇರಿಯ ಮುಂದೆ ಮಹಿಳೆಯೊಬ್ಬರು ವೃದ್ಧ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಹಿಮಾಚಲ ಪ್ರದೇಶದ (Himachal Pradesh) ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ. ಆಕೆ ಆತನ ಮೇಲೆ ಎಣ್ಣೆ ಸುರಿದು ಕುತ್ತಿಗೆಗೆ ಶೂಗಳ ಹಾರ ಹಾಕಲು ಪ್ರಯತ್ನಿಸಿದ್ದಾಳೆ. ಈ ವೇಳೆ ಜನರು ದೃಶ್ಯವನ್ನು ವೀಕ್ಷಿಸುತ್ತಾ ನಿಂತಿದ್ದಾರೆ. ಅಂತಿಮವಾಗಿ ಪೊಲೀಸರು ಮಧ್ಯಪ್ರವೇಶಿಸಲು ಬಂದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ವರದಿಯ ಪ್ರಕಾರ, ರಕ್ಕರ್ ತಹಸಿಲ್‌ನಲ್ಲಿರುವ ಬಂಡಾ ಗ್ರಾಮದ ದೇಶಬಂದು ಎಂದು ಗುರುತಿಸಲ್ಪಟ್ಟ ಆ ವ್ಯಕ್ತಿ, ಪ್ರಕರಣವೊಂದಕ್ಕೆ ಸಂಬಂಧಿಸಿದ ನ್ಯಾಯಾಲಯದ ವಿಚಾರಣೆಗಾಗಿ ಡೆಹ್ರಾದಲ್ಲಿರುವ ಉಪವಿಭಾಗೀಯ ಕಚೇರಿಗೆ ಬಂದಿದ್ದರು. ಮಂಡಿ ಜಿಲ್ಲೆಯ ದೋಭಾ ಗ್ರಾಮದ ಆಶಾ ದೇವಿ ಎಂದು ಗುರುತಿಸಲ್ಪಟ್ಟ ಮಹಿಳೆ ಅನಿರೀಕ್ಷಿತವಾಗಿ ವೃದ್ಧನ ಮುಂದೆ ಬಂದು ವಾಗ್ವಾದ ಪ್ರಾರಂಭಿಸಿದ್ದಾಳೆ. ಈ ವೇಳೆ ಅದು ಹಿಂಸಾತ್ಮಕ ಘಟನೆಗೆ ಕಾರಣವಾಯಿತು.

ಇದನ್ನೂ ಓದಿ: Crime News: ರ‍್ಯಾಗಿಂಗ್‌ಗೆ ಬೇಸತ್ತು ಬಾಲಕಿ ನಾಲ್ಕನೇ ಮಹಡಿಯಿಂದ ಹಾರಿದ್ಳಾ? ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌!

ವರದಿಯ ಪ್ರಕಾರ, ಆಶಾ ದೇವಿ ಇದ್ದಕ್ಕಿದ್ದಂತೆ ದೇಶಬಂದು ಮೇಲೆ ಎಣ್ಣೆ ತುಂಬಿದ ಪಾತ್ರೆಯನ್ನು ಎರಚಿದ್ದಾರೆ. ಇದರಿಂದ ತಲೆ, ಬಟ್ಟೆ ತುಂಬೆಲ್ಲಾ ಎಣ್ಣೆಯುಕ್ತವಾಗಿದೆ. ನಂತರ ಆಶಾದೇವಿ ಅವರ ಮೇಲೆ ಶೂಗಳ ಹಾರವನ್ನು ಹಾಕಲು ಪ್ರಯತ್ನಿಸಿದರು. ಅಲ್ಲದೆ ಹಲವು ಬಾರಿ ಕಪಾಳಮೋಕ್ಷ ಮಾಡಿದರು ಎಂದು ವರದಿಯಾಗಿದೆ. ಈ ಗದ್ದಲವು ಜನಸಮೂಹದಲ್ಲಿ ಭೀತಿಯನ್ನು ಉಂಟುಮಾಡಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು, ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಆಕೆಯನ್ನು ವಶಕ್ಕೆ ಪಡೆದರು.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಘಟನೆಯ ವಿಡಿಯೊ, ದಾಳಿಯ ಸಂಪೂರ್ಣ ತೀವ್ರತೆಯನ್ನು ತೋರಿಸುತ್ತದೆ. ದೃಶ್ಯಾವಳಿಯಲ್ಲಿ, ಆಶಾದೇವಿಯು ದೇಶಬಂಧು ಅವರ ಕಾಲರ್ ಪಟ್ಟಿ ಹಿಡಿದು ಬಿಡಲು ನಿರಾಕರಿಸುತ್ತಿರುವುದನ್ನು ಕಾಣಬಹುದು. ಆದರೆ, ಪೊಲೀಸ್ ಅಧಿಕಾರಿ ಮತ್ತು ಪಕ್ಕದಲ್ಲಿದ್ದವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು.

