Crime News: ರ‍್ಯಾಗಿಂಗ್‌ಗೆ ಬೇಸತ್ತು ಬಾಲಕಿ ನಾಲ್ಕನೇ ಮಹಡಿಯಿಂದ ಹಾರಿದ್ಳಾ? ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್!
Jaipur school suicide: ಜೈಪುರದ ಶಾಲೆಯೊಂದರಲ್ಲಿ ನಡೆದ ಹೃದಯವಿದ್ರಾವಕ ಘಟನೆ ದೇಶದಾದ್ಯಂತ ಆತಂಕ ಮೂಡಿಸಿದೆ. 9 ವರ್ಷದ ಬಾಲಕಿಯೊಬ್ಬಳು ತನ್ನ ಶಾಲೆಯ ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾಳೆ. ಆಕೆಯು ಸಹಪಾಠಿಗಳಿಂದ ನಿರಂತರ ಹಿಂಸೆಗೆ ಒಳಗಾಗುತ್ತಿದ್ದಳು, ಶಿಕ್ಷಕರು ಅವರ ದೂರನ್ನು ನಿರ್ಲಕ್ಷಿಸಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ಬಾಲಕಿಯ ಪೋಷಕರು -
ಜೈಪುರ: ಖಾಸಗಿ ಶಾಲೆಯೊಂದರ ನಾಲ್ಕನೇ ಮಹಡಿಯಿಂದ ಹಾರಿ 9 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದೆ. ಘಟನೆ ನಡೆದ ದಿನವೂ ಸಹಪಾಠಿಗಳು ತನ್ನ ಮೇಲೆ ಕಿರುಕುಳ ನೀಡಿದ್ದಾರೆ ಎಂದು ತಮ್ಮ ಮಗಳು ಪದೇ ಪದೇ ದೂರು ನೀಡಿದ್ದರೂ ಶಿಕ್ಷಕಿಯೊಬ್ಬರು ನಿರ್ಲಕ್ಷಿಸಿದ್ದಾರೆ ಎಂದು ಪೋಷಕರು (parents) ಆರೋಪಿಸಿದ್ದಾರೆ (Crime News).
ಬಾಲಕಿ ಕನಿಷ್ಠ ನಾಲ್ಕು ಬಾರಿ ಶಿಕ್ಷಕರನ್ನು ಸಂಪರ್ಕಿಸಿ, ತನ್ನ ತರಗತಿಯ ಕೆಲವು ಹುಡುಗರಿಂದ ಕಿರುಕುಳಕ್ಕೊಳಗಾಗಿರುವುದಾಗಿ ದೂರಿದ್ದಾಳೆ. ಅಲ್ಲದೆ, ಪೋಷಕರೇ ಈ ವಿಷಯವನ್ನು ಈ ಹಿಂದೆ ಹಲವು ಬಾರಿ ಶಾಲೆಯ ಮುಂದೆ ಪ್ರಸ್ತಾಪಿಸಿದ್ದರು ಎಂದು ಅವರು ಆರೋಪಿಸಿದ್ದಾರೆ. ತರಗತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಅವಳು ಹಲವಾರು ಬಾರಿ ದೂರು ನೀಡಿದ್ದಳು. ಕೆಲವು ಹುಡುಗರು ಅವಳನ್ನು ಅಗೌರವಿಸುತ್ತಿದ್ದರು ಮತ್ತು ಅವಳ ಹೆಸರನ್ನು ಬೇರೆ ಹುಡುಗನೊಂದಿಗೆ ಹೆಸರಿಸಿ ಕೀಟಲೆ ಮಾಡುತ್ತಿದ್ದರು. ಈ ವಿಷಯದ ಬಗ್ಗೆ ನಾನು ಶಿಕ್ಷಕಿಯನ್ನು ಸಂಪರ್ಕಿಸಿದ್ದೆ. ಆದರೆ, ಅವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಮೃತ ಬಾಲಕಿಯ ತಾಯಿ ಶಿವಾನಿ ತಿಳಿಸಿದರು.
