ತಲೆಯ ಮೇಲೆ ಇಟ್ಟಿಗೆ ಹೊತ್ತು ಡ್ಯಾನ್ಸ್: ಕಾರ್ಮಿಕ ಮಹಿಳೆಯ ಕೌಶಲ್ಯಕ್ಕೆ ನೆಟ್ಟಿಗರು ಫಿದಾ
Viral Video: ಮಹಿಳಾ ಕಾರ್ಮಿಕರೊಬ್ಬರು ಶ್ರಮ ವಹಿಸಿ ದುಡಿಯುತ್ತಿದ್ದರೂ ತನ್ನಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ತಲೆಯ ಮೇಲೆ ಇಟ್ಟಿಗೆಗಳನ್ನು ಸಮತೋಲನಗೊಳಿಸುತ್ತ ಮಹಿಳೆ ಅದ್ಭುತ ನೃತ್ಯ ಮಾಡಿದ್ದಾರೆ. ಅವರು ವೇಗವಾಗಿ ನೃತ್ಯ ಮಾಡಿದ್ದರೂ ತಲೆಯ ಮೇಲಿರುವ ಇಟ್ಟಿಗೆಗಳು ಅಲುಗಾಡದೆ ತಟಸ್ಥವಾಗಿದ್ದವು.
ತಲೆಯ ಮೇಲೆ ಇಟ್ಟಿಗೆ ಹೊತ್ತು ಡ್ಯಾನ್ಸ್ ಮಾಡಿದ ಮಹಿಳೆ -
ನವದೆಹಲಿ, ಮಾ. 20: ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ದೃಶ್ಯವೊಂದು ವೈರಲ್ (Viral Video) ಆಗಿದೆ. ಮಹಿಳಾ ಕಾರ್ಮಿಕರೊಬ್ಬರು ಶ್ರಮ ವಹಿಸಿ ದುಡಿಯುತ್ತಿದ್ದರೂ ತನ್ನಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ತಲೆಯ ಮೇಲೆ ಇಟ್ಟಿಗೆಗಳನ್ನು ಸಮತೋಲನಗೊಳಿಸುತ್ತ ಮಹಿಳೆ ಅದ್ಭುತ ನೃತ್ಯ ಮಾಡಿದ್ದಾರೆ. ಅವರು ವೇಗವಾಗಿ ಡ್ಯಾನ್ಸ್ ಮಾಡಿದ್ದರೂ ಅವರ ತಲೆಯ ಮೇಲಿರುವ ಇಟ್ಟಿಗೆಗಳು ಅಲುಗಾಡದೆ ತಟಸ್ಥವಾಗಿದ್ದವು.
ಖ್ಯಾತ ಗಾಯಕಿ ಫಲ್ಗುಣಿ ಪಾಠಕ್ ಅವರ 'ಸಾವನ್ ಮೇ' ಹಾಡಿಗೆ ಮಹಿಳೆ ನೃತ್ಯ ಮಾಡಿದ್ದಾರೆ. ಈ ಡ್ಯಾನ್ಸ್‌ಗೆ ನೋಡುಗರು ಫಿದಾ ಆಗಿದ್ದಾರೆ. ಹಾಡು ಪ್ಲೇ ಆಗುತ್ತಿದ್ದಂತೆ ಮಹಿಳೆಯೂ ಸರಾಗವಾಗಿ ನೃತ್ಯ ಮಾಡಿದ್ದಾರೆ. ಅವರು ಇಟ್ಟಿಗೆಗಳನ್ನು ಮುಟ್ಟದೆಯೇ ಸುಲಭವಾಗಿ ಡ್ಯಾನ್ಸ್ ಮಾಡಿದ್ದಾರೆ.
ವಿಡಿಯೊ ನೋಡಿ:
ಸಾಮಾನ್ಯವಾಗಿ ಪುಸ್ತಕ ಅಥವಾ ಸಣ್ಣ ವಸ್ತುಗಳನ್ನು ತಲೆಯ ಮೇಲಿಟ್ಟು ನೃತ್ಯ ಮಾಡುತ್ತಾರೆ. ಆದರೆ ಸಬಿತಾ ಯಾದವ್ ಎಂಬ ಕಾರ್ಮಿಕ ಮಹಿಳೆಯೂ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಇಟ್ಟಿಗೆಯನ್ನು ಹೊತ್ತುಕೊಂಡು ಡ್ಯಾನ್ಸ್ ಮಾಡುತ್ತ ಬ್ಯಾಲೆನ್ಸ್ ಮಾಡಿದ್ದಾರೆ. ಈ ವಿಡಿಯೊ ಸುಮಾರು ಒಂಬತ್ತು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಅವರು ವೇಗವಾಗಿ ಡ್ಯಾನ್ಸ್ ಮಾಡಿದರೂ ತಲೆಯ ಮೇಲಿರುವ ಇಟ್ಟಿಗೆಗಳು ಸ್ವಲ್ಪವೂ ಅಲುಗಾಡಿಲ್ಲ.
ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ
ಶ್ರಮದ ಕೆಲಸದ ನಡುವೆಯೂ ಅವರ ಮುಖದಲ್ಲಿದ್ದ ನಗು ಕಡಿಮೆಯಾಗಿರಲಿಲ್ಲ. ಹೆಚ್ಚಿನವರು ಮಹಿಳೆಯ ಕೌಶಲ್ಯಕ್ಕೆ ಫಿದಾ ಆಗಿದ್ದಾರೆ. ಒಬ್ಬರು, “ಆ ನಗು ಅದ್ಭುತ. ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼನಿಜವಾದ ಪ್ರತಿಭೆʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಫಲ್ಗುಣಿ ಪಾಠಕ್ ಸ್ವತಃ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.