ವಿಡಿಯೊ ವೀಕ್ಷಿಸಿ:



ವಿಡಿಯೊದಲ್ಲಿ ದೇಶಬಂಧು ಎಣ್ಣೆಯಲ್ಲಿ ಮುಳುಗಿದಂತೆ ಕಾಣುತ್ತಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆ ಬಳಿ ಅವರನ್ನು ಬಿಟ್ಟುಬಿಡುವಂತೆ ಒತ್ತಾಯಿಸುತ್ತಿದ್ದರೂ, ಆ ಮಹಿಳೆ ಮಾತ್ರ ತನ್ನ ಪಟ್ಟು ಬಿಡಲಿಲ್ಲ. ಒಂದು ಹಂತದಲ್ಲಿ, ಅಧಿಕಾರಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ ಅವಳು ವೃದ್ಧನಿಗೆ ಕಪಾಳಮೋಕ್ಷ ಮಾಡಿದ್ದಾಳೆ.

ಈ ವಿಡಿಯೊಗೆ ಪ್ರತಿಕ್ರಿಯಿಸದ ಸಾಮಾಜಿಕ ಮಾಧ್ಯಮ ಬಳಕೆದಾರರು, ದಾಳಿಯ ಬಗ್ಗೆ ಆಘಾತ ಮತ್ತು ಕೋಪವನ್ನು ವ್ಯಕ್ತಪಡಿಸಿದರು. ಸಮಸ್ಯೆ ಏನೇ ಇರಲಿ, ಈ ಮಹಿಳೆಗೆ ವೃದ್ಧನ ಮೇಲೆ ದಾಳಿ ಮಾಡುವ ಹಕ್ಕನ್ನು ಯಾರು ನೀಡಿದರು? ಒಂದು ವೇಳೆ ಆತನ ಸ್ಥಾನದಲ್ಲಿ ಮಹಿಳೆ ಇದ್ದಿದ್ದರೆ ಏನಾಗುತ್ತಿತ್ತು? ಅದು ರಾಷ್ಟ್ರಮಟ್ಟದಲ್ಲೇ ಸುದ್ದಿ ಮಾಡುತ್ತಿತ್ತು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಈ ದಾಳಿ ಹಳೆಯ ವಿವಾದದಿಂದ ಉಂಟಾಗಿದೆ ಎಂದು ತಿಳಿದುಬಂದಿದೆ. ರಕ್ಕರ್ ತಹಸಿಲ್‌ನಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೇಶಬಂಧು ಡೆಪ್ಯುಟಿ ಕಮಿಷನರ್ ಕಾಂಗ್ರಾ ಅವರಿಗೆ ದೂರು ನೀಡಿದ್ದರು. ಸ್ಥಳೀಯ ಗ್ರಾಮದ ಮುಖ್ಯಸ್ಥರೊಬ್ಬರು ಮಹಿಳೆಯ ಗುರುತನ್ನು ತಿರುಚಿ ಸರ್ಕಾರಿ ಭೂಮಿಯನ್ನು ಅವರ ಹೆಸರಿನಲ್ಲಿ ನೋಂದಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ರಕ್ಕರ್ ತಹಸಿಲ್‌ನ ಚಮೇತಿ ಗ್ರಾಮದಲ್ಲಿರುವ ಪ್ರಶ್ನಾರ್ಹ ಭೂಮಿಯನ್ನು ಅಧಿಕೃತವಾಗಿ ರಾಮನಗರ ಗ್ರಾಮದ ರಾಮಕೃಷ್ಣ ಅವರ ವಿಧವೆ ಬಿಮ್ಲಾ ದೇವಿಯ ಮಗಳು ಆಶಾ ದೇವಿ ಎಂಬ ಮಹಿಳೆಗೆ ವರ್ಗಾಯಿಸಲಾಗಿದೆ. ಆದರೆ ವರದಿಯಲ್ಲಿ ಅಂತಹ ಯಾವುದೇ ಮಹಿಳೆ ಕುಟುಂಬದಲ್ಲಿ ಇಲ್ಲ ಎಂದು ಹೇಳಲಾಗಿದೆ. ದೇಶಬಂಧು ಅವರು ವಂಚನೆಯ ನೋಂದಣಿಯನ್ನು ವರದಿ ಮಾಡಲು ಮಾತ್ರ ಆಡಳಿತವನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಮಹಿಳೆಯು ಈ ರೀತಿ ಹಿಂಸಾತ್ಮಕವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ.