ದೆಹಲಿ, ಫೆ. 1: ವಂದೇ ಭಾರತ್ ಪ್ರಯಾಣವು ಇತರ ರೈಲು ಸೇವೆಗಳಿಗಿಂತ ಸುಮಾರು ಶೇ. 30-40ರಷ್ಟು ದುಬಾರಿ. ಇದು ಐಷಾರಾಮಿ ಸೌಲಭ್ಯಗಳನ್ನು ಕೂಡ ಹೊಂದಿದೆ. ಸದ್ಯ ವಂದೇ ಭಾರತ್ ರೈಲಿನಲ್ಲಿ ಮಗುವಿಗಾಗಿ 1,500 ರುಪಾಯಿ ನೀಡಿ ಸೀಟು ಬುಕ್ ಮಾಡಿರುವ ದೃಶ್ಯ (Viral Video) ಟೀಕೆಗೆ ಗುರಿಯಾಗಿದೆ. ಮಗುವಿಗೆ ಕಾಯ್ದಿರಿಸಿದ ಸೀಟಿನಲ್ಲಿ ಮಗುವಿನ ಬದಲು ಚಪ್ಪಲಿ ಕಂಡು ಬಂದಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯೊಬ್ಬರು ತನ್ನ ಪತಿ ಮತ್ತು ಮಗುವಿನೊಂದಿಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಲು ಒಟ್ಟು ಮೂರು ಸೀಟ್‌ಗಳನ್ನು ಬುಕ್ ಮಾಡಿದ್ದರು. ಟಿಕೆಟ್‌ಗೆ ಸುಮಾರು 1,500–1,700 ರೂ.ಗಳನ್ನು ಪಾವತಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಅವರ ಪುಟ್ಟ ಮಗು ಸೀಟಿನಲ್ಲಿ ಕುಳಿತುಕೊಳ್ಳದೆ ತಂದೆಯ ಮಡಿಲಲ್ಲಿ ಕುಳಿತಿತ್ತು. ಮಗುವಿನ ಚಪ್ಪಲಿ ಮಾತ್ರ ಆ ಸೀಟಿನಲ್ಲಿ ಕಂಡು ಬಂದಿದ್ದು ಮಹಿಳೆ ತಮಾಷೆಯಾಗಿ ಈ ಬಗ್ಗೆ ವಿಡಿಯೊ ಶೇರ್ ಮಾಡಿದ್ದಾರೆ.
ವಿಡಿಯೊ ನೋಡಿ:
ಚಪ್ಪಲಿ ತೋರಿಸುತ್ತಾ, 100 ರೂ.ಗಳ ಚಪ್ಪಲಿ ಪ್ರೀಮಿಯಂ ಸೀಟನ್ನು ಆನಂದಿಸುತ್ತಿದೆ. ಆದರೆ ನನ್ನ ಮಗು ಮಾತ್ರ ಅಪ್ಪನ ಮಡಿಲಲ್ಲಿ ಕುಳಿತಿದೆ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ. ಈ ವಿಡಿಯೊ ಹಾಸ್ಯದಿಂದ ಕೂಡಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೊ14,000 ವೀಕ್ಷಣೆ ಗಳಿಸಿದ್ದು ಟೀಕೆಗಳು ಬಂದಿವೆ.
ಕ್ಯೂಟ್ ಮಕ್ಕಳ ಗಂಭೀರ ಚರ್ಚೆ; ಇದು ಶಾಲೆಯ ಕ್ಯಾಬಿನೆಟ್ ಮೀಟಿಂಗ್ ಎಂದ ನೆಟ್ಟಿಗರು!
ನೆಟ್ಟಗರೊಬ್ಬರು ʼʼಇದು ಮೂರ್ಖತನದ ವಿಷಯ. ಮಗು 5 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದರೂ ಸೀಟಿನಲ್ಲಿ ಕುಳಿತುಕೊಳ್ಳಲು ಯಾರಾದರೂ ಒತ್ತಾಯಿಸಿದ್ದೀರಾ?ʼʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ʼʼಅನೇಕರು ರೈಲಿನಲ್ಲಿ ಟಿಕೆಟ್ ಸಿಗದೆ ಪರದಾಡುತ್ತಿರುವಾಗ, ಹಣ ಇದೆ ಎಂಬ ಕಾರಣಕ್ಕೆ ಸೀಟಿನ ಮೇಲೆ ಚಪ್ಪಲಿ ಇಟ್ಟು ಅಹಂಕಾರ ತೋರಿಸಿದ್ದಾರೆʼʼ ಎಂದು ಮಹಿಳೆಯ ವಿರುದ್ಧ ಬರೆದುಕೊಂಡಿದ್ದಾರೆ.