ನವೆಂಬರ್ 1 ರಂದು, ಒಂಭತ್ತು ವರ್ಷದ ಅಮಯ್ರಾ ಸುಮಾರು 48 ಅಡಿ ಎತ್ತರದ ನೀರಜಾ ಮೋದಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ ಮೃತಪಟ್ಟಿದ್ದಳು. ಸಂತೋಷ ಮತ್ತು ಪ್ರಕಾಶಮಾನವಾಗಿದ್ದ ಮಗುವಿಗೆ ಕಲ್ಪನೆಗೂ ಮೀರಿದ ಘಟನೆ ನಡೆಯಿತು ಎಂದು ಪೋಷಕರು ದುಃಖಿಸಿದ್ದಾರೆ. ಅವಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿಗೆ ತಲುಪುವಾಗಲೇ ಅವಳು ಮೃತಪಟ್ಟಿದ್ದಾಳೆಂದು ಘೋಷಿಸಲಾಯಿತು. ಈ ದುರಂತ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆ ಕೆಳಕ್ಕೆ ಹಾರುತ್ತಿರುವು ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Wall Collapse: ಸಿಮೆಂಟ್ ಮಿಕ್ಸರ್ ಲಾರಿಯಿಂದಾಗಿ ಗೋಡೆ ಕುಸಿತ; ಮನೆಯಲ್ಲಿ ಆಟವಾಡುತ್ತಿದ್ದ 1 ವರ್ಷದ ಮಗು ಸಾವು
ವಿಡಿಯೊ ವೀಕ್ಷಿಸಿ:
⚠️Hindus kids are systematically ki!!ed by the whole system in India😡
— Bhakt Prahlad🚩 (@RakeshKishore_l) November 2, 2025
A 9-year-old girl died on Saturday afternoon after allegedly jumping off the fourth floor of Neerja Modi School in Jaipur💔
However, when officers reached the school, they found that the area where the girl… pic.twitter.com/SBn6TSR0XL
ಕಳೆದ ವರ್ಷ ಕೆಲ ಮಕ್ಕಳು ಬಾಲಕಿಯನ್ನು ತೀವ್ರವಾಗಿ ಬೆದರಿಸುತ್ತದ್ದರು. ಈ ವರ್ಷವೂ ಅದೇ ಗುಂಪಿನ ವಿದ್ಯಾರ್ಥಿಗಳು ತಮ್ಮ ವಿಭಾಗದಲ್ಲಿ ಉಳಿದಿದ್ದರಿಂದ ಅದು ಮುಂದುವರೆದಿದೆ. ಕಳೆದ ವರ್ಷವೂ ನಾನು ಒಂದು ಅಥವಾ ಎರಡು ಬಾರಿ ದೂರು ನೀಡಿದ್ದೆ. ತರಗತಿಯೊಳಗೆ ಅಮಯ್ರಾಗೆ ಏನಾಗುತ್ತಿದೆ ಎಂದು ನಾನು ಪ್ರಾಂಶುಪಾಲರಾದ ಇಂದು ಮೇಡಂ ಅವರಿಗೂ ಹೇಳಿದ್ದೆ ಎಂದು ಮೃತ ಬಾಲಕಿಯ ತಾಯಿ ಹೇಳಿದರು.
ಘಟನೆಯ ನಂತರ ಪೋಷಕರು ಮಧ್ಯಪ್ರವೇಶಿಸಿದಾಗ, ಬಾಲಕನೊಬ್ಬ ಅಮಯ್ರಾಳ ಬಳಿ ಕ್ಷಮೆಯಾಚಿಸಿದ್ದ ಹಿಂದಿನ ಘಟನೆಯನ್ನು ಪೋಷಕರು ನೆನಪಿಸಿಕೊಂಡರು. ಶಿಕ್ಷಕರಿಗೆ ತಿಳಿದಿದ್ದರೂ ಕೂಡ ಕಿರುಕುಳ ಮುಂದುವರೆದಿದೆ ಎಂದು ಆಕೆಯ ತಂದೆ ವಿಜಯ್ ಹೇಳಿದ್ದಾರೆ. ಪೋಷಕ-ಶಿಕ್ಷಕರ ಸಭೆಯಲ್ಲಿ, ಒಬ್ಬ ಹುಡುಗ ಅವಳಿಗೆ ಸಿಗ್ನಲ್ ಮಾಡುವುದನ್ನು ನಾನು ನೋಡಿದೆ. ನಾನು ಅವಳ ತರಗತಿ ಶಿಕ್ಷಕರೊಂದಿಗೆ ಮಾತನಾಡಿದೆ ಮತ್ತು ಆ ಹುಡುಗ ಏಕೆ ಸಿಗ್ನಲ್ ಮಾಡುತ್ತಿದ್ದಾನೆ ಎಂದು ಕೇಳಿದೆ. ಇದು ಸಹ-ಶಿಕ್ಷಣ ಶಾಲೆ ಎಂದು ಅಮಯ್ರಾ ಅರ್ಥಮಾಡಿಕೊಳ್ಳಬೇಕು ಎಂದು ಶಿಕ್ಷಕರು ಉತ್ತರಿಸಿದರು ಎಂದು ಅವರು ಹೇಳಿದ್ದಾಗಿ ಬಾಲಕಿಯ ತಂದೆ ದೂರಿದ್ದಾರೆ.
ಘಟನೆ ನಡೆದ ದಿನ ಅಮಯ್ರಾ ತನ್ನ ಶಿಕ್ಷಕಿಯ ಬಳಿ ಪದೇ ಪದೇ ಬರುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ ಎಂದು ಆಕೆಯ ಚಿಕ್ಕಪ್ಪ ಸಾಹಿಲ್ ಹೇಳಿದ್ದಾರೆ. ಕೆಲವು ಹುಡುಗರು ಆಕೆಯನ್ನು ಬೆದರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಘಟನೆಗೆ ಸುಮಾರು ಒಂದು ಗಂಟೆ ಮೊದಲು, ಪೊಲೀಸರು ನಮಗೆ ತೋರಿಸಿದ ದೃಶ್ಯಗಳಲ್ಲಿ, ಅಮಯ್ರಾ ತನ್ನ ಆಸನದಿಂದ ನಾಲ್ಕೈದು ಬಾರಿ ಎದ್ದು, ತನ್ನ ತರಗತಿ ಶಿಕ್ಷಕರ ಬಳಿಗೆ ಹೋಗಿ, ಏನೋ ಹೇಳಿ ಹಿಂತಿರುಗಿದಳು. ಆಕೆ ಪದೇ ಪದೇ ದೂರು ನೀಡುತ್ತಿದ್ದಳು ಎಂಬುದು ಸ್ಪಷ್ಟವಾಗಿದೆ. ಆಕೆಯ ಸಹಪಾಠಿ ಕೂಡ ಇತರ ಮಕ್ಕಳು ತನಗೆ ತೊಂದರೆ ನೀಡುತ್ತಿದ್ದಾರೆ ಎಂದು ಶಿಕ್ಷಕರಿಗೆ ಹೇಳುತ್ತಿರುವುದಾಗಿ ದೃಢಪಡಿಸಿದ್ದಾರೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Self Harming: ಯುವ ವೈದ್ಯೆ ಆತ್ಮಹತ್ಯೆ, ಅಂಗೈಯ ಡೆತ್‌ನೋಟ್‌ನಲ್ಲಿತ್ತು ಆತ್ಮಹತ್ಯೆಯ ರಹಸ್ಯ
ಈ ದೃಶ್ಯಾವಳಿಯಲ್ಲಿ ಆಕೆಯ ಮುಂದೆ ಕುಳಿತಿದ್ದ ವಿದ್ಯಾರ್ಥಿಗಳು ಹಿಂದೆ ತಿರುಗಿ ಆಕೆಯನ್ನು ಕೀಟಲೆ ಮಾಡುವುದನ್ನು ಸಹ ತೋರಿಸಲಾಗಿದೆ ಎಂದು ಚಿಕ್ಕಪ್ಪ ಹೇಳಿದರು. ಅಮಯ್ರಾ ಎರಡು ಬಾರಿ ತನ್ನ ಬಳಿಗೆ ಬಂದಿದ್ದಾಳೆಂದು ಶಿಕ್ಷಕಿ ಒಪ್ಪಿಕೊಂಡರು. ಒಮ್ಮೆ ವಿದ್ಯಾರ್ಥಿಗಳು ಕೆಟ್ಟ ಪದಗಳನ್ನು ಬಳಸುತ್ತಿದ್ದಾರೆ ಎಂದು, ಮತ್ತೊಮ್ಮೆ ಅವರು ನನ್ನ ಅಧ್ಯಯನಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದ್ದಳು ಎಂದು ಹೇಳಿದರು. ಇದನ್ನು ಸರಿ ಮಾಡಬೇಕಾಗ ಶಿಕ್ಷಕಿ ಮಾತ್ರ ಆಕೆಗೆ ತರಗತಿಯಲ್ಲಿ ಹೋಗಿ ಕುಳಿತುಕೊಳ್ಳುವಂತೆ ತಿಳಿಸಿದ್ದಾರೆ.
ಇನ್ನು ಪೊಲೀಸ್ ತನಿಖೆ ಬಗ್ಗೆ ಕುಟುಂಬ ಅತೃಪ್ತವಾಗಿದ್ದು, ಘಟನೆಯನ್ನು ಮುಚ್ಚಿಡಲಾಗುತ್ತಿದೆ ಎಂದು ಆರೋಪಿಸಿದೆ. ಶಾಲೆಯು ಪ್ರಭಾವಶಾಲಿಯಾಗಿದೆ. ಅದಕ್ಕಾಗಿಯೇ ಪ್ರಕರಣವು ತುಂಬಾ ನಿಧಾನವಾಗಿ ಸಾಗುತ್ತಿದೆ. ಪೊಲೀಸರು ಆ 20 ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸರಿಯಾಗಿ ಪ್ರಶ್ನಿಸಿದರೆ, ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಕುಟುಂಬ ತಿಳಿಸಿದೆ.
ಘಟನೆ ನಡೆದು ಸುಮಾರು ಒಂದು ವಾರ ಕಳೆದರೂ ಶಾಲಾ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಪೊಲೀಸ್ ಮೂಲಗಳ ಪ್ರಕಾರ, ಬಾಲಕಿ ಬಿದ್ದ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದ್ದು, ರಕ್ತದ ಕಲೆಗಳು ಗೋಚರಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಮಯ್ರಾ ಸಾವು ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿ ಕುಟುಂಬವು ಶಾಲಾ ಆಡಳಿತದ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಶಾಲಾ ಆವರಣದಲ್ಲಿ ಇಂತಹ ಘಟನೆ ಹೇಗೆ ಸಂಭವಿಸಬಹುದು ಎಂದು ಅವರು ಪ್ರಶ್ನಿಸಿದ್ದಾರೆ. ಹಾಗೆಯೇ ಬೋಧನಾ ಸಿಬ್ಬಂದಿಯ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಪೋಷಕರ ಸಂಘವು ಶಾಲಾ ಆಡಳಿತ ಸಾಕ್ಷ್ಯಗಳನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದೆ. ನ್ಯಾಯಯುತ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.